ಕರ್ನಾಟಕದಲ್ಲಿ ಸೋಮವಾರ 27,156 ಹೊಸ ಸೋಂಕು ದಾಖಲು, ಇದು ನಿನ್ನೆಗಿಂತ ಸ್ವಲ್ಪ ಕಡಿಮೆ

ಬೆಂಗಳೂರು: ಕರ್ನಾಟಕದಲ್ಲಿ ನಿನ್ನೆಗಿಂತ ಇಂದು, ಸೋಮವಾರ ಕೊರೊನಾ ದೈನಂದಿನ ಸೋಂಕುಗಳ ಸಂಖ್ಯೆಯಲ್ಲಿ ಕೊಂಚ ಇಳಿಕೆ ಕಂಡಿದೆ. ಇಳಿಕೆಯಾಗಲು ಮುಖ್ಯ ಕಾರಣ ಬೆಂಗಲೂರಿನಲ್ಲಿ ಸೋಂಕಿನ ಪ್ರಕರಣಗಳಲ್ಲಿ ಇಳಿಕೆಯಾಗಿರುವುದು.
ಇಂದು ರಾಜ್ಯದಲ್ಲಿ ಒಟ್ಟು 27,156 ದೈನಂದಿನ ದಾಖಲಾಗಿವೆ. ನಿನ್ನೆ ಒಟ್ಟು 34,047 ಪ್ರಕರಣ ದಾಖಲಾಗಿತ್ತು.

ಇಂದು ಒಟ್ಟು 14 ಮಂದಿ ಮೃತಪಟ್ಟಿದ್ದಾರೆ. ಇದೇವೇಳೆ 7,827 ಮಂದಿ ಚೇತರಿಸಿಕೊಂಡು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇಂದು ಸಕಾರಾತ್ಮಕ ದರ 12.45%ರಷ್ಟಿದೆ. ನಿನ್ನೆ ಇದು 19.29% ರಷ್ಟಿತ್ತು. ರಾಜ್ಯದಲ್ಲಿ ಒಟ್ಟು 2,17,297 ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರಿನಲ್ಲಿ 15,947 ಹೊಸ ಸೋಂಕು ಪತ್ತೆಯಾಗಿದೆ ಹಾಗೂ 5 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲೇ 1,58,000 ಸಕ್ರಿಯ ಪ್ರಕರಣವಿದೆ.
ಜಿಲ್ಲಾವಾರು ಮಾಹಿತಿ…:
ಬಾಗಲಕೋಟೆ -82, ಬಳ್ಳಾರಿ -560, ಬೆಳಗಾವಿ-294, ಬೆಂಗಳೂರು ಗ್ರಾಮಾಂತರ -538, ಬೆಂಗಳೂರು ನಗರ -15,947, ಬೀದರ್ -75, ಚಾಮರಾಜನಗರ -101, ಚಿಕ್ಕಬಳ್ಳಾಪುರ -209, ಚಿಕ್ಕಮಗಳೂರು -236, ಚಿತ್ರದುರ್ಗ -178, ದಕ್ಷಿಣ ಕನ್ನಡ- 490, ದಾವಣಗೆರೆ -121, ಧಾರವಾಡ -784, ಗದಗ -71, ಹಾಸನ -1,050, ಹಾವೇರಿ -27, ಕಲಬುರಗಿ -463, ಕೊಡಗು -137, ಕೋಲಾರ -463, ಕೊಪ್ಪಳ -89, ಮಂಡ್ಯ -917, ಮೈಸೂರು -1,770, ರಾಯಚೂರು -140, ರಾಮನಗರ -96, ಶಿವಮೊಗ್ಗ -364, ತುಮಕೂರು -1,147, ಉಡುಪಿ -442, ಉತ್ತರ ಕನ್ನಡ -203, ವಿಜಯಪುರ -128 ಮತ್ತು ಯಾದಗಿರಿಯಲ್ಲಿ -18 ಪಾಸಿಟಿವ್ ಪ್ರಕರಣ ದಾಖಲಾಗಿದೆ.

ಓದಿರಿ :-   ದೆಹಲಿಯ ಕುತುಬ್ ಮಿನಾರ್ ಸಂಕೀರ್ಣ ಉತ್ಖನನದ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ: ಕೇಂದ್ರ ಸಚಿವರ ಸ್ಪಷ್ಟನೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ