ಮದುವೆಯಾಗಿ ಚಿನ್ನಾಭರಣದೊಂದಿಗೆ ಪರಾರಿಯಾಗುವುದೇ ಈ ಯುವತಿಯ ಕಾಯಕ : 8 ಪುರುಷರಿಗೆ ಈವರೆಗೆ ಮೋಸ..!

ಭೋಪಾಲ್ : ಮದುವೆಯಾಗುವುದನ್ನೇ ಕಾಯಕವಾಗಿಸಿಕೊಂಡು ಎಂಟಕ್ಕೂ ಹೆಚ್ಚು ಪುರುಷರಿಗೆ ವಂಚಿಸಿ ಮದುವೆಯಾಗಿ ಚಿನ್ನಾಭರಣ ಮತ್ತು ನಗದು ಹಣದೊಂದಿಗೆ ಓಡಿಹೋಗಿದ್ದ 28ರ ಹರೆಯದ ಯುವತಿಯೊಬ್ಬಳು ಈಗ ಜೈಲು ಪಾಲಾಗಿದ್ದಾಳೆ…!
ಊರ್ಮಿಳಾ ಅಹಿರ್ವಾರ್ ಅಲಿಯಾಸ್ ರೇಣು ರಜಪೂತ ಎಂಬವಳೇ ಮದುವೆಯಾಗಿ ಈ ರೀತಿ ಕನಿಷ್ಠ ಎಂಟು ಮಂದಿಯನ್ನು ವಂಚಿಸಿದ್ದಾಳೆ ಎಂದು ಶಂಕಿಸಲಾಗಿದೆ.
ಬಂಧಿತ ಇತರ ಮೂವರು ಆರೋಪಿಗಳನ್ನು ಅರ್ಚನಾ ಬರ್ಮನ್ ಅಲಿಯಾಸ್ ಅರ್ಚನಾ ರಜಪೂತ್ (40), ಭಾಗ್‌ಚಂದ್ ಕೋರಿ (22) ಮತ್ತು ಅಮರ್ ಸಿಂಗ್ (50) ಎಂದು ಗುರುತಿಸಲಾಗಿದೆ. ಅವರ ಇತ್ತೀಚಿಗೆ ನೆರೆಯ ಸಿಯೋನಿ ಜಿಲ್ಲೆಯ ನಿವಾಸಿ ದಶರತ್ ಪಟೇಲ್ (41) ಎಂಬವರಿಗೆ ಮೋಸ ಮಾಡಿದ್ದರು ಎಂದು ಒಮ್ಟಿ ಪೊಲೀಸ್ ಠಾಣೆಯ ಪ್ರಭಾರಿಇನ್ಸ್‌ಪೆಕ್ಟರ್ ಎಸ್‌ಎಸ್ ಬಾಘೆಲ್ ತಿಳಿಸಿದ್ದಾರೆ.
ಆಕೆಯನ್ನು ಬಂಧಿಸಿದ ನಂತರ, ವಿಚಾರಣೆ ವೇಳೆ ಊರ್ಮಿಳಾ ಅಹಿರ್ವಾರ್ ಈ ಹಿಂದೆ ಇತರ ಏಳು ಪುರುಷರನ್ನು ವಂಚಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ. ಅವಳು ಒಬ್ಬ ವ್ಯಕ್ತಿಯನ್ನು ಮದುವೆಯಾಗಿ ಕೆಲವು ದಿನಗಳ ನಂತರ ಚಿನ್ನಾಭರಣ ಮತ್ತು ನಗದು ಹಣದೊಂದಿಗೆ ಪರಾರಿಯಾಗುತ್ತಾಳೆ ಎಂದು ಅವರು ಹೇಳಿದರು.
ಆಕೆ ರಾಜಸ್ಥಾನದ ಜೈಪುರ, ಕೋಟಾ ಮತ್ತು ಧೋಲ್‌ಪುರ ಮತ್ತು ಮಧ್ಯಪ್ರದೇಶದ ದಾಮೋಹ್ ಮತ್ತು ಸಾಗರದಲ್ಲಿ ಪುರುಷರನ್ನು ವಂಚಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ದಶರತ್ ಪಟೇಲ್ ಮತ್ತು ಅಹಿರ್ವಾರ್ ಅವರ ಮದುವೆಯನ್ನು ಅರ್ಚನಾ ಅವರ ಸಂಬಂಧಿ ಎಂದು ತೋರಿಸಿಕೊಂಡರು. ಮದುವೆಯ ಸಂದರ್ಭದಲ್ಲಿ ಪಟೇಲ್ ತನ್ನ ಸಂಬಂಧಿಕರ ನಡುವೆ ನಟಿಸುತ್ತಿದ್ದ ಅಮರ್ ಸಿಂಗ್‌ಗೆ ಆಭರಣ, ಬಟ್ಟೆ ಮತ್ತು ಹಣವನ್ನು ನೀಡಿದ್ದಾನೆ.
ಪಟೇಲ್ ಅವರ ದೂರಿನ ಪ್ರಕಾರ, ಮಂಗಳವಾರ ಜಬಲ್ಪುರದಲ್ಲಿ ಮದುವೆ ಸಮಾರಂಭದ ನಂತರ ದಂಪತಿ ಕಾರಿನಲ್ಲಿ ಅವರ ಗ್ರಾಮಕ್ಕೆ ತೆರಳಿದರು. ಒಂದು ಹಂತದಲ್ಲಿ ಊರ್ಮಿಳಾ ಅಹಿರ್ವಾರ್ ಕೆಳಗಿಳಿದು, ತನಗೆ ಅಸೌಖ್ಯವಿದೆ ಎಂದು ಹೇಳಿದ್ದಾಳೆ. ಆಗ ಭಾಗ್‌ಚಂದ್ ಕೋರಿ ಮೋಟಾರುಬೈಕಿನಲ್ಲಿ ಸ್ಥಳಕ್ಕೆ ಬಂದ ಮತ್ತು ಪಟೇಲ್ ಅವರಿಗೆ ಮದುವೆಯಲ್ಲಿ ನೀಡಿದ್ದ ನಗದು ಮತ್ತು ಚಿನ್ನಾಭರಣಗಳನ್ನು ತೆಗೆದುಕೊಂಡು ಪರಾರಿಯಾಗಿದ್ದ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಮತಗಳ ಸಂಪೂರ್ಣ ಎಣಿಕೆ : ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement