ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಸ್ಥಾನದಿಂದ ಮುಕ್ತನಾಗಿದ್ದೇನೆ ಎಂದು ತಿಳಿಸಿದ ಅನಂತ ಅಶೀಸರ

ಶಿರಸಿ : ಕಳೆದ ಎರಡು ವರ್ಷಗಳಿಂದ ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅನಂತ ಹೆಗಡೆ ಅಶೀಸರ ತಮ್ಮ ಸ್ಥಾನದಿಂದ ಮುಕ್ತನಾಗಿದ್ದೇನೆ ಎಂದು ಹೇಳಿದ್ದಾರೆ.
ಡಿಸೆಂಬರ್ ೨೦೨೧ ರ ಅಂತ್ಯಕ್ಕೆ ಎರಡು ವರ್ಷಗಳ ಅವಧಿ ಮುಕ್ತಾಯಗೊಂಡ ಕಾರಣ ತಮ್ಮ ಅಧ್ಯಕ್ಷ ಜವಾಬ್ದಾರಿಯಿಂದ ಮುಕ್ತರಾಗುವುದಾಗಿ ಅವರು ಡಿಸೆಂಬರ್‌ ೨೮ ಕ್ಕೆ ಸಲ್ಲಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಂಡಳಿಯ ಅಧಿಕಾರಿಗಳು ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.  ರಾಜ್ಯದ ನಿಗಮ ಮಂಡಳಿಗಳಲ್ಲಿ ಕೆಲವಷ್ಟನ್ನು ಹೊಸಬರಿಗೆ ನೀಡುವ ಸಾಧ್ಯತೆಯಿದೆ.
ಅಶೀಸರ ಅವರ  ತೆರವಾರ ಸ್ಥಾನದಲ್ಲಿ ಮತ್ತೆ ಅವರೇ ಮುಂದುವರಿಯುತ್ತಾರೆಯೋ ಅಥವಾ  ಜಿಲ್ಲೆಯ ಹೊಸಬರಿಗೆ ಸಿಗುವ ಅವಕಾಶವೋ ಎಂಬುದು ಗೊತ್ತಾಗಬೇಕಿದೆ. ಪಕ್ಷದಲ್ಲಿ ಅಶೀಸರ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ಅವರಿಗೆ ಜೀವ ವೈವಿಧ್ಯ ಮಂಡಳಿಯಲ್ಲೇ ಮುಂದುವರಿಯುತ್ತಾರೋ ಅಥವಾ ಬೇರೆ ನಿಗಮ ಮಂಡಳಿ ನೀಡುತ್ತಾರೆಯೇ ಎಂಬ ಕುತೂಹಲವೂ ಇದೆ,
ಬಿಜೆಪಿಯಿಂದ ಅನೇಕರು ವಿಧಾನ ಪರಿಷತ್ ಗೆ ಅಭ್ಯರ್ಥಿಯಾಗಲು ಆಕಾಂಕ್ಷಿಗಳಾಗಿದ್ದರು. ಆದರೆ ಎಲ್ಲರನ್ನೂ ಸಮಾಧಾನ ಪಡಿಸಿ ಉಳ್ವೇಕರ್ ಅವರಿಗೆ ಟಿಕೆಟ್‌ ನೀಡಿ ಗೆಲುವು ಸಾಧಿಸಿದ್ದರು. ಆ ಸಂದರ್ಭದಲ್ಲಿ ಹಲವರಿಗೆ ನಿಗಮ ಮಂಡಳಿಯ ಭರವಸೆ ನೀಡಲಾಗಿತ್ತು ಎನ್ನಲಾಗಿದೆ. ನಿಗಮ ಮಂಡಳಿ  ಅಧ್ಯಕ್ಷ ಸ್ಥಾನ ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಕೆಳಗಿನ ಪ್ರದೇಶದವರಿಗೆ ನೀಡಬೇಕು ಎಂಬ  ಮಾತುಗಳೂ ಇವೆ. ಘಟ್ಟದ ಮೇಲೆ ಈಗಾಗಲೇ ವಿ ಉಸ್ತುವಾರಿ ಸಚಿವ ಹೆಬ್ಬಾರ್ ಹಾಗೂ ವಿಧಾನಸಭಾಧ್ಯಕ್ಷ ಕಾಗೇರಿ, ಸಂಸದ ಅನಂತ ಹೆಗಡೆ ಎಲ್ಲರೂ ಘಟ್ಟದ ಮೇಲಿನವರಾಗಿದ್ದಾರೆ. ಆದ ಕಾರಣ ಜಿಲ್ಲೆಯ ಕರಾವಳಿ ಭಾಗಕ್ಕೆ ಪ್ರಾಶಸ್ತ್ಯ ನೀಡಬೇಕು ಎಂಬ ಒತ್ತಾಯಗಳೂ ಇವೆ.

ಪ್ರಮುಖ ಸುದ್ದಿ :-   ಸಿಖ್‌ ಪವಿತ್ರ ಗ್ರಂಥದ ಕೆಲ ಪುಟ ಹರಿದು ಹಾಕಿದ ಆರೋಪ : ಯುವಕನನ್ನು ಬಡಿದುಕೊಂದ ಭಕ್ತರು

 

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement