ಕೋವಿಡ್‌-19 ಗರಿಷ್ಠ ದಾಟಿದ್ದೇವೆಯೇ?…ಕೊರೊನಾ ಉಲ್ಬಣದ ಮಧ್ಯೆಯೇ ಹಲವು ದೊಡ್ಡ ನಗರಗಳಲ್ಲಿ ಸೋಂಕು ಇಳಿಮುಖ

ನವದೆಹಲಿ: ಭಾರತದ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಲೇ ಇದ್ದರೂ, ಹಲವಾರು ಪ್ರಮುಖ ನಗರಗಳು ಈಗ ಇಳಿಕೆಯ ಪ್ರವೃತ್ತಿಯನ್ನು ವರದಿ ಮಾಡಲು ಪ್ರಾರಂಭಿಸಿವೆ. ಸೋಮವಾರ 31,111 ಹೊಸ ಪ್ರಕರಣಗಳನ್ನು ವರದಿ ಮಾಡಿರುವ ಮಹಾರಾಷ್ಟ್ರ – ಹಿಂದಿನ ದಿನಕ್ಕಿಂತ 10 ಸಾವಿರ ಕಡಿಮೆ ವರದಿ ಮಾಡಿದೆ. ಪಶ್ಚಿಮ ಬಂಗಾಳದಂತೆ ದೆಹಲಿ ಕೂಡ ಸಂಖ್ಯೆಯಲ್ಲಿ ಗಮನಾರ್ಹ ಕುಸಿತವನ್ನು ವರದಿ ಮಾಡಿದೆ.
ಭಾನುವಾರ 18,286 ಹೊಸ ಕೋವಿಡ್-19 ಪ್ರಕರಣಗಳು ಮತ್ತು 28 ಸಾವುಗಳನ್ನು ವರದಿ ಮಾಡಿದ್ದ ದೆಹಲಿಯಲ್ಲಿ ಸೋಮವಾರ 12,527 ಪ್ರಕರಣಗಳು ಮತ್ತು 24 ಹೆಚ್ಚಿನ ಸಾವುಗಳು ವರದಿಯಾಗಿವೆ. ಆದಾಗ್ಯೂ ಧನಾತ್ಮಕತೆಯ ದರವು 27.99% ಸ್ವಲ್ಪಮಟ್ಟಿಗೆ ಏರಿದೆ ಎಂಬುದನ್ನೂ ಗಮನಿಸಬೇಕಾಗಿದೆ.
ಇತ್ತೀಚಿನ ಆರೋಗ್ಯ ಬುಲೆಟಿನ್ ಪ್ರಕಾರ, ದೆಹಲಿಯಲ್ಲಿ ಕೋವಿಡ್‌ -19ಕ್ಕೆ ಮೀಸಲಾದ 15,505 ಹಾಸಿಗೆಗಳಲ್ಲಿ 2,784 ಹಾಸಿಗೆಗಳಲ್ಲಿ ಮಾತ್ರ ರೋಗಿಗಳು ದಾಖಲಾಗಿದ್ದಾರೆ. ದೆಹಲಿ ಮುಖ್ಯಮಂತ್ರಿಗಳ ಕಚೇರಿಯ ಅಪ್‌ಡೇಟ್ ಪ್ರಕಾರ, ಸಕ್ರಿಯ ಪ್ರಕರಣಗಳ ಸಂಖ್ಯೆಯು ಹಲವಾರು ಸಾವಿರ ಸೋಂಕುಗಳಿಂದ ಕುಸಿದಿದ್ದು ಸೋಮವಾರ ಸಂಜೆ 83,982 ಕ್ಕೆ ತಲುಪಿದೆ.
ಏತನ್ಮಧ್ಯೆ, ಪ್ರಕರಣಗಳು ಕಡಿಮೆಯಾಗುತ್ತಿರುವುದರಿಂದ, ಪಶ್ಚಿಮ ಬಂಗಾಳವು 2022 ರ ಆರಂಭದಲ್ಲಿ ಜಾರಿಗೊಳಿಸಲಾದ ಭಾಗಶಃ ಲಾಕ್‌ಡೌನ್‌ನ ಸ್ವಲ್ಪ ಸಡಿಲಿಕೆ ಮಾಡುವುದಾಗಿ ಘೋಷಿಸಿದೆ. ಸೋಮವಾರ ಪಶ್ಚಿಮ ಬಂಗಾಳವು 9,385 ಹೊಸ ಕೋವಿಡ್‌-19 ಪ್ರಕರಣಗಳು ಮತ್ತು 33 ಸಾವುಗಳನ್ನು ವರದಿ ಮಾಡಿದೆ, ಇದು ಸಕ್ರಿಯ ಸಂಖ್ಯೆಯನ್ನು 1.58 ಲಕ್ಷವನ್ನು ಮೀರಿದೆ. ಕಳೆದ ಎರಡು ವಾರಗಳಲ್ಲಿ ಸಕಾರಾತ್ಮಕತೆಯ ದರವು 37% ಕ್ಕೆ ಏರಿದ್ದರೆ, ಅದು ಸೋಮವಾರ 26.43% ಕ್ಕೆ ಇಳಿದಿದೆ.
ಜನವರಿ 9 ರಂದು ಸಾರ್ವಕಾಲಿಕ ಗರಿಷ್ಠ ದೈನಂದಿನ ಪ್ರಕರಣದಿಂದ 24,272ರಿಂದ, ಸೋಮವಾರ ದೈನಂದಿನ ಪ್ರಕರಣ 9,385 ಕ್ಕೆ ಇಳಿದಿದೆ. ರಾಜ್ಯ ಆರೋಗ್ಯ ಇಲಾಖೆಯ ಅಂಕಿಅಂಶಗಳು ಕಳೆದ ಏಳು ದಿನಗಳಿಂದ ಸಂಖ್ಯೆಗಳು ಸ್ಥಿರವಾಗಿ ಕಡಿಮೆಯಾಗುತ್ತಿವೆ ಎಂದು ಸೂಚಿಸುತ್ತದೆ.
ಕರ್ನಾಟಕದಲ್ಲಿಯೂ ಸೊಮವಾರ ಪ್ರಕರಣಗಳು ಇಳಿಮುಖವಾಗಿದೆ. ಭಾನುವಾರ 34,047 ದೈನಂಧಿನ ಪ್ರಕರಣ ದಾಖಲಾಗಿತ್ತು. ಸೋಮವಾರ 27,156 ಪ್ರಕರಣಗಳು ದಾಖಲಾಗಿವೆ. ಬೆಂಗಲೂರಿನಲ್ಲಿಯೇ ದೈನಂದಿನ ಪ್ರಕರಣಗಳು ಇಳಿಕೆಯಾಗುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ. ಬೆಂಗಲೂರಿನಲ್ಲಿ ಶನಿವಾರದಿಂದಲೇ ದೈನಂದಿನ ಪ್ರಕರಣಗಳು ಇಳಿಕೆ ಕಾಣುತ್ತಿವೆ. ಬೆಂಗಳೂರಿನಲ್ಲಿ ಸೋಮವಾರ 15,947 ಹೊಸ ಸೋಂಕು ಪತ್ತೆಯಾಗಿದೆ. ಇದು ಕಳೆದ ಶನಿವಾರ 22,284 ಪ್ರಕರಣಗಳು ಹಾಗೂ ಭಾನುವಾರ 21,071 ಪ್ರಕರಣಗಳು ದಾಖಲಾಗಿತ್ತು. ಅದೇರೀತಿ ಸಕಾರಾತ್ಮ ದರ ಸಹ ಕಡಿಮೆಯಾಗಿದೆ. ಭಾನುವಾರ ಕರ್ನಾಟಕದ ಸಕಾರಾತ್ಮಕತೆ ದರ 19.29% ರಷ್ಟಿತ್ತು. ಸೋಮವಾರ 12.45%ರಷ್ಟಕ್ಕೆ ಇಳಿದಿದೆ.

ಪ್ರಮುಖ ಸುದ್ದಿ :-   ರಾಹುಲ್ ಗಾಂಧಿ ಸ್ಪರ್ಧೆಯ ಸಸ್ಪೆನ್ಸ್ ನಡುವೆ ಅಮೇಥಿಯಲ್ಲಿ ರಾರಾಜಿಸುತ್ತಿರುವ "ರಾಬರ್ಟ್ ವಾದ್ರಾ ಅಬ್ ಕಿ ಬಾರ್" ಪೋಸ್ಟರ್...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement