ವಿಧಾನಸಭೆ ಚುನಾವಣೆ-2022: ಟೈಮ್ಸ್ ನೌ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಗೋವಾದಲ್ಲಿ ಯಾರಿಗೆ ಬಹುಮತ?

ನವದೆಹಲಿ: ಗೋವಾ, ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್ ಮತ್ತು ಮಣಿಪುರದ ಚುನಾವಣಾ ದಿನಾಂಕಗಳು ಪ್ರಕಟವಾಗಿದ್ದು, ಫೆಬ್ರುವರಿ ಮೊದಲವಾರದಿಂದ ಚುನಾವಣೆಗಳು ಆರಂಭವಾಗಲಿದ್ದು ಒಟ್ಟು ಏಳು ಹಂತಗಳಲ್ಲಿ ನಡೆಯಲಿವೆ.
ಟೈಮ್ಸ್ ನೌ ಚುನಾವಣಾ ಪೂರ್ವ ಒಪಿನಿಯನ್ ಪೋಲ್ ಸಮೀಕ್ಷೆ ನಡೆಸಿದ್ದು, ಅದರ ಪ್ರಕಾರ, ಪ್ರಮೋದ್ ಸಾವಂತ್ ಅವರ ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪಗಳು 2022 ರಲ್ಲಿ ಗೋವಾ ಚುನಾವಣೆಯಲ್ಲಿ ಬಿಜೆಪಿಗೆ ಹಾನಿ ಮಾಡುವ ಸಾಧ್ಯತೆಯಿದೆ. ಪ್ರಮೋದ್ ಸಾವಂತ್ ನೇತೃತ್ವದ ಆಡಳಿತದ ವಿರುದ್ಧದ ಭ್ರಷ್ಟಾಚಾರ ಆರೋಪಗಳು 2022 ರ ಗೋವಾ ಚುನಾವಣೆಯಲ್ಲಿ ಬಿಜೆಪಿಯ ಮೇಲೆ ಪರಿಣಾಮ ಬೀರಲಿದೆ ಎಂದು ಟೈಮ್ಸ್ ನೌ ಒಪಿನಿಯನ್‌ ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ 53%ಕ್ಕೂ ಹೆಚ್ಚು ಜನರು ಹೇಳಿದ್ದಾರೆ.
ಆದರೆ ಇದೇವೇಳೆ ಗೋವಾ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮೊದಲ ಆಯ್ಕೆ ಯಾರು ಎಂಬ ಪ್ರಶ್ನೆಗೆ, ಪ್ರತಿಕ್ರಿಯೆ ಮಾಡಿದವರಲ್ಲಿ ಹೆಚ್ಚಿನವರು ಪ್ರಮೋದ ಸಾವಂತ್ ಅವರಿಗೆ ಆದ್ಯತೆ ನೀಡಿದ್ದಾರೆ.
24.50% ರಷ್ಟು ಜನರು ಪ್ರಮೋದ ಸಾವಂತ್ ಅವರನ್ನು ಹೆಚ್ಚು ಆದ್ಯತೆಯ ಗೋವಾ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ಕಾಂಗ್ರೆಸ್‌ನ ದಿಗಂಬರ್ ಕಾಮತ್ ಕೇವಲ 8.25% ಜನರ ಅಭಿಪ್ರಾಯ ಪಡೆದಿದ್ದಾರೆ. ಮನೋಜ್ ಪವಾರ್ 7.83% ರ ಬೆಂಬಲವನ್ನು ಪಡೆದರೆ, 19.75% ಪ್ರತಿಕ್ರಿಯಿಸಿದವರು ಆಮ್‌ ಆದ್ಮಿ ಪಕ್ಷ(AAP)ದಿಂದ ಮುಖ್ಯಮಂತ್ರಿಯಾಗಬೇಕು ಎಂದು ಬಯಸಿದ್ದಾರೆ. .

ಪ್ರಮುಖ ಸುದ್ದಿ :-   ಸುಪ್ರೀಂ ಕೋರ್ಟ್ ತರಾಟೆ ನಂತರ ದೊಡ್ಡದಾಗಿ ಕ್ಷಮೆಯಾಚನೆ ಪ್ರಕಟಿಸಿದ ಪತಂಜಲಿ ಸಂಸ್ಥೆ

ಗೋವಾ ಚುನಾವಣೆ -2022 ರಲ್ಲಿ ಸ್ಥಾನಗಳ ಪ್ರೊಜೆಕ್ಷನ್
ಒಟ್ಟು 40 ವಿದಾನಸಭೆ ಕ್ಷೇತ್ರಗಳಲ್ಲಿ ಟೈಮ್ಸ್ ನೌ ಚುನಾವಣಾ ಪೂರ್ವ ಒಪಿನಿಯನ್ ಪೋಲ್ ಪ್ರೊಜೆಕ್ಷನ್ ಪ್ರಕಾರ ಬಿಜೆಪಿ ಸುಮಾರು 17-21 ವಿಧಾನಸಭೆ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ, ಆಮ್‌ ಆದ್ಮಿ ಪಾರ್ಟಿ (ಎಎಪಿ) ಸುಮಾರು 8-11 ಕ್ಷೇತ್ರಗಳನ್ನು ಗಳಿಸುವ ನಿರೀಕ್ಷೆಯಿದೆ, ಕಾಂಗ್ರೆಸ್ ನಿರೀಕ್ಷೆಗಿಂತ ಹೆಚ್ಚು ಕಳಪೆ ಪ್ರದರ್ಶನ ನೀಡುವ ನಿರೀಕ್ಷೆಯಿದ್ದು, 4-6 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ.
2022 ರ ಗೋವಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹೊರತುಪಡಿಸಿ ಯಾವ ಪಕ್ಷಕ್ಕೆ ಪ್ರಬಲ ಅವಕಾಶವಿದೆ ಎಂಬ ಪ್ರಶ್ನೆಗೆ ಒಪಿನಿಯನ್ ಪೋಲ್ ಸಮೀಕ್ಷೆಯು ಎಎಪಿ ಉತ್ತಮ ಪ್ರದರ್ಶನ ನೀಡಬಹುದು ಎಂದು ಹೇಳಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement