ಬೆಂಗಳೂರು: ಆತ್ಮಗಳ ಜೊತೆ ಮಾತಾಡುತ್ತೇನೆಂದು ಮನೆ ಬಿಟ್ಟು ಹೋಗಿದ್ದ ಬಾಲಕಿ ಕೊನೆಗೂ ಪತ್ತೆಯಾಗಿದ್ದು, ಗುಜರಾತ್‍ನ ಸೂರತ್‍ನಲ್ಲಿ ಪತ್ತೆಯಾಗಿದ್ದಾಳೆ.
ಕಳೆದ ಅಕ್ಟೋಬರ್ 31ರಂದು ಮನೆಬಿಟ್ಟು ತೆರಳಿದ್ದ ಈಕೆಗಾಗಿ ಪಾಲಕರು ಪೊಲೀಸ್ ದೂರು ದಾಖಲಿಸಿದ್ದರು ಹಾಗೂ ಸಾಮಾಜಿಕ ಜಾಲತಾಣದಲ್ಲಿಯೂ ಸಾರ್ವಜನಿಕರವಅಗಿ ಹುಡುಕಿಕೊಡುವಂತೆ ಮನವಿ ಮಾಡಿದ್ದರು. 78 ದಿನಗಳ ಬಳಿಕ ಸೂರತ್‍ನಲ್ಲಿ ಜನವರಿ 15 ರಂದು ಬಾಲಕಿ ಪತ್ತೆಯಾಗಿದ್ದಾಳೆ. ಬಾಲಕಿಯು ಆತ್ಮಗಳ ಜೊತೆ ಮಾತನಾಡುವದನ್ನು ಅಭ್ಯಾಸ ಮಾಡುತ್ತೇನೆಂದು ಬೆಂಗಳೂರಿನಿಂದ ಸೂರತ್ ತಲುಪಿದ್ದು, ಸೂರತ್‍ನ ಆಶ್ರಮವೊಂದರಲ್ಲಿ ಪತ್ತೆಯಾಗಿದ್ದಾಳೆ.
ಸದ್ಯ ಸುಬ್ರಹ್ಮಣ್ಯನಗರ ಪೊಲೀಸರು ಅಪ್ರಾಪ್ತ ಬಾಲಕಿಯನ್ನ ಪೋಷಕರಿಗೆ ಒಪ್ಪಿಸಿದ್ದಾರೆ.
advertisement
9535127775 / 9901837775 / 6364528715 / 08362775155 / https://icsmpucollege.com/
ನಿಮ್ಮ ಕಾಮೆಂಟ್ ಬರೆಯಿರಿ