ಕರ್ನಾಟಕದಲ್ಲಿ ಶನಿವಾರ 33 ಸಾವಿರದ ಸಮೀಪಕ್ಕೆ ಬಂದ ದೈನಂದಿನ ಕೊರೊನಾ ಸೋಂಕು..!

posted in: ರಾಜ್ಯ | 0

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಏರಿಕೆ ಮುಂದುವರಿದಿದೆ. ಇಂದು,ಶನಿವಾರ ರಾಜ್ಯದಲ್ಲಿ ಹೊಸದಾಗಿ 32,793 ಕೊರೊನಾ ಸೋಂಕು ದಾಖಲಾಗಿದೆ ಹಾಗೂ ಏಳು ಮಂದಿ ಮೃತಪಟ್ಟಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿಯೇ 22,284 ಪ್ರಕರಣ ಪತ್ತೆಯಾಗಿದ್ದು, 5 ಮಂದಿ ಮರಣ ಹೊಂದಿದ್ದಾರೆ. ರಾಜ್ಯದಲ್ಲಿ ಸಕಾರಾತ್ಮಕತೆ ಶೇ. 15 ಕ್ಕೆ ಏರಿದೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,69,850ಕ್ಕೆ ಏರಿಕೆ ಕಂಡಿದ್ದು, ಬೆಂಗಳೂರಿನಲ್ಲಿ ಮಾತ್ರವೇ 1,29,000 ಸಕ್ರಿಯ ಪ್ರಕರಣಗಳಿವೆ.
33 ಸಾವಿರ ಸನಿಹದಲ್ಲಿರುವ ಇಂದಿನ ತಾಜಾ ಏಕದಿನದ ಸೋಂಕಿನಿಂದ ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಕೊರೊನಾ ಹೆಚ್ಚಾಗುತ್ತಿರುವುದನ್ನು ಸೂಚಿಸುತ್ತಿದೆ. ಇಂದು ಒಂದೇ ದಿನ 2,18,479 ಮಂದಿಯನ್ನು ಪರೀಕ್ಷೆ ಮಾಡಲಾಗಿದೆ ಹಾಗೂ ರಾಜ್ಯದ ಅನೇಕ ಜಿಲ್ಲೆಗಳಲ್ಲಿ 500ಕ್ಕೂ ಹೆಚ್ಚು ಏಕದಿನದ ಸೋಂಕು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ