ಇದು ಪವಾಡ..?!: ಕೋವಿಶೀಲ್ಡ್‌ ಲಸಿಕೆ ತೆಗೆದುಕೊಂಡ ನಂತ್ರ 4 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ವ್ಯಕ್ತಿ ನಡೆದಾಡಿದ..ಆತನಿಗೆ ನಿಂತುಹೋಗಿದ್ದ ಮಾತೂ ಬಂತು..!

ಒಂದು ವಿಲಕ್ಷಣ ಬೆಳವಣಿಗೆಯಲ್ಲಿ, ಜಾರ್ಖಂಡ್‌ನ ವ್ಯಕ್ತಿಯೊಬ್ಬರು ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡ ನಂತರ ತನ್ನ ಪಾರ್ಶ್ವವಾಯು ಗುಣಮುಖವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಜನವರಿ 4 ರಂದು ಕೋವಿಡ್‌-19 ವಿರುದ್ಧ ಲಸಿಕೆ ತೆಗೆದುಕೊಂಡ 55 ವರ್ಷದ ಪಾರ್ಶ್ವವಾಯು ವ್ಯಕ್ತಿ ದುಲರ್‌ಚಂದ್ ಮುಂಡಾ ಮಂಗಳವಾರ, ಲಸಿಕೆ ತೆಗೆದುಕೊಂಡ ನಂತರ ಅವರಿಗೆ ನಡೆಯಲು ಮತ್ತು ಮಾತನಾಡಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ.

advertisement

ದುಲಾರ್‌ಚಂದ್ ಮುಂಡಾ ಅವರ ಕುಟುಂಬವು ಹಾಸಿಗೆ ಹಿಡಿದಿದ್ದ ಮತ್ತು ಕಳೆದ ನಾಲ್ಕು ವರ್ಷಗಳಿಂದ ಪಾರ್ಶ್ವವಾಯುದಿಂದ ಬಳಲುತ್ತಿರುವ ಮತ್ತು ಮಾತು ಕಳೆದುಕೊಂಡಿದ್ದ ವ್ಯಕ್ತಿಯು ಕೊರೊನಾ ವೈರಸ್ ಲಸಿಕೆ ತೆಗೆದುಕೊಂಡ ನಂತರ ನಡೆಯಲು ಮತ್ತು ಮಾತನಾಡುವ ಸಾಮರ್ಥ್ಯವನ್ನು ಮರಳಿ ಪಡೆದಿದ್ದಾನೆ ಎಂದು ಹೇಳಿಕೊಂಡಿದೆ.
ವೈದ್ಯಕೀಯ ತಜ್ಞರು ದುಲರ್‌ಚಂದ್ ಮುಂಡಾ ಅವರ ಈ ಪರಿವರ್ತನೆ ಬಗ್ಗೆ ಆಳವಾದ ತಾಂತ್ರಿಕ ಸಂಶೋಧನೆ ನಡೆಯಬೇಕು ಎಂದು ಹೇಳಿದ್ದರೆ, ಆ ಪ್ರದೇಶದ ಜನರು ಇದನ್ನು ಪವಾಡಕ್ಕಿಂತ ಕಡಿಮೆಯಿಲ್ಲ ಎಂದು ಹೇಳುತ್ತಿದ್ದಾರೆ.
ದೀರ್ಘಕಾಲದ ಅನಾರೋಗ್ಯದಿಂದ ಚೇತರಿಸಿಕೊಂಡಿರುವ ದುಲಾರ್‌ಚಂದ್‌ ಈ ಬಗ್ಗೆ ಮಾತನಾಡಿ, ಈ ಲಸಿಕೆ ತೆಗೆದುಕೊಂಡಿದ್ದಕ್ಕೆ ಸಂತೋಷವಾಗಿದೆ. ಜನವರಿ 4 ರಂದು ಲಸಿಕೆ ತೆಗೆದುಕೊಂಡ ನಂತರ ನಾನು ನನ್ನ ಕಾಲುಗಳನ್ನು ಮರಳಿ ಪಡೆದಿದ್ದೇನೆ. ಈಗ ನಾನು ನಡೆಯಬಲ್ಲೆ, ನನ್ನ ಧ್ವನಿ ಮತ್ತೆ ಬಂದಿತು ಎಂದು ಹೇಳಿಕೊಂಡಿದ್ದಾರೆ. ವರದಿ ಪ್ರಕಾರ, ಎಲ್ಲರಿಗೂ ಆಶ್ಚರ್ಯವಾಗುವಂತೆ, ಅವರು ತಮ್ಮ ಕಾಲುಗಳ ಮೇಲೆ ನಿಂತು ಆರೋಗ್ಯ ಅಧಿಕಾರಿಗಳ ಮುಂದೆ ನಡೆದರು. ಬೊಕಾರೊದ ಸಿವಿಲ್ ಸರ್ಜನ್ ಡಾ ಜಿತೇಂದ್ರ ಕುಮಾರ್ ಅವರು ಬೊಕಾರೊದ ಸಲ್ಗಾಡಿಹ್ ಗ್ರಾಮದ ದುಲರ್‌ಚಂದ್ ಮುಂಡಾ ಅವರಿಗೆ ಚಿಕಿತ್ಸೆ ನೀಡಿದ್ದಾರೆ ಮತ್ತು ಘಟನೆಯ ಬಗ್ಗೆ ತಿಳಿದು ಅಚ್ಚರಿಯಾಗಿದೆ ಎಂದು ಹೇಳಿದರು.
ದುಲರ್‌ಚಂದ್ ಮುಂಡಾ ಅವರ ಅನಾರೋಗ್ಯ ಮತ್ತು ಅವರ ಚೇತರಿಕೆಯ ಬಗ್ಗೆ ವೈದ್ಯಕೀಯ ಜಗತ್ತು ಸಂಶೋಧನೆ ನಡೆಸಿದಾಗ ಮುಂದಿನ ದಿನಗಳಲ್ಲಿ ನಿಖರವಾದ ಮಾಹಿತಿ ಮತ್ತು ಉತ್ತರಗಳು ಲಭ್ಯವಿರುತ್ತವೆ ಎಂದು ಪೆಟಾರ್‌ವಾರ್ ಆರೋಗ್ಯ ಕೇಂದ್ರದ ಉಸ್ತುವಾರಿ ಅಲ್ಬೆಲ್ ಕೆರ್ಕೆಟ್ಟಾ ಹೇಳಿದ್ದಾರೆ.
ದುಲಾರ್‌ ಚಂದ್ ಅವರ ಸಂಬಂಧಿಕರ ಪ್ರಕಾರ ದೊಡ್ಡ ಅಪಘಾತದ ನಂತರ ಚಿಕಿತ್ಸೆ ಪಡೆದರು, ಆದರೆ ಅವರ ದೇಹದ ಭಾಗಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ್ದವು. ಅದರ ಪರಿಣಾಮವಾಗಿ ಅವನ ಧ್ವನಿಯೂ ತೊದಲತೊಡಗಿತು. ದುಲರ್‌ಚಂದ್ ಮತ್ತು ಅವರ ಕುಟುಂಬವು ಜನವರಿ 4 ರಂದು ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯಿಂದ ಲಸಿಕೆಯನ್ನು ಪಡೆದರು ಎಂದು ಪೇಟಾರ್‌ವಾರ್ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಕೀಯ ಉಸ್ತುವಾರಿ ಡಾ ಅಲ್ಬೆಲ್ ಕೆರ್ಕೆಟ್ಟಾ ತಿಳಿಸಿದ್ದಾರೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   1984ರ ಆಪರೇಷನ್ ಮೇಘದೂತದ ವೇಳೆ ಹಿಮಕುಸಿತದಲ್ಲಿ ಹೂತು ಹೋಗಿದ್ದ ಸಿಯಾಚಿನ್ ವೀರನ ಪಾರ್ಥಿವ ಶರೀರ 38 ವರ್ಷಗಳ ನಂತರ ಪತ್ತೆ...!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement