ಐಹೆಚ್​ಯು ರೂಪಾಂತರ.. ಫ್ರಾನ್ಸ್​ನಲ್ಲಿ ಪತ್ತೆಯಾಯ್ತು ಕೊರೊನಾದ ಮತ್ತೊಂದು ತಳಿ…! 12 ಮಂದಿಯಲ್ಲಿ ಪತ್ತೆ

ಇಡೀ ವಿಶ್ವದಲ್ಲಿ ಕೋವಿಡ್​ ಓಮಿಕ್ರಾನ್​ ರೂಪಾಂತರಿ ಈಗ ಸದ್ದು ಮಾಡುತ್ತಿರುವ ಬೆನ್ನಲ್ಲೇ ಈಗ ಮತ್ತೊಂದು ರೂಪಾಂತರ ಪತ್ತೆಯಾಗಿದೆ.
ಫ್ರೆಂಚ್​ ಸಂಶೋಧಕರು ಕ್ಯಾಮರೂನಿಯನ್​ ಮೂಲದ್ದು ಎಂದು ಶಂಕಿಸಲಾದ ಹೊಸ ಕೋವಿಡ್​ ರೂಪಾಂತರಿಯನ್ನು ಪತ್ತೆ ಮಾಡಿದ್ದು, ಈ ಹೊಸ ರೂಪಾಂತರಿಗೆ ತಾತ್ಕಾಲಿಕವಾಗಿ ಐಹೆಚ್​ಯು ಎಂದು ಹೆಸರಿಡಲಾಗಿದೆ.
B.1.640.2 ಹೆಸರಿನ ಈ ವಂಶಾವಳಿಯ ಹೊಸ ರೂಪಾಂತರವು ಈಗಾಗಲೇ 12 ಮಂದಿಗೆ ಸೋಂಕನ್ನು ತಗುಲಿಸಿದೆ ಎನ್ನಲಾಗಿದೆ. ಇದು ಓಮಿಕ್ರಾನ್​ಗಿಂತ ಹೆಚ್ಚು ಅಂದರೆ 46 ರೂಪಾಂತರಿಗಳು ಹಾಗೂ 37 ಡಿಕ್ಟೇಷನ್ (ವಿಲೋಪನ ​​ಗಳನ್ನು ಹೊಂದಿದೆ. ಆಗ್ನೇಯ ಫ್ರಾನ್ಸ್​​ನಲ್ಲಿ 12 ಕೊರೊನಾ ಪಾಸಿಟಿವ್​ ರೋಗಿಗಳಲ್ಲಿ ಮ್ಯೂಟೆಷನ್​ಗಳು ವಿಭಿನ್ನವಾಗಿ ಕಂಡು ಬಂದಿದೆ ಎಂದು ಫಿಲಿಪ್​ ಕೋಲ್ಸನ್​ ಹೇಳಿದ್ದಾರೆ.
ಹೊಸ ತಳಿ ಹೇಗೆ ವರ್ತಿಸುತ್ತದೆ. ಯಾವ ಪ್ರಮಾಣದ ಸೋಂಕು ಉಂಟು ಮಾಡುತ್ತದೆ ಮತ್ತು ಲಸಿಕೆಗಳು ಈ ಸೋಂಕಿನ ವಿರುದ್ಧ ಹೇಗೆ ಹೋರಾಡುತ್ತವೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದೂ ಸಂಶೋಧಕರು ತಿಳಿಸಿದ್ದಾರೆ.
ಈ 12 ಪ್ರಕರಣಗಳನ್ನು ಆಧಾರವಾಗಿಟ್ಟುಕೊಂಡು ಈ ಹೊಸ ರೂಪಾಂತರಿಯ ವೈರಲಾಜಿಕಲ್​, ಎಪಿಡಮಿಯೋಲಾಜಿಕಲ್​ ಅಥವಾ ವೈದ್ಯಕೀಯ ವೈಶಿಷ್ಟ್ಯಗಳ ಕುರಿತು ಈಗಲೇ ಏನನ್ನೂ ವಿಶ್ಲೇಷಿಸಲು ಸಾಧ್ಯವಿಲ್ಲ ಎಂದು ಕೋಲ್ಸನ್​ ಹೇಳಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ಆದ ವಿನಃ ಏನೂ ಹೇಳಲಾಗದು ಎಂದು ಹೇಳಿದ್ದಾರೆ.
ಅಧ್ಯಯನದ ಪ್ರಕಾರ ಈ ಹೊಸ ರೂಪಾಂತರಿಯ ಸೋಂಕಿಗೆ ಒಳಗಾದ ಮೊದಲ ರೋಗಿಯು ಲಸಿಕೆ ತೆಗೆದುಕೊಂಡವರಾಗಿದ್ದು, ಮಧ್ಯ ಆಫ್ರಿಕಾದಿಂದ ಕ್ಯಾಮರೂನ್​​ಗೆ ಪ್ರವಾಸ ಕೈಗೊಂಡು ಬಳಿಕ ಫ್ರಾನ್ಸ್​ಗೆ ಮರಳಿದ್ದರು ಎನ್ನಲಾಗಿದೆ. ಹೀಗಾಗಿ ಓಮಿಕ್ರಾನ್​​ನಂತೆಯೇ ಈ ಹೊಸ ರೂಪಾಂತರಿ ಕೂಡ ಆಫ್ರಿಕಾದ ಜೊತೆ ಸಂಬಂಧ ಹೊಂದಿರಬಹುದು ಎಂದು ಶಂಕಿಸಲಾಗಿದೆ.
ಕ್ಯಾಮರೂನ್​ನಿಂದ ಫ್ರಾನ್ಸ್​ಗೆ ಮರಳಿದ ಮೂರು ದಿನಗಳ ಬಳಿಕ ಅವರಿಗೆ ಸೌಮ್ಯವಾದ ಉಸಿರಾಟದ ತೊಂದರೆ ಆರಂಭವಾಯಿತು. ಅಲ್ಲದೇ ಇನ್ನಿತರ ರೋಗ ಲಕ್ಷಣಗಳು ಕ್ರಮೇಣವಾಗಿ ಒಂದೊಂದಾಗಿಯೇ ಆರಂಭವಾದವು. 7 ಮಂದಿ ಕೊರೊನಾ ಸೋಂಕಿತರಿಂದ ಪರೀಕ್ಷಾ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಪರೀಕ್ಷೆಗೆ ರವಾನೆ ಮಾಡಲಾಯಿತು. ಇಲ್ಲಿ ಇದು ಕೊರೊನಾದ ಮತ್ತೊಂದು ಹೊಸ ರೂಪಾಂತರಿ ಎಂಬುದು ಮೊದಲ ಬಾರಿಗೆ ವರದಿಯಾಗಿದೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ : ಸೇನಾ ಹೆಲಿಕಾಪ್ಟರ್‌ ಗಳ ಡಿಕ್ಕಿ ; 10 ಮಂದಿ ಸಾವು

ಫ್ರಾನ್ಸ್​ ಸಂಶೋಧಕರು ಹೇಳಿರುವ ಐಎಚ್​ಯು ವೈರಸ್​ ಜಗತ್ತಿನ ಇನ್ಯಾವುದೇ ದೇಶದಲ್ಲೂ ಕಂಡುಬಂದಿಲ್ಲ. ವಿಶ್ವಸಂಸ್ಥೆಯೂ ಕೂಡ ಈ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಹೊಸ ತಳಿಯೆಂಬ ಲೇಬಲ್​ ಕೊಟ್ಟಿಲ್ಲ.ಇನ್ನಷ್ಟು ಸಂಶೋಧನೆಯ ನಂತರವಷ್ಟೇ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement