ಇದು ಹಾರುವ ಜಿಂಕೆ…: ಇಂಟರ್‌ನೆಟ್‌ ಅನ್ನು ಅಕ್ಷರಶಃ ದಿಗ್ಭ್ರಮೆಗೊಳಿಸಿದ ಈ ಜಿಂಕೆ ನೆಗೆತದ ವಿಡಿಯೊ…ವೀಕ್ಷಿಸಿ

ಕಾಡಿನಲ್ಲಿ ಪ್ರಾಣಿಗಳನ್ನು ನೋಡುವ ಸಂತೋಷ ದುಸ್ತರವಾಗಿದೆ ಮತ್ತು ವನ್ಯಜೀವಿ ಪ್ರೇಮಿಗಳು ಯಾವಾಗಲೂ ವನ್ಯಜೀವಿಗಳು ಹೊಂದಿರುವ ಅಗಾಧ ಶಕ್ತಿ ಮತ್ತು ಅನಿಶ್ಚಿತತೆಯ ಮಧ್ಯೆಯೇ ಅವುಗಳು ಬದುಕು ರೀತಿ ಎಂಥವರನ್ನೂ ಬೆರಾಗಿಸುತ್ತದೆ.

ಈಗ ವೈಲ್ಡ್‌ಲೆನ್ಸ್ ಇಕೋ ಫೌಂಡೇಶನ್ ಟ್ವಿಟರ್ ಹ್ಯಾಂಡಲ್ ಹಂಚಿಕೊಂಡಿರುವ ಅತಂತ್ಯ ಉಸಿರರು ಬಿಗಿ ಹಿಡಿದು ನೋಡಬೇಕಾದ ಥ್ರಿಲ್ಲಿಂಗ್‌ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ವಿಡಿಯೊದಲ್ಲಿ ಕಂಡುಬರುವ ಜಿಂಕೆಯ ಜಿಗಿತಕ್ಕೆ ಅಕ್ಷರಶಃ ಮಂತ್ರಮುಗ್ಧರಾಗಿದ್ದಾರೆ..!
ವಿಡಿಯೊದಲ್ಲಿ ಕಂಡುಬರುವ ಜಿಂಕೆ “ರಸ್ತೆ ದಾಟಲು” ಪ್ರಯತ್ನಿಸುವಾಗ ಆಳೆತ್ತರಕ್ಕಿಂತ ಹೆಚ್ಚು ಹಾಗೂ ಬಹಳ ದೂರಕ್ಕೆ ಜಿಗಿಯುವುದನ್ನು ಕಾಣಬಹುದು. ಬಹುಶಃ ನೀರು ಕುಡಿಯಲು ಬಂದಿದ್ದ ಜಿಂಕೆ ಅಲ್ಲಿಂದ ಮೇಲಕ್ಕೇರು ಬರುವಾಗ ಮಿಂಚಿನ ವೇಗದಲ್ಲಿ ಮಣ್ಣಿನ ರಸ್ತೆಯಲ್ಲಿ ಛಂಗನೆ ಜಿಗಿಯುವುದನ್ನು ಕಾಣಬಹುದು.

ಅಷ್ಟು ಎತ್ತರಕ್ಕೆ ಜಿಗಿಯುತ್ತಿದ್ದಂತೆ, ಪ್ರಾಣಿಯು ಗಾಳಿಯಲ್ಲಿಯೇ ಚಲಿಸುತ್ತಿರುವಂತೆ ತೋರುತ್ತದೆ. ನಂತರ ಅದು ರಸ್ತೆಯ ಮತ್ತೊಂದು ಭಾಗದ ತಗ್ಗಿನಲ್ಲಿ  ಸುರಕ್ಷಿತವಾಗಿ ಲ್ಯಾಂಡ್‌ ಮಾಡಿದೆ. ಅದು ಆತುರದಿಂದ ಅರಣ್ಯದಲ್ಲಿ ತಪ್ಪಿಸಿಕೊಳ್ಳಲು ಈ ರೀತಿ ಮಾಡಿದಂತೆ ತೋರುತ್ತದೆ.
ವಿಡಿಯೊದಲ್ಲಿ ಕಂಡುಬರುವ ವ್ಯಕ್ತಿ ಕೂಡ ಜಿಂಕೆಗಳ ಈ ಜಿಗಿತಕ್ಕೆ ದಿಗ್ಭ್ರಮೆಗೊಂಡಿದ್ದಾರೆ.ಕ್ಲಿಪ್‌ನ ಶೀರ್ಷಿಕೆಯು, “ಮತ್ತು ಲಾಂಗ್ ಜಂಪ್‌ ಮತ್ತು ಹೈಜಂಪ್‌ಗಾಗಿ ಚಿನ್ನದ ಪದಕ …….” ಎಂದು ಹೇಳುತ್ತದೆ.
ವಿಡಿಯೋ ನೋಡಿದ ನೆಟಿಜನ್‌ಗಳು ಬೆಚ್ಚಿ ಬಿದ್ದಿದ್ದಾರೆ. ” ಯಾರಿಂದಲೂ ಅಂತಹ ಜಂಪ್ ಅನ್ನು ನೋಡಿಲ್ಲ ಆದರೆ ಜಿಂಕೆ ಅಕ್ಷರಶಃ ಹಾರುತ್ತಿದೆ” ಎಂದು ಬಹುತೇಕರು ಕಾಮೆಂಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಸುಪ್ರೀಂ ಕೋರ್ಟ್ ತರಾಟೆ ನಂತರ ದೊಡ್ಡದಾಗಿ ಕ್ಷಮೆಯಾಚನೆ ಪ್ರಕಟಿಸಿದ ಪತಂಜಲಿ ಸಂಸ್ಥೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement