ಜನವರಿ 20ರವರೆಗೆ ಉತ್ತರ ಪ್ರದೇಶ ಬಿಜೆಪಿ ಸರ್ಕಾರ ಪ್ರತಿದಿನ ರಾಜೀನಾಮೆ ನೋಡುತ್ತದೆ ಎಂದ ರಾಜೀನಾಮೆ ನೀಡಿದ ಸಚಿವ ಸೈನಿ

ಲಕ್ನೋ: ಉತ್ತರ ಪ್ರದೇಶದಲ್ಲಿ ಒಬ್ಬ ಸಚಿವರು ಮತ್ತು ಇಬ್ಬರು ಅಥವಾ ಮೂವರು ಬಿಜೆಪಿ ಶಾಸಕರು ಜನವರಿ 20 ರ ವರೆಗೆ ಪ್ರತಿದಿನ ರಾಜೀನಾಮೆ ನೀಡುತ್ತಾರೆ ಎಂದು ಇಂದು. ಗುರುವಾರ ರಾಜೀನಾಮೆ ನೀಡಿದ ಧರಂ ಸಿಂಗ್ ಸೈನಿ ಹೇಳಿದ್ದಾರೆ.
ಗುರುವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸಂಪುಟಕ್ಕೆ ಸೈನಿ ರಾಜೀನಾಮೆ ನೀಡಿದ್ದು, ಮೂರು ದಿನಗಳಲ್ಲಿ ರಾಜೀನಾಮೆ ನೀಡಿದ ಮೂರನೇ ಸಚಿವರಾಗಿದ್ದಾರೆ.
ರಾಜೀನಾಮೆ ನೀಡಿದ ನಂತರ ಇಂಡಿಯಾ ಟುಡೆ ಜೊತೆ ಮಾತನಾಡಿದ ಅವರು, ನೀವು ಬಿಜೆಪಿಯನ್ನು ಏಕೆ ತೊರೆದಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಲಿ ನಾನು ಹೇಳುವುದನ್ನು ಕೇಳುವವರು ಯಾರೂ ಇರಲಿಲ್ಲ. 140 ಶಾಸಕರು ಧರಣಿ ಕುಳಿತು ಬೆದರಿಕೆ ಹಾಕಿದ್ದರು. ಆದರೂ ಯಾರೂ ಕೇಳಲಿಲ್ಲ. ಆಗಲೇ ಸಕಾಲದಲ್ಲಿ ಪ್ರತಿಕ್ರಿಯೆ ನೀಡುವ ಬಗ್ಗೆ ಎಲ್ಲರೂ ನಿರ್ಧರಿಸಿದರು” ಎಂದು ಧರಂ ಸಿಂಗ್ ಸೈನಿ ಹೇಳಿದರು.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿದ್ದೇನೆ ಎಂದು ಸೈನಿ ಹೇಳಿದರು.
ಅವರು ಎಸ್‌ಪಿ ಸೇರುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಧರಂ ಸಿಂಗ್ ಸೈನಿ, ನಾಳೆ ಈ ಕುರಿತು ಹೆಚ್ಚಿನ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ಧರಂ ಸಿಂಗ್ ಸೈನಿ ಅವರು ಉತ್ತರ ಪ್ರದೇಶ ಸರ್ಕಾರದಲ್ಲಿ ರಾಜ್ಯ (ಸ್ವತಂತ್ರ ಉಸ್ತುವಾರಿ), ಆಯುಷ್, ಆಹಾರ ಭದ್ರತೆ ಮತ್ತು ಔಷಧ ಆಡಳಿತ ಸಚಿವರಾಗಿದ್ದರು.ಗುರುವಾರ ರಾಜೀನಾಮೆಯನ್ನು ಘೋಷಿಸುವ ಸಮಯದಲ್ಲಿ, ದಲಿತರು, ನಿರುದ್ಯೋಗಿ ಯುವಕರು ಮತ್ತು ಸಣ್ಣ ವ್ಯಾಪಾರಿಗಳ ಬಗ್ಗೆ “ತೀವ್ರ ನಿರ್ಲಕ್ಷ್ಯ” ತನ್ನ ನಿರ್ಧಾರಕ್ಕೆ ಕಾರಣವಾಯಿತು ಎಂದು ಸೈನಿ ಹೇಳಿದರು. ಈ ವಾರದ ಆರಂಭದಲ್ಲಿ ಉತ್ತರ ಪ್ರದೇಶ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರ ನಿರ್ಗಮನವು ಬಿಜೆಪಿಯಲ್ಲಿ ಸಚಿವ ದಾರಾ ಸಿಂಗ್ ಚೌಹಾಣ್ ಸೇರಿದಂತೆ ಹಲವರ ರಾಜೀನಾಮೆಗಳನ್ನು ಪ್ರಚೋದಿಸಿತು.
ಮೌರ್ಯ ಅವರಿಗೆ ನಿಕಟವಾಗಿರುವ ಬಿಜೆಪಿ ಶಾಸಕರಾದ ಬ್ರಜೇಶ್ ಪ್ರಜಾಪತಿ, ರೋಷನ್ ಲಾಲ್ ವರ್ಮಾ, ಭಗವತಿ ಸಾಗರ್, ಮುಖೇಶ್ ವರ್ಮಾ, ವಿನಯ್ ಶಾಕ್ಯ ಕೂಡ ಕಳೆದ ವಾರದಿಂದ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಪಾಟ್ನಾ ರೈಲ್ವೆ ನಿಲ್ದಾಣದ ಸಮೀಪದ ಹೊಟೇಲ್‌ ನಲ್ಲಿ ಬೆಂಕಿ ಅವಘಡ : 6 ಮಂದಿ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement