ಮೂರನೇ ಅಲೆಯಲ್ಲಿ ಕರ್ನಾಟಕದಲ್ಲಿ ಕೋವಿಡ್ ರೋಗಿಗಳು ಆಸ್ಪತ್ರೆಗೆ ದಾಖಲು ಪ್ರಮಾಣ 6%

ಬೆಂಗಳೂರು: ಕರ್ನಾಟಕ ಆರೋಗ್ಯ ಇಲಾಖೆ ಹಂಚಿಕೊಂಡ ಅಂಕಿಅಂಶಗಳ ಪ್ರಕಾರ ಜನವರಿ 1ರಿಂದ 11ರ ವರೆಗೆ ಕರ್ನಾಟಕದಲ್ಲಿ ವರದಿಯಾದ 62,691 ಕೋವಿಡ್-19 ಪ್ರಕರಣಗಳಲ್ಲಿ 6% ರಷ್ಟು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. 93% ರಷ್ಟು ಕೋವಿಡ್‌-19 ರೋಗಿಗಳು ಮನೆ ಪ್ರತ್ಯೇಕತೆಯಲ್ಲಿದ್ದರೆ ಉಳಿದ 1% ಜನರು ರಾಜ್ಯದಲ್ಲಿ ಸ್ಥಾಪಿಸಲಾದ ಕೋವಿಡ್‌-ಕೇರ್ ಕೇಂದ್ರಗಳಲ್ಲಿದ್ದಾರೆ.
ರಾಜ್ಯದಲ್ಲಿ ಕೋವಿಡ್‌-19 ಪ್ರಕರಣಗಳ ಮೂರನೇ ಅಲೆಯಲ್ಲಿ ಕಂಡುಬರುವ ಪ್ರವೃತ್ತಿಯನ್ನು ಅಂಕಿಅಂಶಗಳು ದೃಢಪಡಿಸಿವೆ – ಕೋವಿಡ್‌-19 ರೋಗಿಗಳಲ್ಲಿ ಆಸ್ಪತ್ರೆಗೆ ದಾಖಲಾದ ಶೇಕಡಾವಾರು ಇಳಿಕೆಯಾಗಿದೆ. ಇದಕ್ಕೆ ಹೋಲಿಸಿದರೆ ಎರಡನೇ ಅಲೆಯ ಸಮಯದಲ್ಲಿ ಏಪ್ರಿಲ್ 2021ರ ನಾಲ್ಕನೇ ವಾರದಲ್ಲಿ 1.27 ಲಕ್ಷ ಪ್ರಕರಣಗಳಲ್ಲಿ 30% ಆಸ್ಪತ್ರೆಗೆ ದಾಖಲಾಗುವ ಅಗತ್ಯವಿತ್ತು.. ಮೇ 2021ರ ಎರಡನೇ ವಾರದಲ್ಲಿ (22%), ಜೂನ್ 2021 ರ ನಾಲ್ಕನೇ ವಾರದಲ್ಲಿ (19%) ಮತ್ತು ಡಿಸೆಂಬರ್ 2021 ರ ಮೊದಲ ವಾರದಲ್ಲಿ (23%) ದಾಖಲಾಗುವ ಅಗತ್ಯವಿತ್ತು ಎಂದು ದಿ ನ್ಯೂಸ್‌ ಮಿನಿಟ್‌.ಕಾಮ್‌ ವರದಿ ತಿಳಿಸಿದೆ.
ಕೋವಿಡ್-19 ಪ್ರಕರಣಗಳ ಅಂಕಿಅಂಶಗಳು ಏರಿಕೆಯಾಗುತ್ತಿರುವ ಸಮಯದಲ್ಲಿ ಆಸ್ಪತ್ರೆಗೆ ದಾಖಲಾಗುವ ಇಳಿಕೆ ಕಂಡುಬಂದಿದೆ, ರಾಜ್ಯದಲ್ಲಿ ಶುಕ್ರವಾರ, ಜನವರಿ 14 ರಂದು 28,723 ಹೊಸ ಕೋವಿಡ್‌-19 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಬೆಂಗಳೂರಿನಲ್ಲಿ 20,121 ಪ್ರಕರಣಗಳು ದಾಖಲಾಗಿವೆ.
ಮೂರನೇ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವ ಪ್ರಮಾಣವು ಎರಡನೇ ಅಲೆಗಿಂತ ಕಡಿಮೆಯಾಗಿದೆ. ಆದರೆ ಇದಕ್ಕೆ ತೃಪ್ತಿ ಪಡಬಾರದು, ದಯವಿಟ್ಟು ಕೋವಿಡ್‌-19 ಸೂಕ್ತ ನಡವಳಿಕೆಯನ್ನು ಅನುಸರಿಸಿ ಮತ್ತು ಸುರಕ್ಷಿತವಾಗಿರಿ” ಎಂದು ಕರ್ನಾಟಕ ಆರೋಗ್ಯ ಸಚಿವ ಸುಧಾಕರ್ಹೇಳಿದ್ದಾರೆ.
ಮೂರನೇ ಅಲೆಯಲ್ಲಿ ಪ್ರಕರಣಗಳು ಹೆಚ್ಚು ವೇಗವಾಗಿ ದ್ವಿಗುಣಗೊಳ್ಳುತ್ತಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಡಿಸೆಂಬರ್ 27 2021 ರಂದು, ರಾಜ್ಯದಲ್ಲಿ 289 ಕೋವಿಡ್‌-19 ಪ್ರಕರಣಗಳು ದಾಖಲಾಗಿವೆ. ಇದು ಒಂದು ವಾರದಲ್ಲಿ 2,479 ಕ್ಕೆ, ಇನ್ನೆರಡು ದಿನಗಳಲ್ಲಿ 5,031 ಮತ್ತು ಇನ್ನೊಂದು ಮೂರು ದಿನಗಳಲ್ಲಿ 12,000 ಕ್ಕೆ ಏರಿತು. ಎರಡನೇ ಅಲೆಗೆ ಹೋಲಿಸಿದರೆ ಕೋವಿಡ್‌-19 ಪ್ರಕರಣಗಳು 8-10 ದಿನಗಳಲ್ಲಿ ದ್ವಿಗುಣಗೊಂಡಿದೆ ಎಂದು ವರದಿ ತಿಳಿಸಿದೆ.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement