ಮಹಾರಾಷ್ಟ್ರದಲ್ಲಿ ಭಾನುವಾರ ಹೊಸದಾಗಿ 44,388 ಕೊರೊನಾ ಪ್ರಕರಣಗಳು ದಾಖಲು..!

ಮುಂಬೈ: ಭಾನುವಾರ ಮಹಾರಾಷ್ಟ್ರದಲ್ಲಿ 44,388 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು 2,02,259 ಕ್ಕೆ ಹೆಚ್ಚಿಸಿದೆ.
ಇದೇ ಸಮಯದಲ್ಲಿ ಒಂದು ದಿನದಲ್ಲಿ 12 ಕೋವಿಡ್‌-19 ಸಾವುಗಳು ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆಯನ್ನು 1,41,639 ಕ್ಕೆ ಹೆಚ್ಚಳ ಮಾಡಿದೆ. ಒಂದೇ ದಿನದಲ್ಲಿ 15,351 ರೋಗಿಗಳನ್ನು ಬಿಡುಗಡೆ ಮಾಡಲಾಗಿದ್ದು, ಒಟ್ಟು 65,72,432 ಕ್ಕೆ ತಲುಪಿದೆ. ರಾಜ್ಯದಲ್ಲಿ ಚೇತರಿಕೆ ಪ್ರಮಾಣ 95.98%. ರಾಜ್ಯದಲ್ಲಿ ಸಾವಿನ ಪ್ರಮಾಣವು 2.04% ಆಗಿದೆ.
ಮುಂಬೈ ವೃತ್ತ – ಎಂಸಿಜಿಎಂ, ಥಾಣೆ, ಟಿಎಂಸಿ, ನವಿ ಮುಂಬೈ, ಕೆಡಿಎಂಸಿ, ಉಲ್ಲಾಸ್‌ನಗರ ಎಂಸಿ, ಭಿವಂಡಿ ನಿಜಾಂಪುರ್ ಎಂಸಿ, ಮೀರಾ ಭಯಂದರ್ ಎಂಸಿ, ಪಾಲ್ಘರ್, ವಸೈ ವಿರಾರ್ ಎಂಸಿ, ರಾಯಗಡ, ಪನ್ವೇಲ್ ಎಂಸಿ ಒಳಗೊಂಡ ಮುಂಬೈ ವೃತ್ತವು 33,299 ಹೊಸ ಪ್ರಕರಣಗಳನ್ನು ದಾಖಲಿಸಿದೆ.
ಏತನ್ಮಧ್ಯೆ, ಮಹಾರಾಷ್ಟ್ರದಲ್ಲಿ ಭಾನುವಾರ 207 ಹೊಸ ಕೊರೊನಾವೈರಸ್ ಓಮಿಕ್ರಾನ್‌ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 1,216 ಕ್ಕೆ ಏರಿಕೆಯಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ