ಕುಮಟಾ: ನಾಗೇಶ ಭಟ್ಟರ ಮುಕ್ತಾಯ ಕಥಾಸಂಕಲನ ಲೋಕಾರ್ಪಣೆ

ಕುಮಟಾ: ಭಾರತೀಯ ದೂರ ಸಂಚಾರ ನಿಗಮ(ಬಿಎಸ್ಎನ್ಎಲ್)ದ ನಿವೃತ್ತ ಉದ್ಯೋಗಿಗಳಾದ ನಾಗೇಶ ಭಟ್ಟ ಅವರು ಬರೆದ ‘ಮುಕ್ತಾಯ’ ಕಥಾಸಂಕಲನ ಲೋಕಾರ್ಪಣೆಗೊಂಡಿತು. ಇದು ಹತ್ತು ಚಿಕ್ಕ ಕಥೆಗಳ ಸಂಕಲನವಾಗಿದೆ.
ಖ್ಯಾತ ಸಾಹಿತಿ ಶ್ರೀಧರ ಬಳಿಗಾರ ಅವರು ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು. ಹೊನ್ನಾವರದ ನಾಗರಿಕ ಪತ್ರಿಕೆಯ ಸಂಪಾದಕ ಹಾಗೂ ಸರಸ್ವತಿ ಪ್ರಕಾಶನದ ಪ್ರಕಾಶಕ ಕೃಷ್ಣಮೂರ್ತಿ ಹೆಬ್ಬಾರರು ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಗಜಾನನ ಹೆಗಡೆ
ಹಡಿನಬಾಳು ಕೃತಿ ಪರಿಚಯ ಮಾಡಿದರು.

ಕುಮಟಾ ಯಕ್ಷಗಾನ ಸಂಶೋಧನಾ ಕೇಂದ್ರದ ಮುಖ್ಯಸ್ಥ ಜಿ.ಎಲ್.ಹೆಗಡೆ ಹಾಗೂ ಹಿರಿಯ ಕವಿ ಟಿ.ಜಿ.ಭಟ್ ಹಾಸಣಗಿಯವರೂ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಲೇಖಕ ಹಾಗೂ ಕೃತಿಯ ಬಗ್ಗೆ ಮಾತನಾಡಿದರು .
ಲೇಖಕರು ತಮ್ಮ ಅನುಭವ ಹಾಗೂ ಕಥಾವಸ್ತುವಿನ ಕುರಿತು ಮಾತನಾಡಿದರು. ನಂತರ ಕಾವ್ಯ ಸಂಚಲನದವತಿಯಿಂದ ಕಥೆಗಾರ ನಾಗೇಶ ಭಟ್ ದಂಪತಿಯನ್ನು ಸತ್ಕರಿಸಲಾಯಿತು.
ಚಂದ್ರಶೇಖರ ಉಪಾಧ್ಯಾಯ ಅವರು ಸ್ವಾಗತಿಸಿದರು. ರವಿಂದ್ರ ಭಟ್ ಸೂರಿ ಕಾರ್ಯಕ್ರಮ ನಿರ್ವಹಿಸಿದರು. ಆರ್. ಎಂ. ಹೆಗಡೆ ವಂದಿಸಿದರು. ಮುಕ್ತಾಯ ಕಥಾಸಂಕಲನ ಸರಸ್ವತಿ ಪ್ರಕಾಶನ, ಕರ್ಕಿ ಪ್ರಕಟಿಸಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ