ದೇವರಿಗೇ ಸಮನ್ಸ್ ಜಾರಿ ಮಾಡಿದ ತಮಿಳುನಾಡಿನ ಕೋರ್ಟ್ !

ಚೆನ್ನೈ: ದೇವರಿಗೆ ಸಮನ್ಸ್…! ತಮಿಳುನಾಡಿನ ಕುಂಭಕೋಣಂ ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ದೇವರಿಗೇ ಸಮನ್ಸ್‌ ನೀಡಿತ್ತು.. ಈಗ ಇದನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದೆ.
ತಿರುಪುರ ಜಿಲ್ಲೆಯ ಸಿವಿರಿಪಾಲಯಂನ ಪರಶಿವನ್ ಸ್ವಾಮಿ ದೇವರಿಗೇ ಕುಂಭಕೋಣಂನ ನ್ಯಾಯಾಲಯವೊಂದು ಜನವರಿ 6ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿತ್ತು.
ಮೂಲ ವಿಗ್ರಹ ಕಳುವಿನ ಪ್ರಕರಣ ವಿಚಾರಣೆ ನಡೆಸುತ್ತಿದ್ದ ಕುಂಭಕೋಣಂನ ನ್ಯಾಯಾಲಯವು ಇದು ಮೂಲ ವಿಗ್ರಹವೇ ಎಂಬುದನ್ನು ಪರಿಶೀಲಿಸಲು ಈಗಾಗಲೇ ಪುನರ್ ಪ್ರತಿಷ್ಠಾಪನೆಗೊಂಡಿದ್ದ ಮೂಲ ವಿಗ್ರಹವನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವಂತೆ ನಿರ್ದೇಶಿಸಿತ್ತು.
ಈ ಪ್ರಕರಣ ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಿದ್ದು, ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯಾಧೀಶ ಆರ್. ಸುರೇಶಕುಮಾರ ಅವರು ಕೆಳ ನ್ಯಾಯಾಲಯವನ್ನು ತರಾಟೆಗೆ ತೆಗೆದುಕೊಂಡರು, ನ್ಯಾಯಾಧೀಶರು ಚಿತ್ರವನ್ನು ಪರೀಕ್ಷಿಸಲು ಮತ್ತು ಅದರ ಫಲಿತಾಂಶಗಳನ್ನು ವರದಿ ಮಾಡಲು ವಕೀಲರು ಅಥವಾ ಆಯುಕ್ತರನ್ನು ನೇಮಿಸಬೇಕಿತ್ತು ಎಂದು ಹೇಳಿದರು.
ವಿಗ್ರಹ ಕಳವು ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಕುಂಭಕೋಣಂನ ಕೆಳ ನ್ಯಾಯಾಲಯವನ್ನು ತರಾಟೆಗೆ ತೆಗೆದುಕೊಂಡರು. ಹಾಗೂ ಸಮನ್ಸ್‌ಗೆ ತಡೆಯಾಜ್ಞೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಲು ನಾಲ್ಕುವಾರಗಳ ಕಾಲಾವಕಾಶವನ್ನೂ ನೀಡಿದ್ದಾರೆ. ಹೊರಡಿಸಿದ್ದಾರೆ.
ಅರ್ಜಿದಾರರ ಪ್ರಕಾರ, ಪುರಾತನ ದೇವಾಲಯದ ವಿಗ್ರಹವನ್ನು ಕಳವು ಮಾಡಲಾಗಿದೆ. ನಂತರ ಪೊಲೀಸರು ಕದ್ದ ವಿಗ್ರಹವನ್ನು ಪತ್ತೆ ಹಚ್ಚಿ ಕಳ್ಳತನ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಕುಂಭಕೋಣಂನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಅದನ್ನೂ ಪರೀಕ್ಷಿಸಲಾಯಿತು. ನಂತರ ದೇವಾಲಯದ ಅಧಿಕಾರಿಗಳಿಗೆ ವಿಗ್ರಹವನ್ನು ನೀಡಲಾಯಿತು ಮತ್ತು ದೇವಾಲಯದಲ್ಲಿ ಔಪಚಾರಿಕವಾಗಿ ಪುನರ್ ‌ಪ್ರತಿಷ್ಠಾಪನೆ ಮಾಡಲಾಯಿತು. ಈಗ ಗ್ರಾಮಸ್ಥರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಪೂಜೆ ಸಲ್ಲಿಸುತ್ತಿದ್ದಾರೆ. ಪ್ರಕರಣ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಈಗ ಮೂರ್ತಿಯನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲು ಆದೇಶಿಸಿದ್ದಾರೆ. ಈದನ್ನು ಪ್ರಶ್ನಿಸಿ ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ತನಿಖೆಯ ಏಕೈಕ ಉದ್ದೇಶದಿಂದ ದೇವರಿಗೆ ಸಮನ್ಸ್ ಕಳುಹಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಹೇಳಿತು ಹಾಗೂ ಸಮನ್ಸ್‌ಗೆ ತಡೆಯಾಜ್ಞೆ ನೀಡಿದೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

advertisement
ಓದಿರಿ :-   ಮನಿ ಮ್ಯಾಗ್ನೆಟ್, ಬಿಲಿಯನೇರ್‌ ಹೂಡಿಕೆದಾರ ರಾಕೇಶ್ ಜುಂಜುನ್​ವಾಲಾ ನಿಧನ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement