ನವಜೋತ್ ಸಿಧು ಹಣಕ್ಕಾಗಿ ತಾಯಿಯನ್ನೇ ತೊರೆದ ಕ್ರೂರ ವ್ಯಕ್ತಿ: ಸಹೋದರಿ ಸುಮನ್

ಚಂಡೀಗಢ: ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಹಣದ ಆಸೆಗಾಗಿ ವೃದ್ಧಾಪ್ಯದಲ್ಲಿದ್ದ ತಾಯಿಯನ್ನೇ ತೊರೆದಿದ್ದಾರೆ ಎಂದು ಅವರ ಹಿರಿಯ ಸಹೋದರಿ ಸುಮನ್ ತುರ್ ಆರೋಪಿಸಿದ್ದಾರೆ.ಅಮೆರಿಕದಲ್ಲಿರುವ ಸುಮನ್ ತುರ್ ಅವರು ನವಜೋತ್ ಸಿಧು ಅವರನ್ನು “ಕ್ರೂರ ವ್ಯಕ್ತಿ” ಎಂದು ಬಣ್ಣಿಸಿದ್ದಾರೆ.
ಸುಮನ್ ತುರ್ ಪ್ರಸ್ತುತ ಚಂಡೀಗಢದಲ್ಲಿದ್ದು, ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1986ರಲ್ಲಿ ತಮ್ಮ ತಂದೆ ನಿಧನರಾದ ನಂತರ ನವಜೋತ್ ಸಿಧು ತನ್ನ ತಾಯಿಯೊಂದಿಗೆ ತನ್ನನ್ನು ಹೊರಹಾಕಿದ್ದರು ಎಂದು ಆರೋಪಿಸಿದರು. ತನ್ನ ತಾಯಿ 1989 ರಲ್ಲಿ ರೈಲ್ವೇ ನಿಲ್ದಾಣದಲ್ಲಿ ನಿಧನರಾದರು ಎಂದು ತುರ್ ಹೇಳಿಕೊಂಡಿದ್ದಾರೆ.
ನಾವು ತುಂಬಾ ಕಷ್ಟದ ಸಮಯವನ್ನು ನೋಡಿದ್ದೇವೆ. ನನ್ನ ತಾಯಿ ನಾಲ್ಕು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದರು. ನಾನು ಈಗ ಹೇಳುತ್ತಿರುವುದರ ಬಗ್ಗೆ ಎಲ್ಲ ಸಾಕ್ಷ್ಯಾಧಾರಗಳು ನನ್ನ ಬಳಿ ಇವೆ” ಎಂದು ಸುಮನ್ ತುರ್ ಹೇಳಿದರು.
ಆಸ್ತಿಗಾಗಿ ಸಿಧು ನಮ್ಮ ಜೊತೆ ಸಂಬಂಧ ಕಡಿದುಕೊಂಡಿದ್ದಾರೆ ಎಂದು ಸುಮನ್ ತುರ್ ಆರೋಪಿಸಿದ್ದಾರೆ. “ನನ್ನ ತಂದೆ ಪಿಂಚಣಿ ಜೊತೆಗೆ ಮನೆ,ಜಮೀನು ಸೇರಿದಂತೆ ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ. ನವಜೋತ್ ಸಿಂಗ್ ಸಿಧು ಹಣದ ಆಸೆಗಾಗಿ ನನ್ನ ತಾಯಿಯನ್ನು ತೊರೆದರು, ನಮಗೆ ಸಿಧು ಅವರಿಂದ ಯಾವುದೇ ಹಣ ಬೇಡ” ಎಂದು ಅವರು ಹೇಳಿದರು.
ತಾಯಿಯು ತಂದೆಯಿಂದ ಬೇರ್ಪಟ್ಟಿದ್ದಾರೆ ಎಂದು ಹೇಳಿದ್ದಕ್ಕೆ ಸುಮನ್ ತುರ್ ತನ್ನ ಸಹೋದರನಿಂದ ಸಾಕ್ಷ್ಯವನ್ನು ಕೇಳಿದರು. ‘ಸುಮನ್ ತುರ್ ಅವರು ಜನವರಿ 20 ರಂದು ನವಜೋತ್ ಸಿಧು ಅವರನ್ನು ಭೇಟಿಯಾಗಲು ಹೋಗಿದ್ದರು ಆದರೆ ಅವರು ಅವಳನ್ನು ಭೇಟಿ ಮಾಡಲು ನಿರಾಕರಿಸಿದರು ಮತ್ತು ಬಾಗಿಲು ತೆರೆಯಲಿಲ್ಲ ಎಂದು ಹೇಳಿದ್ದಾರೆ.
ನವಜೋತ್ ಸಿಂಗ್ ಸಿಧು ಅವರನ್ನು ಸಂಪರ್ಕಿಸುವ ಪ್ರಯತ್ನ ವಿಫಲವಾದ ನಂತರ ನಾನು ಪತ್ರಿಕಾಗೋಷ್ಠಿಮಾಡಬೇಕಾಯಿತು. ಅವರು ನನ್ನ ಫೋನ್‌ ಸಹ ನಿರ್ಬಂಧಿಸಿದ್ದಾರೆ. ಅವರ ಕೆಲಸಗಾರರು ಸಹ ಬಾಗಿಲು ತೆರೆಯುವುದಿಲ್ಲ. ನನ್ನ ತಾಯಿಗೆ ನ್ಯಾಯ ಬೇಕು” ಎಂದು ಸುಮನ್ ತುರ್ ಹೇಳಿದರು.
ನಾನು 70 ವರ್ಷ ವಯಸ್ಸಿನವಳು ಮತ್ತು ನಮ್ಮ ಕುಟುಂಬದ ಬಗ್ಗೆ ಬಹಿರಂಗಪಡಿಸುವುದು ನಿಜವಾಗಿಯೂ ನನಗೆ ಕಠಿಣವಾಗಿದೆ” ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement