ಈ ಮೀನುಗಳು ವಾಹನ ಓಡಿಸುತ್ತವೆ…! ಇಸ್ರೇಲ್‌ನ ವಿಜ್ಞಾನಿಗಳಿಂದ ಗೋಲ್ಡ್ ಫಿಷ್‌ಗೆ ವಾಹನ ಓಡಿಸಲು ತರಬೇತಿ | ವೀಕ್ಷಿಸಿ

ನವದೆಹಲಿ: ಇಸ್ರೇಲ್‌ನ ವಿಜ್ಞಾನಿಗಳ ತಂಡವು “ಫಿಶ್ ಅಪರೇಟೆಡ್ ವೆಹಿಕಲ್” ನಿರ್ಮಿಸಿತು ಮತ್ತು ಆರು ಗೋಲ್ಡ್ ಫಿಷ್‌ಗಳಿಗೆ ಭೂಮಿಯಲ್ಲಿ ಈ ವಾಹನವನ್ನು ಓಡಿಸಲು ತರಬೇತಿ ನೀಡಿದೆ..!
ಒಟ್ಟಾರೆಯಾಗಿ, ಈ ಅಧ್ಯಯನವು ಮೀನುಗಳು ವಾಹನವನ್ನು ನಿಯಂತ್ರಿಸಲು ಕಲಿಯಬಹುದು ಮತ್ತು ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಲು ಸರಳ ನ್ಯಾವಿಗೇಷನ್ ತಂತ್ರಗಳನ್ನು ಬಳಸಬಹುದು ಎಂದು ಸೂಚಿಸುತ್ತದೆ” ಎಂದು ನೆಗೆವ್‌ನ ಬೆನ್-ಗುರಿಯನ್ ವಿಶ್ವವಿದ್ಯಾಲಯದ ಸಂಶೋಧಕರು ಬಿಹೇವಿಯರಲ್ ಬ್ರೈನ್ ರಿಸರ್ಚ್ ಜರ್ನಲ್‌ನಲ್ಲಿ ಈ ತಿಂಗಳು ಪ್ರಕಟವಾದ ಪತ್ರಿಕೆಯಲ್ಲಿ ಬರೆದಿದ್ದಾರೆ.

ಅವರ ಫಿಶ್ ಆಪರೇಟೆಡ್ ರೊಬೊಟಿಕ್‌ ವಾಹನ , ಅಥವಾ ಸಂಕ್ಷಿಪ್ತವಾಗಿ FOV, ನಾಲ್ಕು ಮೋಟಾರು ಚಕ್ರಗಳನ್ನು ಹೊಂದಿರುವ ಪ್ಲೆಕ್ಸಿಗ್ಲಾಸ್ ವಾಟರ್ ಟ್ಯಾಂಕ್ ಮತ್ತು ಮೀನುಗಳ ಚಲನೆಯನ್ನು ಪತ್ತೆಹಚ್ಚಲು ಕ್ಯಾಮೆರಾ, ಕಂಪ್ಯೂಟರ್ ಮತ್ತು FOV ಯ ಸ್ಥಳವನ್ನು ಪತ್ತೆಹಚ್ಚಲು ಲಿಡರ್‌ (LIDAR) ತಂತ್ರಜ್ಞಾನವನ್ನು ಒಳಗೊಂಡಿದೆ.
ನೀರಿನ ತೊಟ್ಟಿಯಲ್ಲಿ ಮೀನಿನ ಸ್ಥಾನವನ್ನು ಪತ್ತೆಹಚ್ಚಲು ಮತ್ತು ಮೀನಿನ ಸ್ಥಾನಕ್ಕೆ ಅನುಗುಣವಾಗಿ ವಾಹನವು ನಿರ್ದಿಷ್ಟ ದಿಕ್ಕಿನಲ್ಲಿ ಚಲಿಸುವಂತೆ ಚಕ್ರಗಳನ್ನು ಸಕ್ರಿಯಗೊಳಿಸುವಂತೆ ವಾಹನವನ್ನು ವಿನ್ಯಾಸಗೊಳಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಜೀವ ವಿಜ್ಞಾನ, ಬಯೋಮೆಡಿಕಲ್ ಎಂಜಿನಿಯರಿಂಗ್, ಕಂಪ್ಯೂಟರ್ ವಿಜ್ಞಾನ ಮತ್ತು ನರವಿಜ್ಞಾನದ ಸಂಶೋಧಕರು ಹೇಳಿದ್ದಾರೆ.ಈ ರೀತಿಯಾಗಿ, ಮೀನಿನ ಸ್ಥಾನಕ್ಕೆ ವಾಹನ ತೋರುವ ಪ್ರತಿಕ್ರಿಯೆಯು ಮೀನುಗಳನ್ನು ವಾಹನವನ್ನು ಓಡಿಸಲು ಅವಕಾಶ ಮಾಡಿಕೊಟ್ಟಿತು.

ತಮ್ಮ ಹೊಸ ಸವಾರಿ ಮತ್ತು ಪರಿಸರಕ್ಕೆ ಒಗ್ಗಿಕೊಂಡ ನಂತರ, ಮೀನುಗಳು ಅಂತಿಮವಾಗಿ ಮೂರು-ನಾಲ್ಕು ಮೀಟರ್ ಕೋಣೆಯಲ್ಲಿ ಗುಲಾಬಿ ಬಣ್ಣದ ಗುರಿಯತ್ತ ವಾಹನವನ್ನು ಚಲಾಯಿಸಲು ಕಲಿತವು, ಹಾಗೆ ಮಾಡಿದರೆ ಈ ಮೀನುಗಳು ಅವುಗಳ ಆಹಾರದ ಗುಳಿಗೆಯನ್ನು ಬಹುಮಾನವಾಗಿ ಗಳಿಸುತ್ತದೆ.
ಮೀನು ಈ ಕಾರ್ಯದಲ್ಲಿ ಹಂತಹಂತವಾಗಿ ಹೆಚ್ಚು ಪ್ರಾವಿಣ್ಯತೆ ಪಡೆಯಿತು ಮತ್ತು ಕೊನೆಯ ಹಂತದಲ್ಲಿ FOV ನಿಯಂತ್ರಣದಲ್ಲಿ ಉನ್ನತ ಮಟ್ಟದ ಯಶಸ್ಸನ್ನು ಪ್ರದರ್ಶಿಸಿತು” ಎಂದು ಅಧ್ಯಯನವು ವರದಿ ಮಾಡಿದೆ.

ಪ್ರಮುಖ ಸುದ್ದಿ :-   ಟಿ20 ಕ್ರಿಕೆಟ್‌ : ಸತತ 5 ಎಸೆತಗಳಲ್ಲಿ 5 ವಿಕೆಟ್‌ ಪಡೆದ ಕರ್ಟಿಸ್‌ ಕ್ಯಾಂಪರ್‌...!

ವಿಜ್ಞಾನಿಗಳು ನಂತರ ಪ್ರಾರಂಭದ ಸ್ಥಾನವನ್ನು ಬದಲಾಯಿಸುವ ಮೂಲಕ ಪ್ರಯೋಗ ನಡೆಸಿದರು, ಮೀನುಗಳಿಗೆ ವಿವಿಧ ಬಣ್ಣಗಳಲ್ಲಿ ಡಿಕೋಯ್ ಗುರಿಗಳನ್ನು ಇಡಲಾಯಿತು ಮತ್ತು ಗುಲಾಬಿ ಗುರಿಯನ್ನು ಸುತ್ತಲೂ ಓಡಾಡಿಸಿದರು. ಗೋಲ್ಡ್ ಫಿಷ್‌ ಗಳು ತಮ್ಮ ರುಚಿಕರವಾದ ಾಹಾರವನ್ನು ಪಡೆಯುವ ಸಲುವಾಗಿ ಈ ಗುರಿಗಳ ಕಡೆಗೆ ಓಡುತ್ತಲೇ ಇದ್ದವು.
ಸಂಶೋಧಕರು ಆರು ಗೋಲ್ಡ್ ಫಿಷ್‌ಗಳಿಗೆ ಈ ರೀತಿ ಫಿಶ್ ಅಪರೇಟೆಡ್ ವಾಹವನ್ನು ಓಡಿಸಲು ತರಬೇತಿ ನೀಡಿದರು. ಈ ಮೀನುಗಳು ಕೇವಲ ತಾಸಿಗೆ 1.5 ಕಿಮೀ ವೇಗದಲ್ಲಿ ಈ ವಾಹನಗಳನ್ನು ಓಡಿಸುತ್ತವೆ.

ಈ ಸಂಶೋಧನೆಗಳನ್ನು ತೆರೆದ  ಪರಿಸರದಂತಹ ಹೆಚ್ಚು ಸಂಕೀರ್ಣವಾದ ಸ್ಥಳದಲ್ಲಿ ವಿಸ್ತರಿಸಲು ಹೆಚ್ಚಿನ ಅಧ್ಯಯನಗಳು ಅಗತ್ಯವಿದೆ” ಎಂದು ಸಂಶೋಧಕರು ಜರ್ನಲ್‌ನಲ್ಲಿ ಬರೆದಿದ್ದಾರೆ. ಆದಾಗ್ಯೂ ಸಂಶೋಧನೆಗಳು ಮೀನಿನ ಮಿದುಳಿನಲ್ಲಿ ಸ್ಥಳವನ್ನು ಪ್ರತಿನಿಧಿಸುವ ವಿಧಾನ ಮತ್ತು ಅದು ಬಳಸುವ ತಂತ್ರಗಳು ನೀರಿನಲ್ಲಿರುವಂತೆ ಭೂಮಿಯ ವಾತಾವರಣದಲ್ಲಿಯೂ ಯಶಸ್ವಿಯಾಗಬಹುದು ಎಂದು ಸೂಚಿಸುತ್ತದೆ ಎಂದು ಬರೆದಿದ್ದಾರೆ.

ಪ್ರಮುಖ ಸುದ್ದಿ :-   ಟಿ20 ಕ್ರಿಕೆಟ್‌ : ಸತತ 5 ಎಸೆತಗಳಲ್ಲಿ 5 ವಿಕೆಟ್‌ ಪಡೆದ ಕರ್ಟಿಸ್‌ ಕ್ಯಾಂಪರ್‌...!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement