ಹುಷಾರ್‌.. ಆ್ಯಂಡ್ರಾಯ್ಡ್ ಅಪ್ಲಿಕೇಶನ್ “ಕಲರ್‌ ಮೆಸೇಜ್‌”ನಲ್ಲಿ ಜೋಕರ್ ವೈರಸ್ ಇರಬಹುದು…

ಆ್ಯಂಡ್ರಾಯ್ಡ್ ಫೋನ್ ಬಳಕೆದಾರರಾಗಿದ್ದರೆ ನಿಮಗೆ ಗೊತ್ತಿರಬಹುದು, ಯಾವುದೇ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಬಯಸಿದರೆ, ಗೂಗಲ್ ಪ್ಲೇ ಸ್ಟೋರ್ ಮೂಲಕ ಅದನ್ನು ಸುಲಭವಾಗಿ ಡೌನ್ಲೋಡ್ ಮಾಡಬಹುದು. ಆದಾಗ್ಯೂ, ಪ್ಲೇ ಸ್ಟೋರ್ನಲ್ಲಿನ ಪ್ರತಿಯೊಂದು ಆಂಡ್ರಾಯ್ಡ್ ಅಪ್ಲಿಕೇಶನ್ ಸೆಕ್ಯೂರ್ ಆಗಿಲ್ಲ ಎಂಬುದು ಗೊತ್ತಿರಲೇಬೇಕು. ಫೋನ್‌ನಲ್ಲಿ ಸುರಕ್ಷಿತವಲ್ಲದ ಅಪ್ಲಿಕೇಶನ್‌ಗಳನ್ನು ನೀವು ಡೌನ್‌ಲೋಡ್ ಮಾಡಿದರೆ, ಡೇಟಾ ಅಳಿಸಿ ಹೋಗಬಹುದು ಅಥವಾ ಅದು ಸೆಕ್ಯೂರಿಟಿ ಸಮಸ್ಯೆ ಉಂಟುಮಾಡಬಹುದು.
ಈಗ ಆ್ಯಂಡ್ರಾಯ್ಡ್ ಅಪ್ಲಿಕೇಶನ್‌ನಲ್ಲಿ ಜೋಕರ್ ವೈರಸ್‌ (Joker Virus) ಎಂಬ ಹೊಸ ವೈರಸ್ ಪತ್ತೆಯಾಗಿದೆ. ಅದು ಈಗ ಕಲರ್ ಮೆಸೇಜ್ ಎಂಬ ಆ್ಯಪ್‌ನಲ್ಲಿ ಕಾಣಿಸಿಕೊಂಡಿದೆ. ಇದು ಜನಪ್ರಿಯ ಆ್ಯಪ್‌ ಆಗಿದ್ದು, ಈಗಾಗಲೇ ಅನೇಕರುಇದನ್ನು ಡೌನ್‌ಲೋಡ್ ಮಾಡಿದ್ದಾರೆ. ಇದನ್ನು ಯಾರಾದರೂ ಡೌನ್ಲೋಡ್ ಮಾಡಿದ್ದರೆ, ಇದನ್ನು ತಕ್ಷಣ ಡಿಲೀಟ್ ಮಾಡುವುದು ಒಳಿತು.
ಯಾಕೆಂದರೆ ಕ್ರಿಮಿನಲ್‌ಗಳು ಕಲರ್ ಮೆಸೇಜ್ ಆಪ್ ಮೂಲಕ ಡೇಟಾ ಕದಿಯುತ್ತಿದ್ದಾರೆ. “ಜೋಕರ್” ವೈರಸ್ ಹೊಸತೇನಲ್ಲ, ಇದು 2017ರಲ್ಲಿ ಪತ್ತೆಯಾಗಿತ್ತು. ಇದು ಬಹಳ ಡೇಂಜರ್ ಆಗಿದ್ದು ಸಾಕಷ್ಟು ಬಾರಿ ಬ್ಯಾನ್ ಕೂಡ ಆಗಿತ್ತು. ಇದು ವೈಯಕ್ತಿಕ ಮಾಹಿತಿಗಳನ್ನು ಕದಿಯುತ್ತದೆ. ಅಷ್ಟೇ ಅಲ್ಲದೆ, ನಿಮ್ಮ ಬ್ಯಾಂಕ್ ಅಕೌಂಟ್ ಅನ್ನು ಹ್ಯಾಕ್ ಮಾಡುತ್ತದೆ ಎನ್ನುತ್ತಾರೆ.
ಪ್ಲೇ ಸ್ಟೋರ್ ಅಥವಾ ಆ್ಯಪಲ್ ಸ್ಟೋರ್ ಮೂಲಕ ಯಾವುದೇ ಅಪ್ಲಿಕೇಶನ್ ಡೌನ್ಲೋಡ್ ಮಾಡುವಾಗ, ನಿಮ್ಮ ಪರ್ಮಿಷನ್ ಕೇಳುತ್ತದೆ. ಬಹುತೇಕ ಮಂದಿ ಎಲ್ಲಕ್ಕೂ ಓಕೆ ಕೊಡುತ್ತಾರೆ. ಇದು ಯಾವುದೇ ಕಾರಣಕ್ಕೂ ಮಾಡುವುದು ಒಳ್ಳೆಯದಲ್ಲ.

ಪ್ರಮುಖ ಸುದ್ದಿ :-   ವೀಡಿಯೊ...| ಇಂಟರ್ನೆಟ್ ನಲ್ಲಿ ಭಾರೀ ಗಮನ ಸೆಳೆದ ರೋಬೋಟ್ ನಾಯಿ ಡ್ಯಾನ್ಸ್‌ ಮಾಡುವ ವೀಡಿಯೊ

ಜೋಕರ್ ವೈರಸ್ ಡಿಲೀಟ್ ಮಾಡುವುದು ಹೇಗೆಂದರೆ…

ಹಂತ 1  ಮೊದಲು ಫೋನ್ ಸೆಟಿಂಗ್ಸ್ ಓಪನ್ ಮಾಡಿ.
ಹಂತ 2  ಅಲ್ಲಿ ಆ್ಯಪ್ ಸೆಟಿಂಗ್ಸ್ ಮೂಲಕ ಅನ್ ಇನ್ಸ್ಟಾಲ್ ಮಾಡಿ.
ಹಂತ 3  ನಂತರ ಅಲ್ಲಿ ಪೇಮೆಂಟ್ ಸ್ಟಾಪ್ ಕ್ಲಿಕ್ ಮಾಡಿ.
ಹಂತ 4:  ಮುಂದೆ, ನಿಮಗಾಗಿ ಸಿದ್ಧಪಡಿಸಿರುವ ಎಲ್ಲಾ ಜೋಕರ್ ಮಾಲ್‌ವೇರ್ ಅನ್ನು ಪರಿಶೀಲಿಸಿ.
ಹಂತ 5:  ಎಲ್ಲರಿಗೂ ಪಾವತಿಗಳನ್ನು ನಿಲ್ಲಿಸಿ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement