ಪಂಜಾಬ್‌ನಲ್ಲಿ ಫೆ.14ರ ಬದಲಿಗೆ ಈಗ ಫೆಬ್ರವರಿ 20 ರಂದು ಮತದಾನ: ಚುನಾವಣಾ ಆಯೋಗ

ನವದೆಹಲಿ; ಹಲವಾರು ರಾಜಕೀಯ ಪಕ್ಷಗಳು ಮನವಿ ಮಾಡಿದ ನಂತರ ಫೆಬ್ರವರಿ 14 ರಂದು ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಚುನಾವಣಾ ಆಯೋಗ (EC) ಮುಂದೂಡಿದೆ. ಒಂದೇ ಹಂತದ ಪಂಜಾಬ್ ವಿಧಾನಸಭಾ ಚುನಾವಣೆಯ ಮತದಾನ ಈಗ ಫೆಬ್ರವರಿ 20ರಂದು ನಡೆಯಲಿದೆ.
ಗುರು ರವಿದಾಸ್ ಜಯಂತಿಯನ್ನು ಗಮನದಲ್ಲಿಟ್ಟುಕೊಂಡು ಫೆಬ್ರವರಿ 14ರಂದು ಪಂಜಾಬಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಮುಂದೂಡುವಂತೆ ವಿವಿಧ ರಾಜಕೀಯ ಪಕ್ಷಗಳ ಬೇಡಿಕೆಗಳ ಕುರಿತು ಚರ್ಚಿಸಲು ಹಿಂದಿನ ದಿನದ ಚುನಾವಣಾ ಆಯೋಗದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಫೆಬ್ರವರಿ 16 ರಂದು ಶ್ರೀ ಗುರು ರವಿದಾಸ ಅವರ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಲು ಬಯಸುವ ದಲಿತ ಸಮುದಾಯದ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರು ಚುನಾವಣೆಯನ್ನು ಒಂದು ವಾರದ ವರೆಗೆ ಮುಂದೂಡುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದರು.
ಒಂದೇ ಹಂತದ ಚುನಾವಣೆಯನ್ನು ಮುಂದೂಡಲು ಇದೇ ರೀತಿಯ ವಿನಂತಿಗಳನ್ನು ಬಿಜೆಪಿ ಮತ್ತು ಬಿಎಸ್ಪಿ ಸೇರಿದಂತೆ ಇತರ ಪಕ್ಷಗಳು ಜಯಂತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿಟ್ಟಿವೆ. ಈಗ ಈ ಪಕ್ಷಗಳ ಬೇಡಿಕೆಯನ್ನು ಮನ್ನಿಸಿ ಚುನಾವಣೆ ಆಯೋಗವು ಫೆಬ್ರವರಿ 20ರಂದು ಪಂಜಾಬ್‌ ಚುನಾವಣೆ ನಡೆಸುವುದಾಗಿ ಪ್ರಕಟಿಸಿದೆ.

ಪ್ರಮುಖ ಸುದ್ದಿ :-   ವೀಡಿಯೊ: ತಾಪಮಾನ ಹೆಚ್ಚಳದಿಂದ ವಿದ್ಯಾರ್ಥಿಗಳು ಪಾರಾಗಲು ಕ್ಲಾಸ್‌ ರೂಮ್‌ ಅನ್ನೇ ಈಜುಕೊಳವಾಗಿ ಪರಿವರ್ತಿಸಿದ ಶಾಲೆ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement