ಸರಾಸರಿಗಿಂತ ಕಡಿಮೆಯಿರುವ ಜಿಲ್ಲೆಗಳಲ್ಲಿ ಕೋವಿಡ್ -19 ಲಸಿಕಾ ಕಾರ್ಯಕ್ರಮ ಚುರುಕಿಗೆ ಸಿಎಂ ಬೊಮ್ಮಾಯಿ ಸೂಚನೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಕೋವಿಡ್ -19 ಲಸಿಕಾ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ನಡೆಯಿತು. ಮೊದಲನೇ ಹಾಗೂ 2ನೇ ಡೋಸ್ ಲಸಿಕೆ ಪ್ರಮಾಣದಲ್ಲಿ ರಾಜ್ಯ ಸರಾಸರಿಗಿಂತ ಕಡಿಮೆ ಇರುವ ಜಿಲ್ಲೆಗಳು ತಿಂಗಳ ಅಂತ್ಯದೊಳಗೆ ರಾಜ್ಯ ಸರಾಸರಿಯನ್ನು ತಲುಪಬೇಕು ಎಂದು‌ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಯಿತು. ಜಿಲ್ಲಾಡಳಿತಗಳು ದಕ್ಷತೆಯಿಂದ ಪ್ರತಿ ಗ್ರಾಮದ ಕಟ್ಟಕಡೆಯ ಮನೆಗೂ … Continued

ಮಾಸ್ಕ್‌ ಹಾಕ್ಬೇಕು ಎಂದು ನನಗೆ ಅನಿಸಿಲ್ಲ, ಅದಕ್ಕೆ ಹಾಕಿಲ್ಲ: ಸಚಿವ ಕತ್ತಿ ಉಡಾಫೆ ಹೇಳಿಕೆ

ಬೆಳಗಾವಿ: ಕೊರೊನಾ ಸೋಂಕು ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸುವುದು ಬಿಡುವುದು ಅವರ ವೈಯಕ್ತಿಕ ವಿಚಾರ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯೇ ಹೇಳಿದ್ದಾರೆ. ಅದಕ್ಕೆ, ನಾನು ಮಾಸ್ಕ್ ಧರಿಸುತ್ತಿಲ್ಲ ಎಂದು ಸಚಿವ ಉಮೇಶ್‌ ಕತ್ತಿ ಹೇಳಿದರು. ಅಥಣಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೊರೊನಾ ನಿಯಮಗಳಲ್ಲಿ ಕೆಲವನ್ನು ಸಡಿಲಿಕೆ ಮಾಡಲಾಗಿದೆ. ಎರಡು ದಿನದ ಹಿಂದೆ ದೇಶದ … Continued

ಕರ್ನಾಟಕದಲ್ಲಿ ವಾರಾಂತ್ಯದ ಕರ್ಫ್ಯೂ ಅಗತ್ಯವಿಲ್ಲ: ಸಚಿವ ಪ್ರಹ್ಲಾದ ಜೋಶಿ

ಹುಬ್ಬಳ್ಳಿ: ರಾಜ್ಯದಲ್ಲಿ ಆರಂಭಿಸಿರುವ ವಾರಾಂತ್ಯ ಕರ್ಫೂ ಅಗತ್ಯವಿಲ್ಲ ಎಂದು ನನಗನಿಸುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿ ಅವರು, ರಾಜ್ಯದಲ್ಲಿ ಸದ್ಯಕ್ಕೆ ವೀಕೆಂಡ್ ಕರ್ಫ್ಯೂ ಅಗತ್ಯವಿಲ್ಲ. ರಾಜ್ಯದ ಆರ್ಥಿಕತೆಯೂ ಕೂಡಾ ಸಾಗಬೇಕು. ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ. ಹಾಗಾಗಿ ಸರ್ಕಾರ ನೋಡಿಕೊಂಡು ವೀಕೆಂಡ್ ಕರ್ಫ್ಯೂ ಕುರಿತು ತೀರ್ಮಾನ ಮಾಡಬೇಕು ಎಂದು … Continued

ಭಾರತೀಯ ಸೇನೆಯಿಂದ ಹಿಮಪಾತದಲ್ಲಿ ಸಿಲುಕಿದ್ದ 14 ಮಂದಿ ರಕ್ಷಣೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ತಂಗ್ದಾರ್-ಚೌಕಿಬಲ್ ಹೆದ್ದಾರಿಯಲ್ಲಿ ಹಿಮ ಕುಸಿತದಲ್ಲಿ ಸಿಲುಕಿದ್ದ 14 ನಾಗರಿಕರನ್ನು ಭಾರತೀಯ ಸೇನೆ ರಕ್ಷಿಸಿದೆ. ಹಿಮಪಾತದಲ್ಲಿ 14 ಜನರು ಸಿಲುಕಿಕೊಂಡಿದ್ದರು. ಅವರನ್ನು ಭಾರತೀಯ ಸೈನಿಕರು ರಕ್ಷಣೆ ಮಾಡಿದ್ದು, ಅವರನ್ನು ಹತ್ತಿರದ ಸೇನಾ ಶಿಬಿರಕ್ಕೆ ಕರೆದೊಯ್ದು ಆಹಾರ ನೀಡಲಾಗಿದೆ. ಸಿಲುಕಿಕೊಂಡವರಲ್ಲಿ ಹೃದ್ರೋಗಿಗಳು, ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸಹ ಇದ್ದರು. ಪ್ರಯಾಣಿಕರು ತುಂಬಿರುವ … Continued

ವಿವಾದಾತ್ಮಕ ಹೇಳಿಕೆ: ರಿಷಿಕುಮಾರ ಸ್ವಾಮಿ ಬಂಧನ

ಮಂಡ್ಯ: ಶ್ರೀರಂಗಪಟ್ಟಣದ ಮಸೀದಿಯ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ರಿಷಿಕುಮಾರ ಸ್ವಾಮೀಜಿ ಅವರನ್ನು ಪೊಲೀಸರು ಇಂದು (ಸೋಮವಾರ) ಬೆಳಿಗ್ಗೆ ಬಂಧಿಸಿದ್ದಾರೆ. ಶ್ರೀರಂಗಪಟ್ಟಣ ಜಾಮೀಯಾ ಮಸೀದಿ ಕುರಿತು ವಿವಾದಿತ ಹೇಳಿಕೆ ನೀಡಿದ್ದರು. ಈ ಬಗ್ಗೆ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಚಿಕ್ಕಮಗಳೂರಲ್ಲಿ ಋಷಿ ಕುಮಾರ ಸ್ವಾಮೀಜಿ ಅವರನ್ನು ಬಂಧಿಸಿದ್ದಾರೆ. ಪೊಲೀಸರು ಶ್ರೀರಂಗಪಟ್ಟಣ ಠಾಣೆಗೆ ಕರೆತಂದು … Continued

ಅಕ್ರಮ ಮರಳುಗಾರಿಕೆ ಪ್ರಕರಣ: ಪಂಜಾಬ್‌ ಸಿಎಂ ಚನ್ನಿ ಸೋದರಳಿಯ-ಇತರರ ಮನೆಗಳ ಮೇಲೆ ಇಡಿ ದಾಳಿ

ಚಂಡೀಗಢ: ಅಕ್ರಮ ಮರಳು ಗಣಿಗಾರಿಕೆ ಕಂಪನಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆಗೆ ಕೇವಲ ಒಂದು ತಿಂಗಳು ಇರುವಾಗ ಜಾರಿ ನಿರ್ದೇಶನಾಲಯ ಮಂಗಳವಾರ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ. ತನಿಖಾ ಸಂಸ್ಥೆಯು ಇಂದು ಮುಂಜಾನೆ ಮೊಹಾಲಿಯಲ್ಲಿರುವ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಭೂಪಿಂದರ್ ಸಿಂಗ್ ಹನಿ ಅವರ … Continued

ಬ್ಯಾಂಕ್‌ ವಿರುದ್ಧ ಏಕಾಂಗಿಯಾಗಿ ಧರಣಿ ಕುಳಿತು ಗೆದ್ದ ಮಹಿಳೆ

ಮೈಸೂರು: ಸ್ವಯಂ ಉದ್ಯೋಗಕ್ಕಾಗಿ ಸಾಲ ಪಡೆಯಲು ಬ್ಯಾಂಕಿಗೆ ಅಲೆದಾಡಿದರೂಆರ್ಥಿಕ ನೆರವು ದೊರೆಯದಿದ್ದಾಗ ಮಹಿಳೆಯೊಬ್ಬರು ಬ್ಯಾಂಕಿನ ಮುಂಭಾಗದಲ್ಲಿಯೇ ಧರಣಿಗೆ ಕುಳಿತು ನ್ಯಾಯ ಪಡೆದ ಘಟನೆ ಮೈಸೂರಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮಹಿಳೆಯ ಹೋರಾಟದಿಂದ ಎಚ್ಚೆತ್ತ ಬ್ಯಾಂಕಿನ ಅಧಿಕಾರಿಗಳು ಆ ಮಹಿಳೆಗೆ ಸಾಲ ಸೌಲಭ್ಯ ನೀಡುವ ಭರವಸೆ ನೀಡಿದ್ದಾರೆ. ಮೈಸೂರಿನ ನೀಲಿ ಕಲಾ ಕ್ರಿಯೇಷನ್ಸ್‌ನ ಸಂಸ್ಥಾಪಕಿ, ಮಣ್ಣಿನ ಆಭರಣಗಳ … Continued

ದೂಧ್‌ಸಾಗರ್ ಬಳಿ ಹಳಿತಪ್ಪಿದ ಎಕ್ಸ್‌ಪ್ರೆಸ್ ಹೌರಾ ರೈಲು: ಪ್ರಯಾಣಿಕರು ಸುರಕ್ಷಿತ

ಬೆಳಗಾವಿ: ಮಂಗಳವಾರ ಬೆಳಗ್ಗೆ ಹೌರಾಕ್ಕೆ ತೆರಳುತ್ತಿದ್ದ ದೂಧ್‌ಸಾಗರ್ ಬಳಿ ಹಳಿತಪ್ಪಿದೆ. ವರದಿಗಳ ಪ್ರಕಾರ, ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ವಾಸ್ಕೋ-ಡಿ-ಗಾಮಾ ಹೌರಾ ಅಮರಾವತಿ ಎಕ್ಸ್‌ಪ್ರೆಸ್ ಇಂದು, ಸೋಮವಾರ ಬೆಳಿಗ್ಗೆ 8:56 ಕ್ಕೆ ದೂಧ್‌ಸಾಗರ್ ಮತ್ತು ಕರಂಜೋಲ್ (ಗೋವಾದಲ್ಲಿ) ನಡುವೆ ಹಳಿತಪ್ಪಿತು, ಅದರ ಪ್ರಮುಖ ಲೊಕೊದ ಮುಂಭಾಗದ ಜೋಡಿ ಚಕ್ರಗಳು ಹಳಿತಪ್ಪಿದವು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ … Continued

ಸಾಹಿತಿ ಚಂದ್ರಶೇಖರ ಕಂಬಾರ ಪತ್ನಿ ಸತ್ಯಭಾಮ ಕಂಬಾರ ನಿಧನ

ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ಪತ್ನಿ ಸತ್ಯಭಾಮ ಕಂಬಾರ (76) ಇಂದು, ಸೋಮವಾರ ಬೆಳಿಗ್ಗೆ ನಿಧನರಾದರು. ಸತ್ಯಭಾಮ ಅವರುಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಜನವರಿ 3ರಂದು ಸತ್ಯಭಾಮ ಆಸ್ಪತ್ರೆಗೆ ದಾಖಲಾಗಿದ್ದರು. ಸತ್ಯಭಾಮ ಚಂದ್ರಶೇಖರ ಕಂಬಾರ ನಿಧನಕ್ಕೆ ಸಿಎಂ ಬೊಮ್ಮಾಯಿ ಸಂತಾಪ ವ್ಯಕ್ತಪಡಿಸಿದ್ದಾರೆ: ಜ್ಞಾನಪೀಠ ಪ್ರಶಸ್ತಿ … Continued

ಕಾರಿನ ಟೈರ್ ಸ್ಫೋಟದಿಂದ ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು

ಚಿಕ್ಕಮಗಳೂರು: ಕಾರಿನ ಟೈರ್ ಸ್ಫೋಟದಿಂದ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಆಗುಂಬೆಯಿಂದ ಕೊಪ್ಪಕ್ಕೆ ಬರುತ್ತಿರುವಾಗ ಕೊಪ್ಪ ಹರಿಹರಪುರ ರಸ್ತೆಯ ಬಳಿ ನಾಗಲಾಪುರ ಸೇತುವೆ ಸಮೀಪ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಒಟ್ಟು ನಾಲ್ಕು ಜನ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದ್ದು, ಇಬ್ಬರು ಸ್ಥಳದಲ್ಲಿಯೇ ಮೃತರಾಗಿದ್ದಾರೆ. ಇನ್ನಿಬ್ಬರಿಗೆ … Continued