ಚಾಲಕರು ಮಾಡುತ್ತಿರುವ ಜನಸಾಮಾನ್ಯರ ಸೇವೆಗೆ ಬೆಲೆಕಟ್ಟಲಾಗದು: ಡಾ.ಅಜಿತ ಪ್ರಸಾದ

ಧಾರವಾಡ: ಜನಸಾಮಾನ್ಯರ ಮತ್ತು ಪ್ರತಿಯೊಬ್ಬರ ಜೀವನದ ರಥ ಎಂದೇ ಕರೆಯಲ್ಪಡುವ ಚಾಲಕರ ಮಹತ್ವ ಅರಿಯಬೇಕು. ಹಾಗೆಯೇ ಈ ಚಾಲಕರು ಮಾಡುತ್ತಿರುವ ಜನಸಾಮಾನ್ಯರ ಸೇವೆಗೆ ಬೆಲೆಕಟ್ಟಲಾಗದು .ಅದೇರೀತಿ ಪ್ರಯೋಗಾಲಯದಲ್ಲಿ ಕಾರ್ಯಮಾಡುವವರ ಸೇವೆಯು ಅಷ್ಟೇ ಮಹತ್ವದ್ದು ಎಂದು ಜೆ.ಎಸ್.ಎಸ್ ನ ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದ ಹೇಳಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ೧೦೦ ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ಶಾಖೆ ಮತ್ತು ಜಿಲ್ಲಾ ಶಾಖೆ ಧಾರವಾಡ ಮತ್ತು ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಧಾರವಾಡದ ವತಿಯಿಂದ ಚಾಲಕರು, ಕಂಡಕ್ಟರ್, ಮತ್ತು ಲ್ಯಾಬ್ ಅಂಟೆಂಡರಗಳಿಗೆ ಏರ್ಪಡಿಸಿದ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹಗಲು ರಾತ್ರಿ ಎನ್ನದೆ ಸಾರ್ವಜನಿಕ ಸೇವೆ ನೀಡುತ್ತಿರುವ ಚಾಲಕರು ಎಲ್ಲರ ಬಂಧುಗಳಾಗಿದ್ದಾರೆ. ಅಂತಹ ಸೇವೆಗೆ ಬೆಲೆಕಟ್ಟಲಾಗದು. ಹಾಗಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಇಂತಹ ಕಾರ್ಯಗಳು ಮಹತ್ವ ಪಡೆಯುತ್ತದೆ. ಅಲ್ಲದೇ ರಸ್ತೆಗಳಲ್ಲಿ ಅಪಘಾತಗಳಾದಾಗ ಅದನ್ನು ಮೊಬೈಲ್‌ಗಳಲ್ಲಿ ಚಿತ್ರೀಕರಿಸುವದರಿಂದ ನಮ್ಮಲ್ಲಿ ಅಪರಾಧ ಮನೋಭಾವನೆ ಎದ್ದು ಕಾಣುತ್ತದೆ. ಅದರ ಬದಲು ಗಾಯಗೊಂಡವರಿಗೆ ಪ್ರಥಮ ಚಕಿತ್ಸೆ ನೀಡಿದರೆ ಸಾರ್ವಜನಿಕರ ಪ್ರಾಣವನ್ನು ಉಳಿಸಬಹುದು ಎಂದು ಹೇಳಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ, ಮಕ್ಕಳತಜ್ಞರಾದ ಡಾ.ಕವನ ದೇಶಪಾಂಡೆ ಮಾತನಾಡಿ, ಕೆಳ ಹಂತದಲ್ಲಿ ಕಾರ್ಯ ಮಾಡುವ ನಿಮಗೆ ಪ್ರಥಮ ಚಿಕಿತ್ಸೆ ಹೆಚ್ಚು ಮಹತ್ವ ಪಡೆಯುತ್ತದೆ. ಹಾಗೇ ನೀವೆ ಪ್ರಥಮ ಚಿಕಿತ್ಸಕರಾಗಿ ಸೇವೆ ಮಾಡಿದ ತೃಪ್ತಿ ನಿಮ್ಮಲ್ಲಿ ಇರುತ್ತದೆ ಎಂದು ಹೇಳಿದರು.
ಪ್ರಥಮ ಚಿಕಿತ್ಸೆ ತರಬೇತಿಯ ಉಪನ್ಯಾಸಕರು ಮತ್ತು ರಕ್ತ ಭಂಡಾರದ ಮುಖ್ಯಸ್ಥರಾದ ಡಾ. ಉಮೇಶ ಹಳ್ಳಿಕೇರಿ ಉಪನ್ಯಾಸ ಮಾಡಿ ಮಾತನಾಡಿ, ರಸ್ತೆಯಲ್ಲಿ ಅಪಘಾತವಾದ ತಕ್ಷಣ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲು ಮಾಡಿಸಿದರೆ ಅಂತಹ ವ್ಯಕ್ತಿಗಳೇ ನಿಜವಾದ ರಕ್ಷಕರು ಎಂದ ಅವರು, ಇಂತಹ ಹಲವಾರು ಉದಾಹರಣೆಯೊಂದಿಗೆ ಪ್ರಥಮ ಚಿಕಿತ್ಸೆಯ ಮಹತ್ವದ ಕುರಿತು ಹೇಳಿದರು.
ತರಬೇತಿ ಕಾರ್ಯಕ್ರಮದ ಸಂಯೋಜಕರಾದ ಮಹಾವೀರ ಉಪಾದ್ಯೆ ಸ್ವಾಗತಿಸಿ ವಂದಿಸಿದರು. ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರಾದ ಮಾರ್ತಾಂಡಪ್ಪ ಕತ್ತಿ ನಿರೂಪಿಸಿದರು.ಈ ಸಂದರ್ಭದಲ್ಲಿ ಬಸ್ ಚಾಲಕರು, ಕಂಡಕ್ಟರ್, ಲ್ಯಾಬ್ ಅಟೇಂಡರಗಳು ಹಾಗೂ ಆಟೋ ಚಾಲಕರು ಉಪಸ್ಥಿತರಿದ್ದು ಪ್ರಥಮ ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದುಕೊಂಡರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement