ಚುನಾವಣೆಯಲ್ಲಿ ಟಿಕೆಟ್ ನಿರಾಕರಣೆ: ಲಕ್ನೋ ಪಕ್ಷದ ಕಚೇರಿಯ ಹೊರಗೆ ಆತ್ಮಾಹುತಿಗೆ ಯತ್ನಿಸಿದ ಸಮಾಜವಾದಿ ಪಕ್ಷದ ಕಾರ್ಯಕರ್ತ..!

ಲಕ್ನೋ: ಮುಂಬರುವ ಉತ್ತರ ಪ್ರದೇಶ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ನಂತರ ಸಮಾಜವಾದಿ ಪಕ್ಷದ ಕಾರ್ಯಕರ್ತರೊಬ್ಬರು ಭಾನುವಾರ ಲಕ್ನೋದಲ್ಲಿ ಪಕ್ಷದ ಕಚೇರಿಯ ಹೊರಗೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಅಲಿಗಢದ ಸಮಾಜವಾದಿ ಪಾರ್ಟಿ ಕಾರ್ಯಕರ್ತ ಆದಿತ್ಯ ಠಾಕೂರ್ ಅವರು ಲಕ್ನೋದ ವಿಕ್ರಮಾದಿತ್ಯ ಮಾರ್ಗದಲ್ಲಿರುವ ಪಕ್ಷದ ಪ್ರಧಾನ ಕಚೇರಿಯ ಮುಂದೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾರೆ.

ಘಟನಾ ಸ್ಥಳದಲ್ಲಿದ್ದ ವೀಕ್ಷಕರು ಮತ್ತು ಪೊಲೀಸ್ ಅಧಿಕಾರಿಗಳು ಅವರನ್ನು ತಡೆದಿದ್ದಾರೆ.
ನಾನು ಇಂದು ಇಲ್ಲಿ ನನ್ನ ಪ್ರಾಣವನ್ನು ತೆಗೆದುಕೊಳ್ಳುತ್ತೇನೆ, ಏನು ಬೇಕಾದರೂ ಬರಲಿ. ನೀವು ನನ್ನನ್ನು ಜೈಲಿಗೆ ಹಾಕಿದರೂ ನನ್ನನ್ನು ತಡೆಯಲು ಸಾಧ್ಯವಿಲ್ಲ. ನನಗೆ ನ್ಯಾಯ ಬೇಕು” ಎಂದು ಆದಿತ್ಯ ಠಾಕೂರ್ ಬಂಧಿಸಿದ ನಂತರ ಭಾವನಾತ್ಮಕವಾಗಿ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ.
ಠಾಕೂರ್ ಅವರು ತಮ್ಮ ಟಿಕೆಟ್ ಅನ್ನು ಪಕ್ಷವು ದೋಚಿಕೊಂಡು ಅದನ್ನು “ಹೊರಗಿನವರಿಗೆ” ನೀಡಿದೆ. ತಾನು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿಲ್ಲ ಆದರೂ ತನಗೆ ಟಿಕೆಟ್‌ ನಿರಾಕರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಆದಿತ್ಯ ಠಾಕೂರ್ ಅವರು ಉತ್ತರ ಪ್ರದೇಶದ ಅಲಿಗಢದ ಛಾರಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಆಶಿಸಿದ್ದರು ಆದರೆ ಪಕ್ಷದಿಂದ ಟಿಕೆಟ್ ನೀಡಲಿಲ್ಲ ಎಂದು ಮೂಲಗಳು ತಿಳಿಸಿವೆ.
ಸಮಾಜವಾದಿ ಪಕ್ಷ-ರಾಷ್ಟ್ರೀಯ ಲೋಕದಳ ಮೈತ್ರಿಕೂಟವು ಜನವರಿ 13 ರಂದು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ 29 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. 29 ಸ್ಥಾನಗಳ ಪೈಕಿ ಎಸ್‌ಪಿ 10 ಮತ್ತು ಆರ್‌ಎಲ್‌ಡಿ 19 ರಂದು ಅಭ್ಯರ್ಥಿಗಳನ್ನು ಪ್ರಕಟಿಸಿರುವುದನ್ನು ಎರಡು ಪಕ್ಷಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಮುಜಾಫರ್‌ನಗರ, ಶಾಮ್ಲಿ, ಅಲಿಗಢ, ಆಗ್ರಾ, ಘಾಜಿಯಾಬಾದ್, ಮೀರತ್, ಹಾಪುರ್, ಗಾಜಿಯಾಬಾದ್‌ನಂತಹ ಜಿಲ್ಲೆಗಳಲ್ಲಿರುವ ಈ ಸ್ಥಾನಗಳನ್ನು 2017 ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಾಗಿ ಗೆದ್ದಿದ್ದಾರೆ.

ಪ್ರಮುಖ ಸುದ್ದಿ :-   ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ಸಾವು

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement