ಬಿಹಾರದಲ್ಲಿ 4 ಕಾಲು, 4 ಕೈಗಳಿರುವ ವಿಚಿತ್ರ ಮಗು ಜನನ: ವೀಕ್ಷಿಸಿ

ಕತಿಹಾರ್, ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ನಾಲ್ಕು ಕೈಗಳು ಮತ್ತು ನಾಲ್ಕು ಕಾಲುಗಳಿರುವ ಮಗು ಜನಿಸಿದೆ. ಜನರು ಅದನ್ನು ದೈವಿಕ ಪವಾಡವೆಂದು ಪರಿಗಣಿಸುತ್ತಿದ್ದಾರೆ. ಮಗುವಿಗೆ ಒಂದು ತಲೆ, ನಾಲ್ಕು ಕೈಗಳು ಮತ್ತು ನಾಲ್ಕು ಕಾಲುಗಳಿವೆ.
ಕೆಲವರು ಇದನ್ನು ದೇವರ ಅವತಾರ ಎಂದು ಕರೆಯುತ್ತಿದ್ದಾರೆ. ಇದೇ ವೇಳೆ ಈ ಮಗುವನ್ನು ನೋಡಲು ಆಸ್ಪತ್ರೆಯಲ್ಲಿ ಜನಸಾಗರವೇ ನೆರೆದಿತ್ತು.
ಮಗುವಿನ ಜನನದ ನಂತರ ನರ್ಸ್ ಮತ್ತು ವೈದ್ಯರ ನಡುವೆ ಹಲವು ರೀತಿಯ ಚರ್ಚೆಗಳು ನಡೆಯಲಾರಂಭಿಸಿವೆ ಎನ್ನಲಾಗಿದೆ.
ಮಗು ಆರೋಗ್ಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಮಗುವಿಗೆ ನಾಲ್ಕು ಕಾಲು, ನಾಲ್ಕು ಕೈಗಳು ಇರುವುದರಿಂದ ಈ ವಿಷಯ ಇಡೀ ಪ್ರದೇಶದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಸದ್ಯ ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಗುವಿನ ಜನನದ ನಂತರ, ಅನೇಕ ಜನರು ನೋಡಲು ಆಸ್ಪತ್ರೆಗೆ ಬರುತ್ತಿದ್ದಾರೆ.

ಮಗು ಜನಿಸಿದ ಸುದ್ದಿ ಗೊತ್ತಾಗುತ್ತಿದ್ದಂತೆ ಎರಡೂ ಕುಟುಂಬದ ಸದಸ್ಯರಲ್ಲಿ ಸಂತಸ ಮನೆ ಮಾಡಿತ್ತು. ಆದರೆ, ನವಜಾತ ಶಿಶುವಿಗೆ ನಾಲ್ಕು ಕೈ ಮತ್ತು ನಾಲ್ಕು ಕಾಲುಗಳಿವೆ ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ.
ವೈದ್ಯರ ವಿರುದ್ಧ ಕುಟುಂಬಸ್ಥರ ಆರೋಪಹೆರಿಗೆ ಮಾಡಿಸಿಕೊಳ್ಳುವುದಕ್ಕೂ ಮುಂಚಿತವಾಗಿ ಅನೇಕ ಸಲ ಅಲ್ಟ್ರಾಸೌಂಡ್ ಪರೀಕ್ಷೆ ಮಾಡಿಸಲಾಗಿದೆ. ಈ ವೇಳೆ ವೈದ್ಯರು ಯಾವುದೇ ರೀತಿಯ ಮಾಹಿತಿ ತಿಳಿಸಿಲ್ಲ. ಪ್ರತಿ ಸಲ ಕೂಡ ಮಗು ಆರೋಗ್ಯವಾಗಿದೆ ಎಂದೇ ಹೇಳುತ್ತಿದ್ದರು. ಆದರೆ, ಇದೀಗ ಮಗು ವಿಚಿತ್ರವಾಗಿ ಜನಿಸಿದೆ ಎಂದು ದೂರಿದ್ದಾರೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯರು, ‘ಮಗು ದೈಹಿಕವಾಗಿ ವಿಕಲಾಂಗವಾಗಿದೆ. ಮಹಿಳೆಯ ಗರ್ಭದಲ್ಲಿ ಅವಳಿ ಮಕ್ಕಳಿದ್ದು, ಅವುಗಳು ಸರಿಯಾಗಿ ಬೆಳವಣಿಗೆ ಆಗದ ಕಾರಣ ಈ ರೀತಿಯಾಗಿ ಜನಿಸಿದೆ. ಸದ್ಯ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ’ ಎಂದು ತಿಳಿಸಿದ್ದಾರೆ.

ಓದಿರಿ :-   ಪಂಚಾಯತ್ ಚುನಾವಣೆ ಗೆಲುವಿನ ವಿಜಯೋತ್ಸವದಲ್ಲಿ 'ಪಾಕಿಸ್ತಾನ ಪರ' ಘೋಷಣೆ : 62 ಮಂದಿ ವಿರುದ್ಧ ಪ್ರಕರಣ ದಾಖಲು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ