ಕೋವಿಡ್​ ವಿರೋಧಿ ಲಸಿಕೆ ಕೊವಾವ್ಯಾಕ್ಸ್​, ಕಾರ್ಬೆವ್ಯಾಕ್ಸ್ ತುರ್ತು ಬಳಕೆಗೆ ಕೇಂದ್ರದಿಂದ ಅನುಮೋದನೆ

ನವದೆಹಲಿ: ದೇಶದಲ್ಲಿನ ಕೋವಿಡ್​ ವಿರುದ್ಧದ ಹೋರಾಟಕ್ಕೆ ಇದೀಗ ಮತ್ತೆರಡು ಲಸಿಕೆಗಳು ಲಭ್ಯವಾಗಲಿದೆ.ಮತ್ತೆರಡು ಹೊಸ ಕೊರೊನಾ ಲಸಿಕೆಗಳ ತುರ್ತು ಬಳಕೆಗೆ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಅಧೀನದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಅನುಮೋದನೆ ನೀಡಿದೆ.
ಕೊವಾವ್ಯಾಕ್ಸ್​ ಹಾಗೂ ಕಾರ್ಬೆವ್ಯಾಕ್ಸ್​ ಕೋವಿಡ್‌ ವಿರುದ್ಧದ ಲಸಿಕೆಗಳ ತುರತು ಬಳಕೆಗೆ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಅನುಮೋದನೆ ನೀಡಿದೆ. ಜೊತೆಗೆ ಆ್ಯಂಟಿ ವೈರಲ್​ ಡ್ರಗ್​ ಮೊಲ್ನುಪಿರವಿರ್​ಗೂ ಕೇಂದ್ರ ಆರೋಗ್ಯ ಸಚಿವಾಲಯ ಹಸಿರು ನಿಶಾನೆ ತೋರಿದೆ. 18 ವರ್ಷ ಮೇಲ್ಪಟ್ಟ ವಯಸ್ಕರಿಗೆ ಈ ಲಸಿಕೆಗಳು ಹಾಗೂ ಔಷಧವನ್ನು ಬಳಕೆ ಮಾಡಬಹುದುಎಂದು ತಿಳಿಸಿದೆ.
ಈ ಕುರಿತು ಟ್ವೀಟ್​ ಮಾಡಿರುವ ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ ಅವರು, ಕೋವಿಡ್​-19 ವಿರುದ್ಧದ ಭಾರತದ ಹೋರಾಟಕ್ಕೆ ಇನ್ನಷ್ಟು ಬಲ ನೀಡುವ ಸಲುವಾಗಿ ಸಿಡಿಎಸ್​ಸಿಓ ಒಂದೇ ದಿನದಲ್ಲಿ ಮೂರು ಅನುಮೋದನೆಗಳನ್ನು ನೀಡಿದೆ. ಕಾರ್ಬೆವ್ಯಾಕ್ಸ್​ ಲಸಿಕೆ, ಕೊವಾವ್ಯಾಕ್ಸ್​ ಲಸಿಕೆ ಹಾಗೂ ಆ್ಯಂಟಿ ವೈರಲ್​ ಡ್ರಗ್​ ಮಾಲ್ನುಪಿರವಿರ್​​ಗಳನ್ನು ತುರ್ತು ಪರಿಸ್ಥಿತಿಗಳಲ್ಲಿ ನಿರ್ಬಂಧಿತ ಬಳಕೆಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈಗ ಎರಡು ಲಸಿಕೆಗಳಿಗೆ ಅನುಮೋದನೆ ನೀಡುವ ಮೂಲಕ ದೇಶದಲ್ಲಿ ಒಟ್ಟು 8 ಕೊರೊನಾ ಲಸಿಕೆಗಳಿಗೆ ತುರ್ತು ಅನುಮೋದನೆ ನೀಡಿದಂತಾಗಿದೆ. ಸೀರಂ ಇನ್​ಸ್ಟಿಟ್ಯೂಟ್​​ನ ಕೋವಿಶೀಲ್ಡ್​, ಭಾರತ್​ ಬಯೋಟೆಕ್​ನ ಕೊವ್ಯಾಕ್ಸಿನ್​, ರಷ್ಯಾದ ಸ್ಪುಟ್ನಿಕ್​ ವಿ, ಅಮೆರಿಕದ ಮಾಡೆರ್ನಾ, ಜಾನ್ಸ್​ನ್​ & ಜಾನ್ಸನ್​ ಕೊರೊನಾ ಲಸಿಕೆ ಹಾಗೂ ಜೈಡಸ್​​​ ಕ್ಯಾಡಿಲಾದ ZyCoV-D ಲಸಿಕೆಗಳಿಗೆ ಈ ಹಿಂದೆಯೇ ಅನುಮೋದನೆ ನೀಡಲಾಗಿದೆ. ಈಗ ಕೊವಾವ್ಯಾಕ್ಸ್​ ಹಾಗೂ ಕಾರ್ಬೆವ್ಯಾಕ್ಸ್​ ಕೂಡ ಸೇರ್ಪಡೆಯಾಗಿದೆ.

ಪ್ರಮುಖ ಸುದ್ದಿ :-   ಮೊಬೈಲ್ ನಲ್ಲಿ ಹುಡುಗರ ಜೊತೆ ಹರಟೆ ಬೇಡ ಅಂದಿದ್ದಕ್ಕೆ ಅಣ್ಣನನ್ನೇ ಕೊಡಲಿಯಿಂದ ಹೊಡೆದು ಕೊಂದ 14 ವರ್ಷದ ಬಾಲಕಿ...!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement