ಕಷ್ಟದ ಸಂದರ್ಭದಲ್ಲಿ ಸಮಯಪ್ರಜ್ಞೆ ಎಷ್ಟು ಮುಖ್ಯ ಎಂಬುದನ್ನು ಕಾಡುಹಂದಿಯೊಂದು ತೋರಿಸುತ್ತದೆ. ಈ ದೃಶ್ಯ ರೋಚಕವಾಗಿದೆಯೆಂದರೆ ಇಲ್ಲಿ ಕೊಲ್ಲುವ ಪ್ರಾಣಿಯೇ ಒದೆ ತಿನ್ನುತ್ತದೆ, ಆಹಾರವಾಗುವ ಪ್ರಾಣಿಯೇ ಕೊಲ್ಲುವ ಪ್ರಾಣಿಗೆ ಹೆದರಿಸುತ್ತದೆ. ಕೆಲವೊಂದು ಬೇಟೆಗಾರ ಎಷ್ಟೇ ಪಳಗಿದರೂ ಬೇಟೆಗಾರನೇ ತಬ್ಬಿಬ್ಬಾಗುವ ಪ್ರಸಂಗ ಎದುರಾಗುತ್ತದೆ ಎಂಬುದುಕ್ಕೆ ಈ ವಿಡಿಯೊ ಸಾಕ್ಷಿ. ವಿಡಿಯೊದಲ್ಲಿ ಚಿರತೆಗೆ ಆಹಾರವಾಗಬೇಕಿದ್ದ ಕಾಡುಹಂದಿಯೇ ಚಿರತೆಯನ್ನು ಅಟ್ಟಾಡಿಸುತ್ತದೆ. .
@MorissaSchwartz ಎಂಬ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಆಗಿರುವ ವಿಡಿಯೊ ಕ್ಲಿಪ್ಪಿಂಗ್ ಇದು. ಚಿರತೆಯೊಂದು ಕಾಡುಹಂದಿಯನ್ನು ಬೆನ್ನಟ್ಟಿಕೊಂಡು ಹೋಗುತ್ತಿರುವ ದೃಶ್ಯದ ಮೂಲಕ ವಿಡಿಯೊ ಕ್ಲಿಪ್ ಆರಂಭವಾಗುತ್ತದೆ. ಆದರೆ, ಇದಾದ ಅರೆಕ್ಷಣದಲ್ಲಿ ಪರಿಸ್ಥಿತಿ ಸಂಪೂರ್ಣ ಭಿನ್ನವಾಗುತ್ತದೆ. ಜೀವಭಯದಲ್ಲಿ ಕಾಲ್ಕಿತ್ತು ಓಡುತ್ತಿದ್ದ ಕಾಡುಹಂದಿಯೇ ಚಿರತೆ ಮೇಲೆ ತಿರುಗಿ ಬೀಳುತ್ತದೆ. ಬೆನ್ನಟ್ಟಿಕೊಂಡು ಬಂದಿದ್ದ ಚಿರತೆಯೇ ಬದುಕಿದೆಯಾ ಬಡ ಜೀವವೇ ಎಂದು ಓಡಿಹೋಗುತ್ತದೆ. ಹಂದಿ ತಾನು ಸಹ ಬಲಶಾಲಿ ಎಂಬುದನ್ನು ನಿರೂಪಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ