ವೇತನ ಮಟ್ಟ-ರ್‍ಯಾಂಡ್‌ಸ್ಟಡ್‌ನ‌ ಸ್ಯಾಲರಿ ಟ್ರೆಂಡ್‌ ವರದಿ: ಕಿರಿಯ-ಮಧ್ಯಮ ಮಟ್ಟದ ವೇತನ ಶ್ರೇಣಿಯಲ್ಲಿ ಬೆಂಗಳೂರಿಗೆ ಅಗ್ರಸ್ಥಾನ

2021ರ ರ್‍ಯಾಂಡ್‌ಸ್ಟಡ್‌ನ‌ (Randstad) ಸ್ಯಾಲರಿ ಟ್ರೆಂಡ್‌ ವರದಿಯ ಆವೃತ್ತಿಯು ಭಾರತದ ಐಟಿ ರಾಜಧಾನಿ ಬೆಂಗಳೂರು ಟೈರ್‌-I ನಗರಗಳಲ್ಲಿ ಜೂನಿಯರ್ ಮತ್ತು ಮಧ್ಯಮ ಹಂತದ ವೇತನ ಶ್ರೇಣಿಗಳಲ್ಲಿ ಉದ್ಯೋಗ ಮಟ್ಟದ ಶ್ರೇಣಿಯಲ್ಲಿ ಅತಿ ಹೆಚ್ಚು ಸಂಬಳ ನೀಡುವುದರಲ್ಲಿ ಅಗ್ರ ಸ್ಥಾನದಲ್ಲಿದೆ ಎಂದು ಹೇಳಿದೆ.
ಆದಾಗ್ಯೂ, ಸೀನಿಯರ್‌ ಮಟ್ಟದಲ್ಲಿ ಅತಿ ಹೆಚ್ಚು ವೇತನ ನೀಡುವ ನಗರವೆಂದರೆ ಮುಂಬೈ ಎಂದು ವರದಿ ಹೇಳಿದೆ.
ಸೀನಿಯರ್‌ ಮಟ್ಟದಲ್ಲಿ ಮುಂಬೈ ವಾರ್ಷಿಕ ಸರಾಸರಿ 35.7 ಲಕ್ಷ ರೂ. ಗಳಷ್ಟು ವೇತನ ನೀಡುತ್ತದೆ ಎಂದು ಅದು ಹೇಳಿದೆ.

ಜೂನಿಯರ್ ಮಟ್ಟದ ಉದ್ಯೋಗಗಳಲ್ಲಿ 0-5 ವರ್ಷಗಳು, ಮಧ್ಯಮ ಮಟ್ಟದ ಉದ್ಯೋಗಗಳಲ್ಲಿ 6-14 ವರ್ಷಗಳು ಮತ್ತು ಹಿರಿಯ ಮಟ್ಟದಲ್ಲಿ 15 ವರ್ಷಗಳಿಗಿಂತ ಹೆಚ್ಚಿನ ಅನುಭವ ಹೊಂದಿರುವವರನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ವರದಿ ಹೇಳಿದೆ.
ಬೆಂಗಳೂರಿನ ಜೂನಿಯರ್ ಎಕ್ಸಿಕ್ಯೂಟಿವ್‌ಗಳು (ವಾರ್ಷಿಕ 6.71 ಲಕ್ಷ ರೂ.) ಹೈದರಾಬಾದ್‌ಗಿಂತ (ವಾರ್ಷಿಕ 5.93 ಲಕ್ಷ ರೂ.) ಸರಾಸರಿ 11.6% ಹೆಚ್ಚಿನ ಸಂಬಳವನ್ನು ಗಳಿಸುತ್ತಿದ್ದಾರೆ, ಹೈದರಾಬಾದ್‌ ಎರಡನೇ ಸ್ಥಾನದಲ್ಲಿದೆ. ವರದಿ ಪ್ರಕಾರ, ಬೆಂಗಳೂರಿನಲ್ಲಿ ಕಿರಿಯ ಶ್ರೇಣಿಯ ವೇತನ ಪಡೆಯುವವರು ಉಳಿದೆಲ್ಲ ಟೈರ್‌-I ನಗರಗಳಿಗಿಂತ ಸರಾಸರಿ 17.8% ಹೆಚ್ಚು ವೇತನವನ್ನು ಪಡೆಯುತ್ತಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಹುಲಿ-ಕರಡಿ ಮಧ್ಯೆ "ಅಪರೂಪದ" ಮುಖಾಮುಖಿ; ಆಕ್ರಮಣಕಾರಿ ಕರಡಿಗೆ ಹುಲಿಯ ತಣ್ಣನೆಯ ಉತ್ತರ | ವೀಕ್ಷಿಸಿ

ಮಧ್ಯಮ ಶ್ರೇಣಿ ಉದ್ಯೋಗದಲ್ಲಿ ಬೆಂಗಳೂರು ಉದ್ಯೋಗಿಗಳು (ವಾರ್ಷಿಕ ಸರಾಸರಿ 18.06 ಲಕ್ಷ ರೂ.) ಸಂಬಳ ಪಡೆಯುತ್ತಾರೆ. ನಂತರ ಹೈದರಾಬಾದ್‌ (ವಾರ್ಷಿಕ 17.71 ಲಕ್ಷ ರೂ.ಗಳು) ಎರಡನೇ ಹಾಗೂ ಮುಂಬೈ (17.25 ಲಕ್ಷ ರೂ.ಗಳು) ಮೂರನೇ ಸ್ಥಾನದಲ್ಲಿದೆ.
ಸೀನಿಯರ್‌ ಮಟ್ಟದ ಉದ್ಯೋಗಗಳ ವಿಷಯಕ್ಕೆ ಬಂದರೆ, ಮುಂಬೈನಲ್ಲಿ ಬೆಂಗಳೂರಿಗಿಂತ 3.4% ಹೆಚ್ಚು (ವಾರ್ಷಿಕ 34.5 ಲಕ್ಷ ರೂ.) ಮತ್ತು ಉಳಿದ ಟೈರ್‌-I ನಗರಗಳಿಗಿಂತ ಸರಾಸರಿ 8.8% ಹೆಚ್ಚು ವೇತನ ಪಡೆಯುತ್ತಾರೆ. ಎಲ್ಲಾ ಟೈರ್-1 ನಗರಗಳಿಗೆ ಹೋಲಿಸಿದರೆ ಮುಂಬೈನಲ್ಲಿ ಜೀವನ‌ ಮಟ್ಟವು ಹೆಚ್ಚಿರುವುದರಿಂದ ವೃತ್ತಿಪರರ ಸಂಬಳವು ಏರಿಕೆಯತ್ತ ತಳ್ಳಿದೆ ಎಂದು ಅಧ್ಯಯನವು ಬಹಿರಂಗಪಡಿಸುತ್ತದೆ.
ವರದಿಯ ಭಾಗವಾಗಿರುವ ಟೈರ್-II ನಗರಗಳ ಅಧ್ಯಯನಗಳಲ್ಲಿ, ಚಂಡೀಗಢವು ಜೂನಿಯರ್ ಮಟ್ಟದಲ್ಲಿ (ವರ್ಷಕ್ಕೆ 5.67 ಲಕ್ಷ ರೂ.) ಮತ್ತು ಮಧ್ಯಮ ಮಟ್ಟದ (ವಾರ್ಷಿಕ 13.70 ಲಕ್ಷ ರೂ.) ಸಂಬಳದಲ್ಲಿ ಅಗ್ರಸ್ಥಾನದಲ್ಲಿದೆ. ಸೀನಿಯರ್‌ ಮಟ್ಟದ ಉದ್ಯೋಗಗಳಿಗಾಗಿ, ಒಡಿಶಾ ರಾಜಧಾನಿ ಭುವನೇಶ್ವರ್ (ವಾರ್ಷಿಕ 31.15 ಲಕ್ಷ ರೂ.) ಸರಾಸರಿ ಯೊಂದಿಗೆ ಅಗ್ರಸ್ಥಾನದಲ್ಲಿದೆ, ಇದು ಬಹುತೇಕ ಟೈರ್‌-1 ನಗರಗಳ ಸರಾಸರಿ ಮಟ್ಟಕ್ಕೆ ಸಮನಾಗಿದೆ.
ಜೂನಿಯರ್-ಲೆವೆಲ್ ಉದ್ಯೋಗಗಳಿಗಾಗಿ, ಚಂಡೀಗಢವು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, ತಿರುವನಂತಪುರಂ (ವಾರ್ಷಿಕ 5.47 ಲಕ್ಷ ರೂ.), ಕೊಚ್ಚಿ (ವಾರ್ಷಿಕ 5.03 ಲಕ್ಷ ರೂ.), ಜೈಪುರ (ವಾರ್ಷಿಕ 4.39 ಲಕ್ಷ ರೂ.) ಮತ್ತು ನಾಗ್ಪುರ (ವಾರ್ಷಿಕ 4.21 ಲಕ್ಷ ರೂ.). ಮಧ್ಯಮ ಮಟ್ಟದ ಉದ್ಯೋಗಗಳಿಗಾಗಿ, ಚಂಡೀಗಢವು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, ತಿರುವನಂತಪುರಂ (ವಾರ್ಷಿಕ 13.44 ಲಕ್ಷ ರೂ.), ನಾಗ್ಪುರ (ವಾರ್ಷಿಕ ರೂ 12.71 ಲಕ್ಷ ರೂ.), ಕೊಚ್ಚಿ (ವಾರ್ಷಿಕ 12.08 ಲಕ್ಷ ರೂ.) ಮತ್ತು ಜೈಪುರ (ವಾರ್ಷಿಕ 12 ಲಕ್ಷ ರೂ.).

ಪ್ರಮುಖ ಸುದ್ದಿ :-   ಕೇಜ್ರಿವಾಲ್ ವಿರುದ್ಧ ಎನ್‌ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಶಿಫಾರಸು: ಇದು ಬಿಜೆಪಿಯ ಮತ್ತೊಂದು ಪಿತೂರಿ ಎಂದ ಎಎಪಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement