190 ವರ್ಷದ ಆಮೆ ವಿಶ್ವದ ಅತ್ಯಂತ ಹೆಚ್ಚು ಕಾಲ ಬದುಕಿದ ಭೂಮಿ ಮೇಲಿನ ಪ್ರಾಣಿಯಾಗಿ ಗಿನ್ನೆಸ್ ದಾಖಲೆಗೆ ಸೇರ್ಪಡೆ

ಸೇಂಟ್ ದ್ವೀಪದಲ್ಲಿ ಜೊನಾಥನ್ ಎಂಬ ಹೆಸರಿನ ಆಮೆ ಈಗ ವಿಶ್ವದ ಅತ್ಯಂತ ಹಿರಿಯ ಜೀವಂತ ಭೂ ಪ್ರಾಣಿ ಎಂಬ ಗಿನ್ನೆಸ್ ವಿಶ್ವ ದಾಖಲೆ ಸೇರಿದೆ. ಈಗ ಈ 190ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುತ್ತಿದೆ.
ಹಿಂದಿನ ಅತಿ ಹಿರಿಯ ಆಮೆ ತುಯಿ ಮಲಿಲಾ ಇದು 188 ವರ್ಷಗಳ ಕಾಲ ಬದುಕಿದೆ ಎಂದು ನಂಬಲಾಗಿದೆ. ಜೊನಾಥನ್ ಆಮೆ 1832ರಲ್ಲಿ ಜನಿಸಿದೆ ಎಂದು ಹೇಳಲಾಗುತ್ತದೆ. ಸಾಗರೋತ್ತರ ಪ್ರದೇಶವಾದ ಸೇಂಟ್ ಹೆಲೆನಾ ದ್ವೀಪದಲ್ಲಿದೆ.

1832ರಲ್ಲಿ ಜನಿಸಿದ ಜೋನಾಥನ್ 1882 ರಲ್ಲಿ ಸೀಶೆಲ್ಸ್‌ನಿಂದ ಬಂದ ನಂತರ ಸೇಂಟ್ ಹೆಲೆನಾ ದ್ವೀಪದಲ್ಲಿ ವಾಸಿಸುತ್ತಿದೆ ಎಂದು ಅಂದಾಜಿಸಲಾಗಿದೆ. ಜೊನಾಥನ್ ಆಮೆ 1882ರಲ್ಲಿ ಸೇಶೆಲ್ಸ್‌ನಿಂದ ಸೇಂಟ್ ಹೆಲೆನಾಗೆ ಬಂದಾಗ ಆಮೆ ಸಂಪೂರ್ಣವಾಗಿ ಪ್ರಬುದ್ಧವಾಗಿತ್ತು. ಕನಿಷ್ಠ 50 ವರ್ಷವಾಗಿತ್ತು ಎಂಬ ಅಂಶದ ಆಧಾರದ ಮೇಳೆ ಜೊನಾಥನ್ ವಿಶ್ವ ದಾಖಲೆ ಬರೆದಿದೆ

ಸೇಂಟ್ ಹೆಲೆನಾ ಸರ್ಕಾರದ ಪ್ರಕಾರ ಜೊನಾಥನ್ ಚಳಿಗಾಲದ ಕಾರಣ ಬಳಲಿದ್ದು, ದೃಷ್ಟಿ ಅಥವಾ ವಾಸನೆಯ ಪ್ರಜ್ಞೆ ಉಳಿದಿಲ್ಲದ ಕಾರಣ ಅವನ ಸುತ್ತಲಿನ ಆಹಾರದ ಬಗ್ಗೆ ತಿಳಿದಿಲ್ಲ. ಆದರೆ ಚೆನ್ನಾಗಿ ತಿನ್ನುತ್ತದೆ. ಜೊನಾಥ್ ಜೀವನದ ಬಹುಪಾಲು ಸಮಯವನ್ನು ಸೇಂಟ್ ಹೆಲೆನಾದ ಗವರ್ನರ್ ಅವರ ಮನೆಯಲ್ಲಿ ಕಳೆದಿದ್ದು, ಅಲ್ಲಿ ಅದು ಡೇವಿಡ್, ಎಮ್ಮಾ ಫ್ರೆಡ್ ಎನ್ನುವ ದೈತ್ಯಾಕಾರದ ಆಮೆಗಳೊಂದಿಗೆ ವಾಸಿಸುತ್ತದೆ. ಎಲೆಕೋಸು, ಸೌತೆಕಾಯಿ, ಕ್ಯಾರೆಟ್, ಸೇಬುಹಣ್ಣುಗಳನ್ನು ಸೇವಿಸುತ್ತದೆ ಪಶುವೈದ್ಯರೊಬ್ಬರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಮೌಂಟ್ ಎವರೆಸ್ಟ್‌ ಮೇಲೆ ಹಾರಾಡಿ ಅತ್ಯದ್ಭುತ ದೃಶ್ಯಗಳನ್ನು ಸೆರೆ ಹಿಡಿದ ಚೀನಾದ ಡ್ರೋನ್‌...ವೀಕ್ಷಿಸಿ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement