ಕಾಳಿ ನದಿಯಲ್ಲಿ ಮೊಸಳೆಯೊಂದಿಗೆ ಪತ್ತೆಯಾದ ಮೃತದೇಹ..!

ದಾಂಡೇಲಿ : ನಗರದ ಕುಳಗಿ ರಸ್ತೆಯಯಲ್ಲಿ ಸೇತುವೆಯ ಕೆಳಗಿನಿಂದ ಮೊಸಳೆಯ ಜೊತೆ ತೇಲಿಕೊಂಡು ಹೋಗುತ್ತಿದ್ದ ಮೃತದೇಹವನ್ನು ಪತ್ತೆ ಹಚ್ಚಿ ಮೊಸಳೆಯ ಬಾಯಿಂದ ಬಿಡಿಸಿ ದಡಕ್ಕೆ ತೆಗೆದುಕೊಂಡು ಬಂದ ವಿದ್ಯಮಾನ ಸಮೀಪದ ಕೋಗಿಲಬನದ ಹತ್ತಿರದಲ್ಲಿ ದಬದಬೆ ಎಂಬಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ಇಂದು ಬೆಳ್ಳಂ ಬೆಳಗ್ಗೆ ಸುಮಾರು ೨೫ ರಿಂದ ೩೫ ವರ್ಷ ಅಂದಾಜು ವಯಸ್ಸಿನ ಯುವಕನ ಮೃತದೇಹವೊಂದು ತೇಲಿಕೊಂಡು ಹೋಗುತ್ತಿರುವ ವಿಚಾರ ತಿಳಿದು, ಮೃತದೇಹದ ಶೋಧ ಕಾರ್ಯಾಚರಣೆ ಆರಂಭಿಸಲಾಯಿತು. ಸ್ಥಳಕ್ಕೆ ತಹಶೀಲ್ದಾರ್ ಶೈಲೇಶ ಪರಮಾನಂದ, ಪೌರಾಯುಕ್ತರಾದ ಆರ್.ಎಸ್.ಪವಾರ್, ಪಿಎಸೈಗಳಾದ ಐ.ಆರ್.ಗಡ್ಡೇಕರ ಮತ್ತು ಕಿರಣ್ ಪಾಟೀಲ ಅವರುಗಳ ತಂಡ ಟ್ರಕ್ ಟರ್ಮಿನಲ್ ಪ್ರದೇಶದ ಹತ್ತಿರವಿರುವ ಕಾಳಿ ನದಿಯ ದಡಕ್ಕೆ ಆಗಮಿಸಿ ಮುಂದಿನ ಕಾರ‍್ಯಾಚರಣೆಗೆ ಮುಂದಾದರು.
ಪ್ರವಾಸೋದ್ಯಮಿ ರವಿ ನಾಯ್ಕ ಮಾಲಕತ್ವದ ರ‍್ಯಾಪ್ಟಿನಲ್ಲಿ ನುರಿತ ಈಜುಗಾರರಾದ ಬಾಪುಜಿ ಪೇಟೆ, ಸನೀಲ್, ಅರುಣ್, ಗೋಪಾಲ, ಪ್ರವೀಣ, ಇಸೂಬ್ ಮತ್ತು ಗಣೇಶ ಅವರನ್ನೊಳಗೊಂಡ ತಂಡ ಮೃತದೇಹವನ್ನು ಪತ್ತೆಗೆ ಮುಂದಾಗಿದ್ದರು. ಶೋಧ ಕರ‍್ಯಾಚರಣೆಯ ಸಂದರ್ಭದಲ್ಲಿ ಸ್ಥಳೀಯ ಕೋಗಿಲಬನದ ಹತ್ತಿರ ದಬದಬೆ ಎಂಬಲ್ಲಿ ಮೃತದೇಹವನ್ನು ಮೊಸಳೆಯ ಬಾಯಿಯಿಂದ ಎಳೆದು ತರುವಲ್ಲಿ ಈ ತಂಡ ಯಶಸ್ವಿಯಾಯಿತು. ಕಾರ‍್ಯಾಚರಣೆಗೆ ನಗರ ಠಾಣೆ ಮತ್ತು ಗ್ರಾಮೀಣ ಠಾಣೆಯ ಪೊಲೀಸರು ಸಹಕರಿಸಿದ್ದಾರೆ.
ತ ದಡಕ್ಕೆ ತರಲಾಗಿದ್ದ ಮೃತದೇಹವನ್ನು ಅಲ್ಲೆ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಶವ ಸಂಪೂರ್ಣ ಕೊಳೆತು ಹೋಗಿರುವುದರಿಂದ ಮತ್ತು ಬಹುತೇಕ ಭಾಗಗಳನ್ನು ಮೊಸಳೆ ತಿಂದಿರುವುದರಿಂದ ಸ್ಥಳದಲ್ಲಿಯೇ ಪಂಚನಾಮೆ ಹಾಗೂ ಇನ್ನಿತರ ಕಾನೂನಾತ್ಮಕ ಕ್ರಮ ಕೈಗೊಂಡು ಅಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಯಿತು.ಮೃತ ವ್ಯಕ್ತಿ ಯಾರೆಂದು ಇನ್ನೂ ತಿಳಿದುಬಂದಿಲ್ಲ.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement