ಬತ್ತದ ಉತ್ಸಾಹ.. 56ನೇ ಪ್ರಯತ್ನದಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾದ 77ರ ವೃದ್ಧ..! ಈಗ 12ನೇ ತರಗತಿ ಪರೀಕ್ಷೆಗೆ ದಾಖಲು..!!

ಜಲೋರ್: ನಿಮ್ಮಲ್ಲಿ ಉತ್ಸಾಹವಿದ್ದರೆ, ಏನು ಬೇಕಾದರೂ ಸಾಧ್ಯ ಮತ್ತು ಅದಕ್ಕೆ ಉಜ್ವಲ ಉದಾಹರಣೆಯೆಂದರೆ ರಾಜಸ್ಥಾನದ ವ್ಯಕ್ತಿ.
ಕನಸುಗಳನ್ನು ನನಸಾಗಿಸಲು ತಡ ಎಂಬುದಿಲ್ಲ ಎಂದು ಸಾಬೀತುಪಡಿಸುವ ಮೂಲಕ, 77 ವರ್ಷದ ಜಲೋರ್‌ನ ನಿವೃತ್ತ ಸರ್ಕಾರಿ ನೌಕರ ಹುಕುಮ್‌ದಾಸ್ ವೈಷ್ಣವ್, ಹತ್ತನೇ ತರಗತಿ ಪರೀಕ್ಷೆಯನ್ನು ತಮ್ಮ 56ನೇ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. 55 ಸಲದ ಪ್ರಯತ್ನದಲ್ಲಿ ಅವರಿಗೆ ಉತ್ತೀರ್ಣವಾಗಲು ಸಾಧ್ಯವಾಗಿರಲಿಲ್ಲ. ಆದರೆ ಅವರು ಧೃತಿ ಗೆಡದೆ ಅವರು 56ನೇನೇ ಪ್ರಯತ್ನದಲ್ಲಿ ಎಸ್ಸೆಸ್ಸಲ್ಸಿ ಉತ್ತೀರ್ಣರಾಗಿಯೇ ಬಿಟ್ಟಿದ್ದಾರೆ..! ಈಗ ಹನ್ನೆರಡನೇ ತರಗತಿ ಅಂದರೆ ದ್ವಿತೀಯ ಪಿಯು ಪರೀಕ್ಷೆಗೆ ದಾಖಲಾಗಿದ್ದಾರೆ…!
ಈ ವ್ಯಕ್ತಿಯ 70ರ ನಂತರ ತನ್ನ ಅಧ್ಯಯನವನ್ನು ಮುಂದುವರಿಸುವ ಕಥೆಯು ಅನೇಕರಿಗೆ ಸ್ಫೂರ್ತಿಯ ಮೂಲವಾಗಿದೆ
ಜಲೋರ್‌ನ ಸರ್ದಾರ್‌ಗಢ ಗ್ರಾಮದಲ್ಲಿ 1945 ರಲ್ಲಿ ಜನಿಸಿದ ಹುಕುಮ್‌ದಾಸ್ ಟೀಖಿ ಗ್ರಾಮದಿಂದ 1ರಿಂದ 8 ನೇ ತರಗತಿ ವರೆಗೆ ಓದಿದ್ದರು. ಮೊದಲ ಬಾರಿಗೆ 1962 ರಲ್ಲಿ ಮೊಕಲ್ಸರ್‌ನಲ್ಲಿ ಅವರು ಹತ್ತನೇ ತರಗತಿ ಪರೀಕ್ಷೆಯನ್ನು ಬಾರ್ಮರ್‌ನ ಕೇಂದ್ರದಲ್ಲಿ ಬರೆದರು. ಮೊದಲ ಪರೀಕ್ಷೆಯಲ್ಲಿ ಸಪ್ಲಿಮೆಂಟರಿ ಪರೀಕ್ಷೆ ಬರೆದೂ ಎರಡನೇ ಬಾರಿ ಅನುತ್ತೀರ್ಣರಾದರು. ಅವನ ಸ್ನೇಹಿತರು ಅವನ ಹತ್ತನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದಿಲ್ಲ ಎಂದು ಸವಾಲು ಹಾಕಿದರು. ಸವಾಲನ್ನು ಸ್ವೀಕರಿಸಿದ ಹುಕುಮದಾಸ್ ಅವರು ತಮ್ಮ ಹತ್ತನೇ ತರಗತಿ ಪರೀಕ್ಷೆಯನ್ನು ಮುಂದೊಂದು ದಿನ ತೇರ್ಗಡೆ ಮಾಡಿಯೇ ಮಾಡುತ್ತೇನೆ ಎಂದು ಪ್ರತಿಸವಾಲು ಹಾಕಿದರು.
ಅಂತರ್ಜಲ ಇಲಾಖೆಯಲ್ಲಿ ನಾಲ್ಕನೇ ದರ್ಜೆ ನೌಕರನಾಗಿದ್ದೆ ಎನ್ನುತ್ತಾರೆ ಹುಕುಮದಾಸ್ ವೈಷ್ಣವ್. ನಂತರ, ಅವರು ಸಾಮಾನ್ಯ ತರಗತಿ ಅಧ್ಯಯನ ತೊರೆದರು ಮತ್ತು ಸ್ವಯಂ ಪರೀಕ್ಷೆಗಳಿಗೆ ಹಾಜರಾಗಲು ಪ್ರಾರಂಭಿಸಿದರು.
2005 ರಲ್ಲಿ, ಅವರು ಖಜಾನೆ ಇಲಾಖೆಯಿಂದ ವರ್ಗ IV ಉದ್ಯೋಗಿಯಾಗಿ ನಿವೃತ್ತರಾದರು. 2010 ರವರೆಗೆ, ಅವರು ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಆಯೋಜಿಸಿದ್ದ X ತರಗತಿಯ ಪರೀಕ್ಷೆಗೆ 48 ಬಾರಿ ಬರೆದರು. ಅದರ ನಂತರ, ಅವರು ರಾಜ್ಯ ಮುಕ್ತ ಮಂಡಳಿಯಿಂದ ಪ್ರಯತ್ನಿಸಿದರು ಮತ್ತು ಅಂತಿಮವಾಗಿ 2019 ರಲ್ಲಿ ಅವರು 10 ನೇ ತರಗತಿ ಪರೀಕ್ಷೆಯಲ್ಲಿ ಎರಡನೇ ಶ್ರೇಣಿಯೊಂದಿಗೆ ಉತ್ತೀರ್ಣರಾದರು. ಅದರ ನಂತರ ಅವರು 2021-22 ಅವಧಿಯಲ್ಲಿ 12 ನೇ ತರಗತಿಗೆ ದಾಖಲಾದರು ಮತ್ತು ಈಗ ಪರೀಕ್ಷೆಗಳಿಗೆ ಹಾಜರಾಗಲಿದ್ದಾರೆ.
ಮಂಗಳವಾರ, ಹುಕುಮ್‌ದಾಸ್ ವೈಷ್ಣವ್ ಅವರು ಜಲೋರ್ ನಗರದ ರಾಜ್ಯ ಮುಕ್ತ ಪರೀಕ್ಷಾ ಕೇಂದ್ರವಾಗಿರುವ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 12ನೇ ಕಲಾ ತರಗತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದರು.

ಪ್ರಮುಖ ಸುದ್ದಿ :-   ಫೋರ್ಬ್ಸ್‌ನ 2023ರ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ನಾಲ್ವರು ಭಾರತೀಯರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement