ರೈಲು ಬರುತ್ತಿರುವಾಗಲೇ ಮಹಿಳೆಯನ್ನು ರೈಲಿನ ಮುಂದೆ ನೂಕಿದ ವ್ಯಕ್ತಿ…ಕೂದಲೆಳೆ ಅಂತರದಲ್ಲಿ ಬಚಾವ್‌..! ದೃಶ್ಯ ವಿಡಿಯೊದಲ್ಲಿ ಸೆರೆ

ಬೆಲ್ಜಿಯಂನಲ್ಲಿ ರೈಲು ಬರುತ್ತಿರುವಾಗಲೇ ವ್ಯಕ್ತಿಯೊಬ್ಬ ಉದ್ದೇಶಪೂರ್ವವಾಗಿ ಮಹಿಳೆಯೊಬ್ಬಳನ್ನು ರೈಲು ಹಳಿಗೆ ತಳ್ಳಿದರೂ ಆ ಮಹಿಳೆ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಮೈ ಜುಂ ಎನ್ನುವ ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕೇವಲ 30 ಸೆಕೆಂಡುಗಳ ಕ್ಲಿಪ್ ವಿಡಿಯೊ, ಶುಕ್ರವಾರ ಸಂಜೆ ಬ್ರಸೆಲ್ಸ್‌ನ ರೋಜಿಯರ್ ಮೆಟ್ರೋ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿರುವ ಪ್ರಯಾಣಿಕರನ್ನು ತೋರಿಸುತ್ತದೆ. ರೈಲು ನಿಲ್ದಾಣದೊಳಗೆ ಬರುತ್ತಿದ್ದಂತೆ, ಕಪ್ಪು ಟಿ-ಶರ್ಟ್‌ ವ್ಯಕ್ತಿಯೊಬ್ಬ ಮಹಿಳೆಯ ಹಿಂದೆ ಬಂದು ಆ ಮಹಿಳೆಯನ್ನು ರೈಲು ಹಳಿ ಕಡೆಗೆ ದೂಡಿದ್ದಾನೆ. ಆ ವ್ಯಕ್ತಿ ದೂಡಿದ್ದರಿಂದ ಸಮತೋಲನ ಕಳೆದುಕೊಂಡ ಮಹಿಳೆ ಸಮೀಪಿಸುತ್ತಿರುವ ರೈಲಿನ ಮುಂದೆ ಹಳಿಗಳ ಮೇಲೆ ದೊಪ್ಪೆಂದು ಬಿದ್ದಿದ್ದಾರೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಅದೃಷ್ಟವಶಾತ್ ರೈಲಿನ ಚಾಲಕನು ಸಮಯಕ್ಕೆ ಸರಿಯಾಗಿ ಬ್ರೇಕ್‌ ಹಾಕಿದ್ದರಿಂದ ಕೂದಲೆಳೆಯ ಅಂತರದಲ್ಲಿ ಮಹಿಳೆ ಬಚಾವ್‌ ಆಗಿದ್ದಾರೆ. ದಿಗ್ಭ್ರಮೆಗೊಂಡ ಮಹಿಳೆಯಿಂದ ಮೆಟ್ರೋ ರೈಲು ಇಂಚುಗಳಷ್ಟು ದೂರದಲ್ಲಿ ನಿಲ್ಲುತ್ತದೆ. ರೈಲು ನಿಲ್ದಾಣದಲ್ಲಿ ನಿಂತಿದ್ದ ಜನರು ತಕ್ಷಣವೇ ಸಹಾಯಕ್ಕೆ ಧಾವಿಸುತ್ತಾರೆ.
ಮಹಿಳೆ ಹಳಿಗಳ ಮೇಲೆ ಬೀಳುತ್ತಿರುವುದನ್ನು ಗಮನಿಸಿದ ರೈಲು ಚಾಲಕ ತ್ವರಿತವಾಗಿ ತುರ್ತು ಬ್ರೇಕ್‌ಗಳನ್ನು ಹೊಡೆದಿದ್ದರಿಂದ ಮೆಟ್ರೋ ತಕ್ಷಣವೇ ಸ್ಥಗಿತಗೊಂಡಿತು ಎಂದು ಬ್ರಸೆಲ್ಸ್ ಟೈಮ್ಸ್ ವರದಿ ಮಾಡಿದೆ.

ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಸೂಕ್ತ ಚಿಕಿತ್ಸೆ ನಂತರ ಮನೆಗೆ ಹೋಗಲು ಅನುಮತಿ ನೀಡಲಾಯಿತು. ಮಹಿಳೆ ಆಘಾತಕ್ಕೊಳಗಾದಂತೆಯೇ ಈ ಅನಿರೀಕ್ಷಿತ ಘಟನೆಯಿಂದ ಮೆಟ್ರೋ ರೈಲು ಚಾಲಕ ಸಹ ಆಘಾತಕ್ಕೊಳಗಾಗಿದ್ದಾನೆ ಎಂದು ಮೆಟ್ರೋ ನಿರ್ವಹಿಸುವ ಬ್ರಸೆಲ್ಸ್ ಸಾರ್ವಜನಿಕ ಸಾರಿಗೆ ಕಂಪನಿಯ ವಕ್ತಾರರು ತಿಳಿಸಿದ್ದಾರೆ ಎಂದು ಬ್ರಸೆಲ್ಸ್ ಟೈಮ್ಸ್‌ ವರದಿ ಹೇಳಿದೆ.
ಮಹಿಳೆಯನ್ನು ರೈಲಿನ ಮುಂದೆ ತಳ್ಳಿ ಓಡಿ ಹೋಗಿದ್ದ ಆರೋಪಿಯನ್ನು ನಂತರ ಬಂಧಿಸಲಾಯಿತು. ಆತನ ಮೇಲೆ ಕೊಲೆ ಯತ್ನದ ಆರೋಪ ಹೊರಿಸಲಾಗಿದೆ. ಅತನ ಮಾನಸಿಕ ಸ್ಥಿತಿಯನ್ನು ಪರಿಶೀಲಿಸಲು ನ್ಯಾಯಾಲಯದಿಂದ ಮನೋವೈದ್ಯಕೀಯ ತಜ್ಞರನ್ನು ನೇಮಿಸಲಾಗಿದೆ.
ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement