ಡ್ರಾ ಮಾಡುವ ಕೆಲವೇ ಗಂಟೆಗಳ ಮೊದಲು ಖರೀದಿಸಿ 12 ಕೋಟಿ ರೂ. ಬಂಪರ್ ಲಾಟರಿ ಗೆದ್ದ ಪೇಂಟರ್..!

ತಿರುವನಂತಪುರಂ: ಕೇರಳದ ಕೊಟ್ಟಾಯಂನಲ್ಲಿ ಪೇಂಟಿಂಗ್ ಕೆಲಸಗಾರರೊಬ್ಬರು ಸರ್ಕಾರದ ಕ್ರಿಸ್‌ಮಸ್-ಹೊಸ ವರ್ಷದ ಲಾಟರಿಯ 12 ಕೋಟಿ ರೂ.ಗಳ ಮೊದಲ ಬಹುಮಾನ ಗೆದ್ದಿದ್ದಾರೆ..!
ಐಮನಂ ಸಮೀಪದ ಕುಡಯಂಪಾಡಿ ಮೂಲದ ಸದಾನಂದನ್ ಅಲಿಯಾಸ್ ಸದನ್ ಅವರು ಭಾನುವಾರ ಬೆಳಿಗ್ಗೆ ತಿರುವನಂತಪುರದಲ್ಲಿ ಲಕ್ಕಿ ಡ್ರಾಗೆ ಕೆಲವೇ ಗಂಟೆಗಳ ಮೊದಲು ಮಾರಾಟಗಾರರಿಂದ XG 218582 ಸಂಖ್ಯೆಯ ಲಾಟರಿ ಟಿಕೆಟ್ ಖರೀದಿಸಿದ್ದರು.

ನಾನು ಬೆಳಿಗ್ಗೆ ಖರೀದಿಗಾಗಿ ಹತ್ತಿರದ ಮಾರುಕಟ್ಟೆಗೆ ಹೋದಾಗ ಸೆಲ್ವನ್ (ಲಾಟರಿ ಮಾರಾಟಗಾರ) ಅವರಿಂದ ಬಹುಮಾನ ವಿಜೇತ ಈ ಲಾಟರಿ ಟಿಕೆಟ್ ಖರೀದಿಸಿದೆ” ಎಂದು ಸದಾನಂದನ್ ಮಾಧ್ಯಮಗಳಿಗೆ ತಿಳಿಸಿದರು.
ಈ ಲಾಟರಿ ಟಿಕೆಟ್‌ ಅನ್ನು ಕೊಟ್ಟಾಯಂ ನಗರದ ಲಾಟರಿ ಏಜೆಂಟ್ ಬಿಜಿ ವರ್ಗೀಸ್ ಅವರು ಕುಡಯಂಪಾಡಿ ಬಳಿಯ ಪಾಂಡವಂ ಎಂಬಲ್ಲಿ ಲಾಟರಿ ಮಾರಾಟಗಾರ ಕುನ್ನೆಪರಂಬಿಲ್ ಸೆಲ್ವನ್ ಅವರಿಗೆ ಮಾರಾಟ ಮಾಡಿದ್ದಾರೆ. ಅವರಿಂದ ಸದಾನಂದನ್‌ ಖರೀದಿಸಿದ್ದಾರೆ.
ಕಳೆದ 50 ವರ್ಷಗಳಿಂದ ಪೇಂಟಿಂಗ್‌ ಸದಾನಂದನ್ ಅವರ ವೃತ್ತಿಯಾಗಿದೆ. ಈ ಮೊತ್ತವನ್ನು ಏನು ಮಾಡುತ್ತೀರಿ ಎಂದು ಕೇಳಿದಾಗ, ಅವರು ತಮ್ಮ ಮಕ್ಕಳಾದ ಸನೀಶ್ ಮತ್ತು ಸಂಜಯ್ ಅವರ ಜೀವನ ಪರಿಸ್ಥಿತಿಯನ್ನು ಸುಧಾರಿಸಲು ಬಳಸುವುದಾಗಿ ಅವರು ಹೇಳಿದ್ದಾರೆ.
ಕ್ರಿಸ್‌ಮಸ್ ಬಂಪರ್‌ನ ಟಿಕೆಟ್‌ಗಳ ಬೆಲೆ 300 ರೂ.ಗಳಾಗಿದ್ದು, ಲಾಟರಿಯಲ್ಲಿ ಎರಡನೇ ಬಹುಮಾನ 3 ಕೋಟಿ ರೂ (ಆರು ಟಿಕೆಟ್‌ಗಳಿಗೆ ನೀಡಲಾಯಿತು) ಮತ್ತು ಮೂರನೇ ಬಹುಮಾನ 60 ಲಕ್ಷ ರೂ (ಆರು ಟಿಕೆಟ್‌ಗಳಿಗೆ ನೀಡಲಾಗಿದೆ).
ಲಾಟರಿ ಇಲಾಖೆಯು ಆರಂಭದಲ್ಲಿ 24 ಲಕ್ಷ ಟಿಕೆಟ್‌ಗಳನ್ನು ಮುದ್ರಿಸಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. ಟಿಕೆಟ್‌ಗಳು ಮಾರಾಟವಾದ ನಂತರ ಎರಡು ಬಾರಿ ಮುದ್ರಿಸಲಾಯಿತು – ಮೊದಲು ಒಂಬತ್ತು ಲಕ್ಷ ಮತ್ತು ನಂತರ 8.34 ಲಕ್ಷ ಮುದ್ರಿಸಲಾಯಿತು ಎಂದು ತಿಳಿಸಲಾಗಿದೆ.
ಸೆಪ್ಟೆಂಬರ್ 2021 ರಲ್ಲಿ, ಕೇರಳದ ಆಟೋ ಚಾಲಕ ಓಣಂ ನಂತರ 12 ಕೋಟಿ ರೂಪಾಯಿಗಳ ಲಾಟರಿ ಬಹುಮಾನವನ್ನು ಗೆದ್ದಿದ್ದರು.

ಪ್ರಮುಖ ಸುದ್ದಿ :-   ಕುಖ್ಯಾತ ಗ್ಯಾಂಗ್‌ಸ್ಟರ್‌-ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ಸಾವು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement