ನನಗೆ ಪ್ರಶಸ್ತಿ ನೀಡಿದ್ದರೆ, ನಾನು ನಿರಾಕರಿಸುತ್ತೇನೆ: ಪದ್ಮಭೂಷಣ ಸ್ವೀಕರಿಸಲು ನಿರಾಕರಿಸಿದ ಬುದ್ಧದೇವ್ ಭಟ್ಟಾಚಾರ್ಯ

ನವದೆಹಲಿ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಸಿಪಿಐ(ಎಂ) ನಾಯಕ ಬುದ್ಧದೇವ್ ಭಟ್ಟಾಚಾರ್ಯ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದಾರೆ.
ಹೇಳಿಕೆಯೊಂದರಲ್ಲಿ, ಬುದ್ಧದೇವ್ ಭಟ್ಟಾಚಾರ್ಜಿ ಅವರು, “ನನಗೆ ಈ ಪ್ರಶಸ್ತಿಯ ಬಗ್ಗೆ ಏನೂ ತಿಳಿದಿಲ್ಲ, ಯಾರೂ ನನಗೆ ಈ ಬಗ್ಗೆ ಏನನ್ನೂ ಹೇಳಿಲ್ಲ, ಅವರು ನನಗೆ ಪದ್ಮಭೂಷಣ ನೀಡಲು ನಿರ್ಧರಿಸಿದ್ದರೆ, ನಾನು ಅದನ್ನು ಸ್ವೀಕರಿಸಲು ನಿರಾಕರಿಸುತ್ತೇನೆ ಎಂದು ಹೇಳಿದ್ದಾರೆ.
ಸಿಪಿಐ(ಎಂ) ಮೂಲಗಳ ಪ್ರಕಾರ, ಇದು ಭಟ್ಟಾಚಾರ್ಯ ಮತ್ತು ಪಕ್ಷದ ಎರಡೂ ನಿರ್ಧಾರವಾಗಿತ್ತು ಎಂದು ಹೇಳಿದೆ.
.”ಪದ್ಮಭೂಷಣ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಬುದ್ಧದೇವ್ ಭಟ್ಟಾಚಾರ್ಯ ಅವರು ಅದನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ರಾಜ್ಯದಿಂದ ಅಂತಹ ಪ್ರಶಸ್ತಿಗಳನ್ನು ನಿರಾಕರಿಸುವಲ್ಲಿ ಸಿಪಿಐ(ಎಂ) ನೀತಿಯು ಸ್ಥಿರವಾಗಿದೆ. ನಮ್ಮ ಕೆಲಸ ಜನರಿಗಾಗಿ, ಪ್ರಶಸ್ತಿಗಳಿಗಾಗಿ ಅಲ್ಲ. ಈ ಹಿಂದೆ ಪ್ರಶಸ್ತಿಯನ್ನು ನೀಡಿದ್ದಾಗ ಇಎಂಎಸ್ ನಂಬೂದ್ರಪಾಡ್‌ ಅದನ್ನು ನಿರಾಕರಿಸಿದ್ದರು ಎಂದು ಸಿಪಿಐ(ಎಂ) ಪಕ್ಷವು ಟ್ವಿಟರ್‌ನಲ್ಲಿ ಬರೆದಿದೆ.
ಗೃಹ ವ್ಯವಹಾರಗಳ ಸಚಿವಾಲಯವು (MHA) ಜನವರಿ 25 ರಂದು ಈ ವರ್ಷ ಪದ್ಮ ಪ್ರಶಸ್ತಿಗಳನ್ನು ನೀಡಲಾಗುವ ವ್ಯಕ್ತಿಗಳ ಹೆಸರಿನ ಪಟ್ಟಿಯನ್ನು ಹಂಚಿಕೊಂಡಿದೆ. ವಿವಿಧ ಕ್ಷೇತ್ರಗಳ 128 ವ್ಯಕ್ತಿಗಳಿಗೆ ಪದ್ಮ ಪ್ರಶಸ್ತಿ ಪ್ರಕಟಿಸಲಾಗಿದೆ.

ಓದಿರಿ :-   ಗ್ಯಾನವಾಪಿ ಮಸೀದಿಯಲ್ಲಿ ಪತ್ತೆಯಾದ 'ಶಿವಲಿಂಗದ ಕುರಿತು ಅವಹೇಳನಕಾರಿ ಹೇಳಿಕೆ: ಗುಜರಾತ್ ಎಐಎಂಐಎಂ ನಾಯಕನ ಬಂಧನ

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ