ಕೊರೋನಾ ಅಂತ್ಯಕಾಲ ಎಂದು ಘೋಷಿಸಲಿದೆ ಥೈಲ್ಯಾಂಡ್

ಕೊರೋನಾ ಅಂತ್ಯಕಾಲ ಎಂದು ಈ ವರ್ಷಾಂತ್ಯದೊಳಗೆ ಘೋಷಿಸಲು ಥೈಲ್ಯಾಂಡ್ ಸರ್ಕಾರ ನಿರ್ಧರಿಸಿದೆ. ಅಲ್ಲದೆ ಅಲ್ಲಿಯ ಕೋವಿಡ್ ನಿಯಮಾವಳಿಗಳನ್ನು ತಿದ್ದುಪಡಿ ಮಾಡಲು ಸಿದ್ಧತೆ ನಡೆಸಿದೆ. ಈ ಮೂಲಕ ಜನಜೀವನ ಕೋವಿಡ್ ಪೂರ್ವ ಹಂತಕ್ಕೆ ಮರಳಲು ಅನುವು ಮಾಡಿಕೊಡಲಿದೆ.
ತಮಗೆ ಬಂದ ಮಾಹಿತಿ, ಅಧ್ಯಯನ ವರದಿಗಳಿಂದ 2022ರ ಕೊನೆಯಲ್ಲಿ ಕೋವಿಡ್-19 ಪ್ರಸರಣ ಅಂತ್ಯವಾಗಬಹುದು. ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿಸಲಿ ಬಿಡಲಿ. ಕೋವಿಡ್ ಅಂತ್ಯಕಾಲ ಎಂದು ಘೋಷಿಸಲು ಥೈಲ್ಯಾಂಡ್ ಸಾರ್ವಜನಿಕ ಆರೋಗ್ಯ ಸಚಿವಾಲಯ ನಿರ್ಧರಿಸಿದೆ. ಈ ಕುರಿತು ನ್ಯಾಷನಲ್ ಕಮ್ಯುನಿಕೇಬಲ್ ಡಿಸಿಸ್ ಕಮಿಟಿ ಸದಸ್ಯರ ಜತೆ ಹಿರಿಯ ಅಧಿಕಾರಿಗಳು ಸಭೆ ನಡೆಸಿದ್ದಾರೆ. ತಮ್ಮದೇ ಮಾನದಂಡ, ಅಧ್ಯಯನ ವರದಿಗಳ ಆಧಾರದ ಮೇಲೆ ಈ ವರ್ಷಾಂತ್ಯದೊಳಗೇ ಕೋವಿಡ್ ಅಂತ್ಯಕಾಲ ಎಂದು ಘೋಷಿಸಲು ನಿರ್ಧರಿಸಿದ್ದಾರೆ. ತಮ್ಮ ದತ್ತಾಂಶ ಹಾಗೂ ಅಧ್ಯಯನ ವರದಿಗಳ ಆಧಾರದ ಮೇಲೆ ಕೋವಿಡ್ ಅಂತ್ಯಕಾಲ ಘೋಷಿಸಲು ನಿರ್ಧರಿಸಿದ್ದೇವೆ. ಈಗ ಕೋವಿಡ್ ನಿಂದ ಮಾರಣಾಂತಿಕ ಅಪಾಯವಿಲ್ಲ ಎಂಬುದನ್ನು ಕಂಡುಕೊಂಡಿದ್ದೇವೆ ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಕೋವಿಡ್ ಪೂರ್ವ ಹಂತಕ್ಕೆ ಮರಳಲು ಸರ್ಕಾರ ಸಿದ್ಧತೆ ನಡೆಸಿದೆ. ಈಗಾಗಲೇ ಕೋವಿಡ್ ನಿಬಂಧನೆಗಳನ್ನು ತೆರವುಗೊಳಿಸಲು ಯೋಜನೆ ರೂಪಿಸುತ್ತಿದ್ದೇವೆ ಎಂದು ಸರ್ಕಾರದ ವಕ್ತಾರರು ಹೇಳಿದ್ದಾರೆ. ಅದಾದ ಅನಂತರ ಕೋವಿಡ್ ಸೋಂಕು ಸಾಮಾನ್ಯ ಜ್ವರ-ನೆಗಡಿಯಾಗಿ ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ. ಆದರೆ ಕೋವಿಡ್ ಲಸಿಕಾ ಕೇಂದ್ರಗಳು ಹಾಗೂ ತಪಾಸಣೆ-ಚಿಕಿತ್ಸೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...: ಭಾರೀ ಮಳೆ-ಬಿರುಗಾಳಿಯ ನಡುವೆ ಹಸಿರು ಬಣ್ಣಕ್ಕೆ ತಿರುಗಿದ ದುಬೈನ ಆಕಾಶ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement