ದೇಶದಲ್ಲಿ ಅತಿ ಹೆಚ್ಚು ಆಸ್ತಿ ಹೊಂದಿರುವ ರಾಜಕೀಯ ಪಕ್ಷ ಬಿಜೆಪಿ, ಯಾವ ಪಕ್ಷದ ಬಳಿ ಎಷ್ಟೆಷ್ಟು ಆಸ್ತಿ.. ಇಲ್ಲಿದೆ ವಿವರ

ನವದೆಹಲಿ : 2019-20ನೇ ಹಣಕಾಸು ವರ್ಷದಲ್ಲಿ ಭಾರತೀಯ ಜನತಾ ಪಾರ್ಟಿ ಬಳಿ 4,847.78 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ತಿಳಿದು ಬಂದಿದೆ.
ಎಲ್ಲ ರಾಜಕೀಯ ಪಕ್ಷಗಳ ಪೈಕಿ ಎರಡನೇ ಸ್ಥಾನದಲ್ಲಿ ಬಿಎಸ್ಪಿ ಇದ್ದು, ಇದರ ಒಟ್ಟು ಆಸ್ತಿಯ ಮೌಲ್ಯ 698.33 ಕೋಟಿ ರೂ.ಗಳು. ಕಾಂಗ್ರೆಸ್​​ 588.16 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದೆ ಎಂದು ತಿಳಿದು ಬಂದಿದೆ.
ಚುನಾವಣೆ ಸುಧಾರಣೆಗಳ ಅಡ್ವೊಕಸಿ ಗ್ರೂಪ್ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್​​​​​(ADR) ಇದನ್ನ ಬಹಿರಂಗಪಡಿಸಿದೆ. 2019-20ರ ಆರ್ಥಿಕ ವರ್ಷದಲ್ಲಿ ಏಳು ರಾಷ್ಟ್ರೀಯ ಪಕ್ಷಗಳು ಮತ್ತು 44 ಪ್ರಾದೇಶಿಕ ಪಕ್ಷಗಳು ಘೋಷಣೆ ಮಾಡಿರುವ ಒಟ್ಟು ಆಸ್ತಿ ಕ್ರಮವಾಗಿ 6,988.57 ಕೋಟಿ ರೂ.ಗಳು ಮತ್ತು 2,129.38 ಕೋಟಿ ರೂ.ಗಳಾಗಿವೆ.
ಪ್ರಾದೇಶಿಕ ಪಕ್ಷಗಳ ಪೈಕಿ ಸಮಾಜವಾದಿ ಪಕ್ಷ 563.47 ಕೋಟಿ ರೂ. ಹೊಂದಿದೆ. ಟಿಆರ್​ಎಸ್​​​ 301.47 ಕೋಟಿ ಮತ್ತು ಎಐಎಡಿಎಂಕೆ 267.61 ಕೋಟಿ ರೂ. ಆಸ್ತಿ ಹೊಂದಿದೆ. ಪ್ರಾದೇಶಿಕ ಪಕ್ಷಗಳು ಘೋಷಣೆ ಮಾಡಿರುವ ಒಟ್ಟು ಆಸ್ತಿಯಲ್ಲಿ 1,639.51 ಕೋಟಿಯಷ್ಟು ಫಿಕ್ಸೆಡ್​ ಡಿಪಾಸಿಟ್​​ ಆಗಿದೆ.
ಪ್ರಾದೇಶಿಕ ಪಕ್ಷಗಳ ಪೈಕಿ ಸಮಾಜವಾದಿ ಪಕ್ಷ 434.219 ಕೋಟಿ ರೂ., ಟಿಆರ್‌ಎಸ್ 256.01 ಕೋಟಿ ರೂ., ಎಐಎಡಿಎಂಕೆ 246.90 ಕೋಟಿ ರೂ., ಡಿಎಂಕೆ 162.425 ಕೋಟಿ ರೂ., ಶಿವಸೇನೆ 148.46 ಕೋಟಿ ರೂ., ಬಿಜೆಡಿ 118.425 ಕೋಟಿ ರೂ., ಆಸ್ತಿ ಫಿಕ್ಸೆಡ್ ಡೆಪಾಸಿಟ್​​ ಆಸ್ತಿ ಹೊಂದಿವೆ.ಇದೇ ಅವಧಿಯಲ್ಲಿ ಎಲ್ಲ ಪಕ್ಷಗಳು 134.93 ಕೋಟಿ ರೂ. ಸಾಲ ಹೊಂದಿದ್ದು, ಇದರಲ್ಲಿ ರಾಷ್ಟ್ರೀಯ ಪಕ್ಷಗಳಿಂದ 74.27 ಕೋಟಿ ರೂ. ಹಾಗೂ ಪ್ರಾದೇಶಿಕ ಪಕ್ಷಗಳಿಂದ 60.66 ಕೋಟಿ ರೂ. ಆಗಿದೆ.
2015-16ರಲ್ಲಿ ಭಾರತೀಯ ಜನತಾ ಪಾರ್ಟಿ ಬಳಿ 894 ಕೋಟಿ ರೂ. ಮೌಲ್ಯದ ಆಸ್ತಿ ಇರುವುದಾಗಿ ಘೋಷಣೆ ಮಾಡಿಕೊಂಡಿತ್ತು. ಈ ವೇಳೆ ವಿಪಕ್ಷ ಕಾಂಗ್ರೆಸ್​ 759 ಕೋಟಿ ಆಸ್ತಿ ಹೊಂದಿತ್ತು. ಬಿಎಸ್‌ಪಿ 557 ಕೋಟಿ, ಸಿಪಿಎಂ 432 ಕೋಟಿ ಆಸ್ತಿಯ ಮೂಲಕ ನಂತರದ ಸ್ಥಾನ ಪಡೆದಿದ್ದವು.

ಪ್ರಮುಖ ಸುದ್ದಿ :-   ಕೋಟಕ್‌ ಮಹೀಂದ್ರಾ ಬ್ಯಾಂಕಿಗೆ ಆರ್‌ಬಿಐ ನಿರ್ಬಂಧ : ಹೊಸ ಗ್ರಾಹಕರ ಆನ್‌ಲೈನ್‌ ಸೇರ್ಪಡೆ, ಹೊಸ ಕ್ರೆಡಿಟ್‌ ಕಾರ್ಡ್‌ ವಿತರಣೆಗೆ ಬ್ರೇಕ್‌

0 / 5. 0

ಶೇರ್ ಮಾಡಿ :

  1. Kiran

    Congress assets/ deposits excluding Gandhi properties. If it’s included, then it’s 1000 times bigger than bjp and all other parties put together.

ನಿಮ್ಮ ಕಾಮೆಂಟ್ ಬರೆಯಿರಿ

advertisement