ಈ ಮಹಿಳೆ ಜನನ ಪ್ರಮಾಣಪತ್ರ 2-ಅಡಿ ಉದ್ದ…! ಯಾಕೆಂದರೆ ಹೆಸರಿನಲ್ಲಿದೆ 1,019 ಅಕ್ಷರಗಳು..!! ಈಗ ಗಿನ್ನಿಸ್‌ ರಿಕಾರ್ಡ್‌ಗೆ ಸೇರ್ಪಡೆ

ಅನೇಕರು ಅಧಿಕೃತ ದಾಖಲೆಗಳು ಮತ್ತು ಪ್ರಮಾಣಪತ್ರಗಳಲ್ಲಿ ತಮ್ಮ ಪೂರ್ಣ ಹೆಸರನ್ನು ಹಂಚಿಕೊಳ್ಳದಿರಲು ನಿರ್ಧರಿಸುತ್ತಾರೆ, ಅವರು ಇದು ಎಲ್ಲರಿಗೂ ಓದಲು ಸ್ವಲ್ಪ ದೀರ್ಘವಾಗಿರುತ್ತದೆ ಎಂದು ಭಾವಿಸುತ್ತಾರೆ.
ಆದರೆ ಇಲ್ಲೊಬ್ಬರು ತಮ್ಮ ಮಗಳಿಗೆ ಎಲ್ಲರೂ ಅಚ್ಚರಿ ಪಡುವಂತ ಹೆಸರಿಟ್ಟಿದ್ದಾರೆ. ಆ ಹೆಸರು ಈಗ ಇಡೀ ವಿಶ್ವದಾದ್ಯಂತ ಸುದ್ದಿಯಾಗುತ್ತಿದ್ದು, ಇದು ಜಗತ್ತಿನ ಅತೀ ಉದ್ದದ ಹೆಸರು ಎಂಬ ಖ್ಯಾತಿಯನ್ನೂ ಪಡೆದುಕೊಂಡಿದೆ. ಆ ಹೆಸರು ಕೇಳಿದರೆ ಖಂಡಿತ ನಿಮಗೂ ಅಚ್ಚರಿಯಾಗಬಹುದು.
ಉತ್ತರ ಅಮೆರಿಕದ ಟೆಕ್ಸಾಸ್ ರಾಜ್ಯದ ಹೂಸ್ಟನ್‍ನ ಜೇಮ್ಸ್ ವಿಲಿಯಮ್ಸ್ ಮತ್ತು ಸಾಂಡ್ರಾ ವಿಲಿಯಮ್ಸ್ ದಂಪತಿ ತಮ್ಮ ಮಗಳಿಗೆ ವಿಶಿಷ್ಟವಾದ ಹೆಸರನ್ನು ಇಟ್ಟಿದ್ದಾರೆ. ಆ ಹೆಸರಿನ ಜನನ ಪ್ರಮಾಣ ಪತ್ರವೇ 2 ಅಡಿ ಉದ್ದ ಇದೆ. 1,019 ಅಕ್ಷರಗಳಿರುವ ಹೆಸರನ್ನು ಆ ಮಹಿಳೆ ತನ್ನ ಮಗಳಿಗೆ ನಾಮಕರಣ ಮಾಡಿದ್ದಾರೆ. ಈಗ ಈ ಹೆಸರು ಗಿನ್ನಿಸ್‌ ರೆಕಾರ್ಡ್‌ ಸಹ ಮಾಡಿದೆ.
ಅವರ ಮಗು 12 ಸೆಪ್ಟೆಂಬರ್ 1984 ರಂದು ಜನಿಸಿತು. ಆದರೆ ಅವಳಿಗೆ ಬಹಳ ಉದ್ದವಾದ ಹೆಸರನ್ನು ನೀಡಿದ ಮೂರು ವಾರಗಳ ನಂತರ, ಸಾಂಡ್ರಾ ಮತ್ತು ಅವರ ಪತಿ ತಿದ್ದುಪಡಿಯನ್ನು ಸಲ್ಲಿಸಿದರು, ಯಾಕೆಂದರೆ ಆ ಹೆಸರು 1,019 ಅಕ್ಷರಗಳನ್ನು ಹೊಂದಿತ್ತು ಹಾಗೂ ಎರಡು ಅಡಿಗಳಷ್ಟು ಉದ್ದವಾಗಿತ್ತು. ಹೀಗಾಗಿ 36 ಅಕ್ಷರಗಳ ಮಧ್ಯದ ಹೆಸರನ್ನು ತಿದ್ದುಪಡಿಗೆ ಸಲ್ಲಿಸಲಾಯಿತು.

ಪ್ರಮುಖ ಸುದ್ದಿ :-   ಪಾಟ್ನಾ ರೈಲ್ವೆ ನಿಲ್ದಾಣದ ಸಮೀಪದ ಹೊಟೇಲ್‌ ನಲ್ಲಿ ಬೆಂಕಿ ಅವಘಡ : 6 ಮಂದಿ ಸಾವು

1,019 ಅಕ್ಷರಗಳ ಎರಡು ಅಡಿ ಉದ್ದದ ಹೆಸರು..!:
Rhoshandiatellyneshiaunneveshenkescianneshaimondrischlyndasaccarnaerenquellenendrasamecashaunettethalemeicoleshiwhalhinive’onchellecaundenesheaalausondrilynnejeanetrimyranaekuesaundrilynnezekeriakenvaunetradevonneyavondalatarneskcaevontaepreonkeinesceellaviavelzadawnefriendsettajessicannelesciajoyvaelloydietteyvettesparklenesceaundrieaquenttaekatilyaevea’shauwneoraliaevaekizzieshiyjuanewandalecciannereneitheliapreciousnesceverroneccaloveliatyronevekacarrionnehenriettaescecleonpatrarutheliacharsalynnmeokcamonaeloiesalynnecsiannemerciadellesciaustillaparissalondonveshadenequamonecaalexetiozetiaquaniaenglaundneshiafrancethosharomeshaunnehawaineakowethauandavernellchishankcarlinaaddoneillesciachristondrafawndrealaotrelleoctavionnemiariasarahtashabnequckagailenaxeteshiataharadaponsadeloriakoentescacraigneckadellanierstellavonnemyiatangoneshiadianacorvettinagodtawndrashirlenescekilokoneyasharrontannamyantoniaaquinettesequioadaurilessiaquatandamerceddiamaebellecescajamesauwnneltomecapolotyoajohnyaetheodoradilcyana Koyaanisquatsiuth Williams’ ಎಂದು ಬರೆದರು.

ಅವರ ಮಗು 12 ಸೆಪ್ಟೆಂಬರ್ 1984 ರಂದು ಜನಿಸಿತು. ಅವರು ತನ್ನ ಮಗಳಿಗೆ ಈ ಹೆಸರಿಡಲು ಸಾಂಡ್ರಾ ವಿಲಿಯಮ್ಸ್ ಅವರು ಸತತ ಒಂದು ವರ್ಷ ಯೋಚನೆ ಮಾಡಿದ್ದರಂತೆ. ಈಗ ಆಕೆಯ ಹೆಸರು ಗಿನ್ನೆಸ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್‌ ಮಾಡಿದೆ. ಸಂಬಂಧಿಕರು, ಹಲವು ದೇಶಗಳು ಮತ್ತು ನಗರಗಳು, ಸ್ನೇಹಿತರು, ಪ್ರೀತಿ ಪಾತ್ರರ ಹೆಸರುಗಳನ್ನು ಸೇರಿಸಿ ವಿಲಿಯಮ್ಸ್ ದಂಪತಿ ತಮ್ಮ ಮಗಳಿಗೆ ಹೆಸರಿಟ್ಟಿದ್ದಾರೆ. ಈಕೆ ಹೆಸರು ಉದ್ದ ಎಂಬ ಕಾರಣಕ್ಕೆ Jameshauwnnel ಅಥವಾ ಜೆಮಿ (Jamie)’ ಎಂಬ ಎರಡು ಅಡ್ಡ ಹೆಸರುಗಳಿಂದ ಸ್ನೇಹಿತರು ಅವಳನ್ನು ಕರೆಯುತ್ತಾರೆ.

ರಿಜಿಸ್ಟ್ರಾರ್‌ಗೆ ಹೆಸರು ನೋಂದಣಿ ಮಾಡುವಾಗ ಕಿರಿಕಿರಿ
ಈ ಹೆಸರನ್ನು ನೋಂದಣಿ ಮಾಡುವಾಗ ಅಧಿಕಾರಿಗಳಿಗೆ ಕಿರಿಕಿರಿ ಎನಿಸಿತ್ತು. ಇಷ್ಟು ದೊಡ್ಡದಾದ ಹೆಸರನ್ನು ಹೇಗೆ ನೋಂದಣಿ ಮಾಡುವುದು ಎಂಬುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿತ್ತು. ಈಕೆ ಹೆಸರಿನ ನಂತರ ರಾಜ್ಯ ರಿಜಿಸ್ಟ್ರಾರ್ ಡಬ್ಲ್ಯೂ.ಡಿ.ಕ್ಯಾರೊಲ್ ಅವರು, 51/8 ಇಂಚಿನ ಜಾಗದಲ್ಲಿ ಎರಡು ಟೈಪ್‍ರೈಟ್ ಲೈನ್‍ಗಳಿಗೆ ಹೊಂದಿಕೆಯಾಗದ ಯಾವುದೇ ಹೆಸರನ್ನು ಕಚೇರಿ ಸ್ವೀಕರಿಸುವುದಿಲ್ಲ ಕಟ್ಟುನಿಟ್ಟಾಗಿ ಆದೇಶ ಹೊರಡಿಸಿದ್ದರು.

ಪ್ರಮುಖ ಸುದ್ದಿ :-   'ಅಕ್ರಮ' ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ : ಮಹಾರಾಷ್ಟ್ರ ಸೈಬರ್ ಪೊಲೀಸರಿಂದ ನಟಿ ತಮನ್ನಾ ಭಾಟಿಯಾಗೆ ಸಮನ್ಸ್

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement