ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ-2022: ಈಗ ಟೈಮ್ಸ್‌ ನೌ ಚುನಾವಣೆ ಪೂರ್ವ ಸಮೀಕ್ಷೆಯಲ್ಲಿ ಚುನಾವಣಾ ಜಿದ್ದಾಜಿದ್ದಿಯಲ್ಲಿ ಗೆಲ್ಲೋರು ಯಾರು..?

ನವದೆಹಲಿ: ಉತ್ತರ ಪ್ರದೇಶದ ವಿಧಾನಸಭೆಗೆ ಫೆಬ್ರುವರಿ 7ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಮಾರ್ಚ್‌ 10ರಂದು ಮತ ಎಣಿಕೆ ನಡೆಯಲಿದೆ.
ಟೈಮ್ಸ್ ನೌ ನಡೆಸಿದ ಒಪಿನಿಯನ್‌ ಪೋಲ್‌ ಸಮೀಕ್ಷೆಯು 403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ ಬಹುಮತ ಗಳಿಸುವ ನಿರೀಕ್ಷೆಯಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ 2022 ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಮರಳಲಿದೆ ಎಂದು ಅಂದಾಜಿಸಿದೆ. ಸಮಾಜವಾದಿ ಪಕ್ಷವು 2017 ರ ಚುನಾವಣೆಗೆ ಹೋಲಿಸಿದರೆ ತನ್ನ ಕಾರ್ಯಕ್ಷಮತೆಯನ್ನು ಸುಧಾರಿಸುವ ನಿರೀಕ್ಷೆಯಿದೆ, ಬಹುಜನ ಸಮಾಜ ಪಕ್ಷ ( ಬಿಎಸ್ಪಿ) ಮತ್ತು ಕಾಂಗ್ರೆಸ್ ಅತ್ಯಂತ ಕಳಪೆ ಪ್ರದರ್ಶನ ನೀಡುವ ನಿರೀಕ್ಷೆಯಿದೆ ಎಂದು ಅದು ಹೇಳಿದೆ.

ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಅಭ್ಯರ್ಥಿಗೆ ಹೆಚ್ಚು ಆದ್ಯತೆ: ಸಮೀಕ್ಷೆ
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಹಚ್ಚು ಆದ್ಯತೆಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಟೈಮ್ಸ್ ನೌ ಸಮೀಕ್ಷೆ ಹೇಳಿದೆ. ಒಟ್ಟು ಪ್ರತಿಕ್ರಿಯಿಸಿದವರಲ್ಲಿ 53.4% ರಷ್ಟು ಜನರು ಅವರೂ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿದ್ದಾರೆ. 31.5% ರಷ್ಟು ಜನರು ಅಖಿಲೇಶ ಯಾದವ ರಾಜ್ಯ ಆಳಬೇಕೆಂದು ಬಯಸಿದ್ದರೆ, 11.5% ಜನರು ಮುಂದಿನ ಮಾಯಾವತಿ ಅತ್ಯುತ್ತಮ ಆಯ್ಕೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಪಿಯಾಂಕಾ ಗಾಂಧಿಅವರು ಶೇಕಡಾ 2.5% ಜನರ ಆಯ್ಕೆಯಾಗಿದ್ದಾರೆ.
ಟೈಮ್ಸ್ ನೌ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ, ಬಿಜೆಪಿ 227-254 ವಿಧಾನಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಉತ್ತರ ಪ್ರದೇಶದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ. ಸಮಾಜವಾದಿ ಪಕ್ಷ ಮತ್ತು ಅದರ ಮೈತ್ರಿ ಪಾಲುದಾರರು 136-151 ಕ್ಷೇತ್ರಗಳನ್ನು ಗೆಲ್ಲುವ ಸಾಧ್ಯತೆಯಿದೆ. ಮಾಯಾವತಿಯವರ ಬಿಎಸ್‌ಪಿಯು ಕೇವಲ 8-14 ವಿಧಾನಸಭಾ ಸ್ಥಾನಗಳನ್ನು ಮಾತ್ರ ಪಡೆಯಬಹುದೆಂದು ಊಹಿಸಲಾಗಿದೆ. ಹಿಂದಿಯ ಹೃದಯಭಾಗದಲ್ಲಿ ತನ್ನ ಅಸ್ತಿತ್ವವನ್ನು ಅನುಭವಿಸಲು ಶ್ರಮಿಸುತ್ತಿರುವ ಕಾಂಗ್ರೆಸ್ ಕೇವಲ 6-11 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಬಹುದು ಎಂದು ಅದು ಹೇಳಿದೆ.
ಬಿಜೆಪಿಗೆ ಲಾಭ ತರುವ ಅಯೋಧ್ಯೆ ಮತ್ತು ಕಾಶಿ
ಸಮೀಕ್ಷೆಯಲ್ಲಿ 57.84% ರಷ್ಟು ಪ್ರತಿಕ್ರಿಯಿಸಿದವರು ಅಯೋಧ್ಯೆಯಲ್ಲಿ ರಾಮಮಂದಿರ ಮತ್ತು ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯು 2022ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗಲಿದೆ ಎಂದು ಹೇಳಿದ್ದಾರೆ. ಆದಾಗ್ಯೂ, ಭಾಗವಹಿಸಿದವರಲ್ಲಿ 36.73% ಜನರು ಕೇಸರಿ ಪಕ್ಷಕ್ಕೆ ಅಯೋಧ್ಯೆ ಮತ್ತು ಕಾಶಿ ಸಮಸ್ಯೆಗಳಿಂದ ಪ್ರಯೋಜನವಾಗುವುದಿಲ್ಲ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ಚುನಾವಣೆ ನಿರ್ಧರಿಸುವ ಅಂಶಗಳೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶೇ.34.4ರಷ್ಟು ಮಂದಿ ಉದ್ಯೋಗ ಅತ್ಯಂತ ನಿರ್ಣಾಯಕ ವಿಷಯ, ಶೇ.19.6ರಷ್ಟು ಮಂದಿ ಅಭಿವೃದ್ಧಿ, ಶೇ.28.2ರಷ್ಟು ಮಂದಿ ಕಾನೂನು ಸುವ್ಯವಸ್ಥೆ ಎಂದು ಹೇಳಿದರೆ, ಶೇ.17.9ರಷ್ಟು ಮಂದಿ ಜಾತಿ ಮತ್ತು ಧರ್ಮ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಮತಗಳ ಸಂಪೂರ್ಣ ಎಣಿಕೆ : ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್

ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ರೈತ ವಿರೋಧಿಯೇ?
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರವು ರೈತರ ವಿರೋಧಿಯಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದವರಲ್ಲಿ 42.27% ಹೌದು ಎಂದು ಪ್ರತಿಕ್ರಿಯಿಸಿದರೆ, 46.32% ಮಂದಿ ಇಲ್ಲ ಮತ್ತು 11.4% ಈ ಬಗ್ಗೆ ತೀರ್ಮಾನಿಸಿಲ್ಲ ಎಂದು ಹೇಳಿದ್ದಾರೆ.

ಸಮಾಜವಾದಿ ಪಕ್ಷಕ್ಕೆ ಮುಸ್ಲಿಮರ ಹೆಚ್ಚು ಒಲವು
ಉತ್ತರ ಪ್ರದೇಶದಲ್ಲಿ ಮುಸ್ಲಿಮರು ಹೆಚ್ಚು ಒಲವು ಹೊಂದಿರುವ ಪಕ್ಷ ಯಾವುದು? ಎಂಬ ಪ್ರಶ್ನೆಗೆ, ಉತ್ತರ ಪ್ರದೇಶದ ಮುಸ್ಲಿಮರಲ್ಲಿ ಅಖಿಲೇಶ ಯಾದವ ನೇತೃತ್ವದ ಸಮಾಜವಾದಿ ಪಕ್ಷವು ಅತ್ಯಂತ ಆದ್ಯತೆಯ ರಾಜಕೀಯ ಪಕ್ಷ ಎಂದು ಪ್ರತಿಕ್ರಿಯಿಸಿದವರಲ್ಲಿ ಹೆಚ್ಚಿನವರು ಹೇಳಿದ್ದಾರೆ.
ಬಿಜೆಪಿ: 3.3%
ಸಮಾಜವಾದಿ ಪಕ್ಷ: 48.1%
ಬಹುಜನ ಸಮಾಜ ಪಕ್ಷ: 16.6 %
ಕಾಂಗ್ರೆಸ್: 10.7%
ಎಐಎಂಐಎಂ: 19.7%
ಇತರೆ: 1.4%

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement