ಹಳಿತಪ್ಪಿದ ಬಿಕಾನೆರ್ ಎಕ್ಸ್‌ಪ್ರೆಸ್‌ 12 ಬೋಗಿಗಳು, 5 ಸಾವು, 20 ಮಂದಿಗೆ ಗಾಯ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ಬಿಕಾನೇರ್ ಎಕ್ಸ್‌ಪ್ರೆಸ್‌ನ ಕೆಲ ಬೋಗಿಗಳು ಹಳಿತಪ್ಪಿವೆ. ಅಪಘಾತದಲ್ಲಿ ಐವರು ಮೃತಪಟ್ಟಿದ್ದಾರೆ. ಹಳಿತಪ್ಪಿದಾಗ ಸುಮಾರು 12 ಬೋಗಿಗಳು ಹಾನಿಗೊಳಗಾಗಿವೆ ಎಂದು ವರದಿಗಳು ತಿಳಿಸಿವೆ.
ರಾಜಸ್ಥಾನದ ಬಿಕಾನೇರ್‌ನಿಂದ ಹೊರಟಿದ್ದ ರೈಲು ಪಾಟ್ನಾ ಮೂಲಕ ಅಸ್ಸಾಂನ ಗುವಾಹಟಿಗೆ ತೆರಳುತ್ತಿದ್ದಾಗ ಜಲ್ಪೈಗುರಿಯ ಮೈನಾಗುರಿ ಬಳಿ ಗುರುವಾರ ಸಂಜೆ 5:15ರ ಸುಮಾರಿಗೆ ಅಪಘಾತ ಸಂಭವಿಸಿದೆ. ಇನ್ನೂ ಶೋಧ ಹಾಗೂ ರಕ್ಷಣಾ ಕಾರ್ಯ ನಡೆಯುತ್ತದೆ.
ಬಿಕಾನೇರ್‌ನಿಂದ ರೈಲು ಹತ್ತಿದ 308 ಮಂದಿ ಸೇರಿದಂತೆ ರೈಲಿನಲ್ಲಿ ಒಟ್ಟು 1,200 ಪ್ರಯಾಣಿಕರಿದ್ದರು. ಹಳಿತಪ್ಪಿದ ಘಟನೆಯಲ್ಲಿ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯು ಸೂಚಿಸುತ್ತದೆ. ಗಾಯಾಳುಗಳನ್ನು ಮೈನಾಗುರಿ ಮತ್ತು ಜಲಪೈಗುರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಹಳಿತಪ್ಪಿದ ಸ್ಥಳದಲ್ಲಿ ರೈಲ್ವೆ ಪೊಲೀಸರು ಈಗಾಗಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. 100 ಸಿಬ್ಬಂದಿಯನ್ನು ಒಳಗೊಂಡ ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯ (ಎನ್‌ಡಿಆರ್‌ಎಫ್) ಎರಡು ತಂಡಗಳು ಸಿಲಿಗುರಿಯಿಂದ ಸ್ಥಳಕ್ಕೆ ತೆರಳುತ್ತಿವೆ. ಜಲ್ಪೈಗುರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೌಮಿತಾ ಗೋಡರಾ ಬಸು ಅವರು ಐದು ಶವಗಳು ಸಂಜೆ 7 ರವರೆಗೆ ಪತ್ತೆಯಾಗಿವೆ ಎಂದು ಹೇಳಿದರು. ಅಪಘಾತದಲ್ಲಿ 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಘಟನಾ ಸ್ಥಳದಿಂದ 40 ಜನರನ್ನು ರಕ್ಷಿಸಲಾಗಿದೆ. ಸ್ಥಳದ ವಿಡಿಯೊಗಳು ಹಳಿತಪ್ಪಿದ ಬೋಗಿಗಳು ಒಂದರ ಮೇಲೊಂದು ಬಿದ್ದಿರುವುದನ್ನು ತೋರಿಸುತ್ತವೆ. ರೈಲ್ವೇ ವಿಭಾಗೀಯ ವ್ಯವಸ್ಥಾಪಕ ದಿಲೀಪ್ ಕುಮಾರ್ ಸಿಂಗ್, ಹಲವು ಉನ್ನತ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳುತ್ತಿದ್ದಾರೆ.
ಹಳಿ ತಪ್ಪಿದ ಕಾರಣ ಭಾರತೀಯ ರೈಲ್ವೇ ಕೂಡ ಒಂಬತ್ತು ರೈಲುಗಳ ಮಾರ್ಗವನ್ನು ಬದಲಿಸಿದೆ. ಏತನ್ಮಧ್ಯೆ, ಉತ್ತರ ಬಂಗಾಳದ ಎಲ್ಲಾ ಆಸ್ಪತ್ರೆಗಳಿಗೆ ಸ್ಟ್ಯಾಂಡ್‌ಬೈನಲ್ಲಿರಲು ಸೂಚಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಪರಿಸ್ಥಿತಿ ಅವಲೋಕಿಸಿದರು.
ಅಪಘಾತದ ಕಾರಣವನ್ನು ತನಿಖೆ ಮಾಡಲು ರೈಲ್ವೆ ಸುರಕ್ಷತಾ ಆಯೋಗದಿಂದ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.

ಪ್ರಮುಖ ಸುದ್ದಿ :-   ನಟಿ ಸಿದ್ಧಾರ್ಥ- ನಟಿ ಅದಿತಿ ರಾವ್ ಮದುವೆ ಆಗಿಲ್ಲ : ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ; ಸ್ಪಷ್ಟನೆ ನೀಡಿದ ಅದಿತಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement