ಮುಲಾಯಂ ಸಿಂಗ್ ಯಾದವ್ ಸೊಸೆ ಇಂದು ಬಿಜೆಪಿಗೆ ಸೇರ್ಪಡೆ..?: ಬಿಜೆಪಿ ನಾಯಕನ ಹೇಳಿಕೆ

ನವದೆಹಲಿ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಅವರು ಇಂದು ಅಥವಾ ನಾಳೆ ಬಿಜೆಪಿ ಸೇರಲಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಮಂಗಳವಾರ ರಾತ್ರಿ ಹೇಳಿದ್ದಾರೆ. ಯಾದವ್ ಅವರು ಬಿಜೆಪಿಗೆ ಸೇರ್ಪಡೆಯಾದರೆ, ರಾಜ್ಯ ಚುನಾವಣೆಗೆ ಕೆಲವೇ ವಾರಗಳಿರುವಾಗ ಸಮಾಜವಾದಿ ಪಕ್ಷಕ್ಕೆ ದೊಡ್ಡ ಹೊಡೆತ ಬೀಳಲಿದೆ.
ಮುಲಾಯಂ ಸಿಂಗ್ ಯಾದವ್ ಅವರ ಪುತ್ರ ಅಖಿಲೇಶ ಯಾದವ್ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಗೆ ಪ್ರಮುಖ ಸವಾಲಾಗಿ ಹೊರಹೊಮ್ಮಿದ್ದಾರೆ. 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ವಿರೋಧಿ ರಂಗವನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿರುವ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ಎನ್‌ಸಿಪಿ – ಹಲವಾರು ವಿರೋಧ ಪಕ್ಷಗಳ ಬೆಂಬಲವನ್ನು ಅವರು ಗಳಿಸಿದ್ದಾರೆ.
ಅಪರ್ಣಾ ಯಾದವ್ ಅವರು ಮುಲಾಯಂ ಸಿಂಗ್ ಅವರ ಕಿರಿಯ ಪುತ್ರ ಪ್ರತೀಕ್ ಅವರ ಪತ್ನಿ. ಉತ್ತರ ಪ್ರದೇಶದ ಮೂವರು ಸಚಿವರು ಮತ್ತು ಹಲವಾರು ಬಿಜೆಪಿ ಶಾಸಕರು ಆಡಳಿತ ಪಕ್ಷವನ್ನು ತೊರೆದ ಕೆಲವೇ ದಿನಗಳಲ್ಲಿ ಅಪರ್ಣಾ ಯಾದವ್‌ ಪ್ರತಿಸ್ಪರ್ಧಿ ಪಕ್ಷಕ್ಕೆ ಸೇರುತ್ತಾರೆ ಎಂಬ ಊಹಾಪೋಹಗಳು ಜೋರಾಗಿವೆ.
ಮೂವರು ಮಾಜಿ ಮಂತ್ರಿಗಳಾದ ಸ್ವಾಮಿ ಪ್ರಸಾದ್ ಮೌರ್ಯ, ಧರಂ ಸಿಂಗ್ ಸೈನಿ ಮತ್ತು ದಾರಾ ಸಿಂಗ್ ಚೌಹಾಣ್ – ಅವರನ್ನು ಅಖಿಲೇಶ್ ಯಾದವ್ ಅವರು ತಮ್ಮ ಪಕ್ಷಕ್ಕೆ ಸ್ವಾಗತಿಸಿದರು. ವಿನಯ್ ಶಾಕ್ಯ, ರೋಷನ್ ಲಾಲ್ ವರ್ಮಾ, ಮುಕೇಶ್ ವರ್ಮಾ, ಮತ್ತು ಭಗವತಿ ಸಾಗರ್ ಅವರು ನಂತರ ಸೇರಿದ ಶಾಸಕರಲ್ಲಿ ಸೇರಿದ್ದಾರೆ.
ದೊಡ್ಡ ಹಿನ್ನಡೆಯ ನಂತರ ಹರ್ಯಾಣ ಬಿಜೆಪಿ ಉಸ್ತುವಾರಿ ಅರುಣ್ ಯಾದವ್ ಮಂಗಳವಾರ ರಾತ್ರಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ: “ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಪುತ್ರ ಪ್ರತೀಕ್ ಅವರ ಪತ್ನಿ ಅಪರ್ಣಾ ಯಾದವ್ ಅವರು ಬುಧವಾರ ಬಿಜೆಪಿ ಸೇರಲಿದ್ದಾರೆ. 10 ಗಂಟೆಗೆ ಯೋಗಿ ಆದಿತ್ಯನಾಥ್ ಉಪಸ್ಥಿತರಿರುವರು ಎಂದು ತಿಳಿಸಿದ್ದಾರೆ.

ಓದಿರಿ :-   ತಾಲಿಬಾನ್‌ನಿಂದ ಹೊಸ ನಿಯಮ: ಟಿವಿ ಚಾನೆಲ್‌ಗಳಲ್ಲಿ ನಿರೂಪಕಿಯರು ಮುಖ ಮುಚ್ಚಿಕೊಂಡೇ ಕಾರ್ಯಕ್ರಮ ನೀಡ್ಬೇಕಂತೆ..!

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ