ಬ್ರಿಟನ್ ಪ್ರಧಾನಿ ಹುದ್ದೆಗೆ ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್‌ ಹೆಸರು ಚಾಲ್ತಿಗೆ..! ಆಗಲಿದ್ದಾರೆಯೇ ಬ್ರಿಟನ್‌ ಪ್ರಧಾನಿ?

ಬ್ರಿಟನ್ ಪ್ರಧಾನ ಮಂತ್ರಿ ಹುದ್ದೆಯನ್ನು ಭಾರತೀಯ ಮೂಲದ ವ್ಯಕ್ತಿ ಅಲಂಕರಿಸಲಿದ್ದಾರೆಯೇ? ಈಗ ಬಿಟನ್‌ನಲ್ಲಿ ಅಲ್ಲಿನ ಪ್ರಧಾನಿ ಹುದ್ದೆಗೆ ಭಾರತೀಯ ಮೂಲದ ಇನ್ಫೊಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅಳಿಯ ರಿಷಿ ಸುನಕ್ ಹೆಸರು ಕೇಳಿಬರುತ್ತಿದೆ.
ಬ್ರಿಟನ್ ನಲ್ಲಿ 2020 ಮೇನಲ್ಲಿ ಕೊರೊನಾ ಉಲ್ಬಣಗೊಂಡು ಲಾಕ್ ಡೌನ್ ಜಾರಿಯಲ್ಲಿದ್ದಾಗ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ನೀಡಿದ್ದ ಮದ್ಯದ ಪಾರ್ಟಿ ವಿವಾದ ಸೃಷ್ಟಿಸಿತ್ತು. ಕೋವಿಡ್ ನಿಯಮ ಉಲ್ಲಂಘಿಸಿ, ಬೋರಿಸ್ ಜಾನ್ಸನ್ ನೀಡಿದ್ದ ಔತಣಕೂಟದ ವಿಡಿಯೊ ಇತ್ತೀಚಿಗೆ ವೈರಲ್ ಆದ ನಂತರ ಅವರ ರಾಜೀನಾಮೆ ಒತ್ತಡ ಹೇಚ್ಚುತ್ತಿದೆ. ವಿರೋಧ ಪಕ್ಷ ಲೇಬರ್ ಪಾರ್ಟಿ ಅಷ್ಟೇ ಅಲ್ಲದೆ, ಜಾನ್ಸನ್‌ ಅವರ ಸ್ವಂತ ಪಕ್ಷ ಕನ್ಸರ್ವೇಟಿವ್ಸ್ ಪಕ್ಷದಲ್ಲೇ ಜಾನ್ಸನ್‌ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅಲ್ಲದೆ ಅವರು ರಾಜೀನಾಮೆ ನೀಡಬೇಕು ಎಂಬ ಒತ್ತಾಯವೂ ಹೆಚ್ಚಾಗುತ್ತಿದೆ. ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದರೆ ಬ್ರಿಟನ್‌ ಪ್ರಧಾನಿ ಹುದ್ದೆಗೆ ಭಾರತೀಯ ಮೂಲದ ಈಗ ಬ್ರಿಟನ್ ನ ಹಣಕಾಸು ಸಚಿವರಾಗಿರುವ ರಿಷಿ ಸುನಕ್ ಹೆಸರು ಕೇಳಿಬರುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ರಿಷಿ ಸುನಕ್‌ 2015ರಲ್ಲಿ ಬ್ರಿಟನ್ ಸಂಸತ್ತನ್ನು ಪ್ರವೇಶಿಸಿದರು. 2020ರಲ್ಲಿ ಬ್ರಿಟನ್ ಸಚಿವ ಸಂಪುಟದ ಪ್ರಮುಖ ಹುದ್ದೆಗಳಲ್ಲಿ ಒಂದಾದ ಹಣಕಾಸು ಸಚಿವರಾದರು. ಕೋವಿಡ್ 19 ಸಾಂಕ್ರಾಮಿಕದಿಂದ ಬ್ರಿಟನ್ ತತ್ತರಿಸುತ್ತಿಸುತ್ತಿದ್ದ ವೇಳೆ ಆರ್ಥಿಕತೆಯನ್ನು ನಿಭಾಯಿಸುವಲ್ಲಿ ರಿಷಿ ಯಶಸ್ವಿಯಾಗಿದ್ದರು. ಕೋವಿಡ್‌-19 ಸಾಂಕ್ರಾಮಿಕದಿಂದ ಬ್ರಿಟನ್‌ ತತ್ತರಿಸುತ್ತಿರುವ ವೇಳೆ ರಿಷಿ ಅವರು ದೇಶದ ಆರ್ಥಿಕತೆಯನ್ನು ನಿರ್ವಹಿಸುವಲ್ಲಿ ಯಶಸ್ವಿ ಆಗಿದ್ದಾರೆ. ಕೋವಿಡ್‌-19ರಿಂದ ತತ್ತರಿಸಿರುವ ಉದ್ಯೋಗ ಮತ್ತು ಉದ್ಯಮ ವಲಯಕ್ಕೆ ಅನುಕೂಲ ಮಾಡಿಕೊಡಲು ಅನೇಕ ಯೋಜನೆಗಳನ್ನು ಕೈಗೊಂಡಿದ್ದಾರೆ. ಅವರ ಈ ಎಲ್ಲಾ ಕೆಲಸಗಳೂ ಅವರನ್ನ ಈಗ ಬ್ರಿಟನ್‌ ಪ್ರಧಾನಿ ರೇಸ್‌ನಲ್ಲಿ ಇರುವಂತೆ ಮಾಡಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಪ್ರಮುಖ ಸುದ್ದಿ :-   ನನ್ನ ಭೇಟಿಗೆ ಬರುವ ಜನರು ಆಧಾರ ಕಾರ್ಡ್‌ ತರಬೇಕು ಎಂದ ಸಂಸದೆ ಕಂಗನಾ ರಣಾವತ್‌ ; ಕಾಂಗ್ರೆಸ್‌ ಟೀಕೆ

ಇನ್ಫಿ ನಾರಾಣಮೂರ್ತಿ ಅಳಿಯ
41 ವರ್ಷದ ರಿಷಿ ಸುನಾಕ್ ಇನ್ಫೋಸಿಸ್ ಸಂಸ್ಥಾಪಕ ಎನ್. ಆರ್ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ದಂಪತಿಯ ಅಳಿಯ.. ನಾರಾಯಣ ಮೂರ್ತಿ ಮಗಳು ಅಕ್ಷತಾ ಅವರನ್ನು ವಿವಾಹವಾಗಿ ಬ್ರಿಟನ್ ನಲ್ಲಿ ನೆಲೆಸಿದ್ದಾರೆ. ಅವರಿಗೆ ಕೃಷ್ಣ ಮತ್ತು ಅನುಷ್ಕಾ ಎಂಬ ಇಬ್ಬರು ಮಕ್ಕಳಿದ್ದಾರೆ.
ಬ್ರಿಟನ್ ಪ್ರಿನ್ಸ್ ಫಿಲಿಪ್ ಅಂತ್ಯಕ್ರಿಯೆ ನಡೆದ ಕಳೆದ ವರ್ಷ ಏಪ್ರಿಲ್ 17ರ ಮುನ್ನಾ ದಿನ ಡೌನಿಂಗ್ ಸ್ಟ್ರೀಟ್ ನಲ್ಲಿ 30 ಮಂದಿ ಔತಣಕೂಟ ನಡೆಸಿದ್ದರು ಎಂದು ಪ್ರಧಾನಿ ಬೋರಿಸ್‌ ಜಾನ್ಸನ್‌ ಮೇಲೆ ಆರೋಪವಿದೆ. ಫಿಲಿಪ್ ಅವರ ಪಾರ್ಥಿವ ಶರೀರ ಇನ್ನೂ ಇರುವಾಗಲೇ ಮೋಜಿನ ಪಾರ್ಟಿ ನಡೆಸಿರುವ ಬಗ್ಗೆ ತೀವ್ರ ಆಕ್ಷೇಪಣೆಗಳು ವ್ಯಕ್ತವಾಗಿವೆ. ಈ ಬಗ್ಗೆ ಬೋರಿಸ್ ಬ್ರಿಟಿಷ್ ಸಂಸತ್ತಿನಲ್ಲಿ ಕ್ಷಮೆಯಾಚಿಸಿದ ಹೊರತಾಗಿಯೂ ಪ್ರಧಾನ ಮಂತ್ರಿ ಹುದ್ದೆಯಿಂದ ಕೆಳಗಿಳಿಯಬೇಕು ಎಂಬ ಬೇಡಿಕೆಗಳು ಹೆಚ್ಚುತ್ತಿವೆ. ಬೋರಿಸ್ ಜಾನ್ಸನ್ ರಾಜೀನಾಮೆ ನೀಡುವ ಪರಿಸ್ಥಿತಿ ಬಂದರೆ ಅವರ ಸ್ಥಾನಕ್ಕೆ ರಿಷಿ ಪ್ರಧಾನಿಯಾಗುವ ಸಾಧ್ಯತೆ ಇದೆ ಎಂದು ಬ್ರಿಟಿಷ್ ಮಾಧ್ಯಮಗಳು ಸಹ ವರದಿ ಮಾಡಿದೆ.

ಪ್ರಮುಖ ಸುದ್ದಿ :-   ರಕ್ಷಣಾ ಸಚಿವ ರಾಜನಾಥ ಸಿಂಗ್ ದೆಹಲಿ ಏಮ್ಸ್ ಗೆ ದಾಖಲು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement