ಕರ್ನಾಟಕದಲ್ಲಿ 4,246 ಮಂದಿಗೆ ಸೋಂಕು..ಬೆಂಗಳೂರಲ್ಲೇ 85% ಪ್ರಕರಣ- 6%ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ..!

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಏರಿಕೆ ಮುಂದುವರಿದ್ದು, ಇಂದು ಬುಧವಾರ ಒಟ್ಟು 4,246 ಮಂದಿಗೆ ಸೋಂಕು ದಾಖಲಾಗಿದೆ.
ಇಂದು ರಾಜ್ಯದಲ್ಲಿ 362 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಒಟ್ಟು ರಾಜ್ಯದಲ್ಲಿ 29,61,772 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿನಿಂದ ಇಂದು ಇಬ್ಬರು ಮೃತಪಟ್ಟಿದ್ದು, ರಾಜ್ಯದಲ್ಲಿ ಇಲ್ಲಿವರೆಗೂ ಸೋಂಕಿನಿಂದ 38,357 ಜನರು ಮೃತಪಟ್ಟಿದ್ದಾರೆ.

ರಾಜ್ಯದ ಒಟ್ಟು ಏರಿಕೆಯಲ್ಲಿ ಬಹುದೊಡ್ಡ ಪಾಲು ಬೆಂಗಳೂರಿನದ್ದೇ. ಬೆಂಗಳೂರಿನಲ್ಲಿ ನಿನ್ನೆಗಿಂತ ಇಂದು ಕೇಸ್ ಹೆಚ್ಚು ಪ್ರಕರಣ ಪತ್ತೆಯಾಗಿದ್ದು, ಇಂದು, ಬುಧವಾರ 3,605 ಪ್ರಕರಣಗಳು ಪತ್ತೆಯಾಗಿದೆ.ಬೆಂಗಳೂರಿನಲ್ಲಿ ಕೋವಿಡ್-19 ಪಾಸಿಟಿವಿಟಿ ದರವು ಜನವರಿ 4ರಂದು 2.85% ಇದ್ದಿದ್ದು, ಜನವರಿ 5ರಂದು 6.45% ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರ ಪ್ರದೇಶದಲ್ಲಿ ಒಟ್ಟು 3,605 ಹೊಸ ಕೋವಿಡ್‌-19 ಪ್ರಕರಣಗಳು ದಾಖಲಾಗಿದ್ದು, 2 ಸಾವು ಕೂಡ ದಾಖಲಾಗಿದೆ. ಜನವರಿ 4 ರ ಬುಲೆಟಿನ್ ಪ್ರಕಾರ, ಬೆಂಗಳೂರು ನಗರ ಪ್ರದೇಶದಲ್ಲಿ 2,053 ಸೋಂಕುಗಳು ಮತ್ತು ಮೂರು ಸಾವುಗಳು ಸಂಭವಿಸಿವೆ.

ಕರ್ನಾಟಕದ ಆರೋಗ್ಯ ಸಚಿವ ಕೆ ಸುಧಾಕರ್ ಅವರು ಬುಧವಾರ ಟ್ವಿಟರ್‌ನಲ್ಲಿ ಈ ವಿಷಯವನ್ನು ಪ್ರಕಟಿಸಿದ್ದಾರೆ. “ಬೆಂಗಳೂರಿನ ಸಕಾರಾತ್ಮಕತೆಯ ದರವು ಇಂದು, ಬುಧವಾರ 6.45% ಕ್ಕೆ ಏರಿದೆ, ಕರ್ನಾಟಕದ ಶೇ.85ರಷ್ಟು ಪ್ರಕರಣಗಳು ಬೆಂಗಳೂರಿನಲ್ಲೇ ದಾಖಲಾಗಿದೆ. 24 ಗಂಟೆಗಳಲ್ಲಿ ಪ್ರಕರಣಗಳು ದ್ವಿಗುಣಗೊಂಡಿದೆ ಎಂದು ಅವರು ತಿಳಿಸಿದ್ದಾರೆ. ಕರ್ನಾಟಕದಲ್ಲಿ 3.33% ರ ಸಕಾರಾತ್ಮಕ ದರವಿದೆ. ಮರಣ ಪ್ರಮಾಣ ಶೇ.0.04 ಇದೆ. ರಾಜ್ಯದಲ್ಲಿ 226 ಓಮಿಕ್ರಾನ್ ಕೇಸ್ ಪತ್ತೆಯಾಗಿದೆ.
ಜಿಲ್ಲಾವಾರು ಮಾಹಿತಿ..:
ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಬಾಗಲಕೋಟೆ -6, ಬಳ್ಳಾರಿ -34, ಬೆಳಗಾವಿ -31, ಬೆಂಗಳೂರು ಗ್ರಾಮಾಂತರ -19, ಬೆಂಗಳೂರು ನಗರ -3,605, ಬೀದರ್ -3, ಚಾಮರಾಜನಗರ -2, ಚಿಕ್ಕಬಳ್ಳಾಪುರ -8, ಚಿಕ್ಕಮಗಳೂರು -12, ಚಿತ್ರದುರ್ಗ -6, ದಕ್ಷಿಣ ಕನ್ನಡ -111, ದಾವಣಗೆರೆ-3, ಧಾರವಾಡ -26, ಗದಗ -5, ಹಾಸನ -20, ಹಾವೇರಿ -0, ಕಲಬುರಗಿ -28, ಕೊಡಗು -20, ಕೋಲಾರ -24, ಕೊಪ್ಪಳ -0, ಮಂಡ್ಯ -36, ಮೈಸೂರು -59, ರಾಯಚೂರು -0, ರಾಮನಗರ -4, ಶಿವಮೊಗ್ಗ -22, ತುಮಕೂರು -43, ಉಡುಪಿ -88, ಉತ್ತರ ಕನ್ನಡ -17, ವಿಜಯಪುರ -14 ಮತ್ತು ಯಾದಗಿರಿಯಲ್ಲಿ -0 ಪ್ರಕರಣಗಳು ದಾಖಲಾಗಿದೆ.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement