4 ವಿಕೆಟ್‌ಗಳಿಂದ ಇಂಗ್ಲೆಂಡ್ ಸೋಲಿಸಿ ದಾಖಲೆಯ ಐದನೇ ಬಾರಿಗೆ U-19 ವಿಶ್ವಕಪ್ ಪ್ರಶಸ್ತಿ ಗೆದ್ದ ಭಾರತ

ಆಂಟಿಗುವಾ: ಯಶ್ ಧುಲ್ ಅವರ ನಾಯಕತ್ವದಲ್ಲಿ, ಭಾರತ U-19 ವಿಶ್ವಕಪ್ ತಂಡವು ಐಸಿಸಿ ಪುರುಷರ U-19 ವಿಶ್ವಕಪ್ 2022 ಗೆಲ್ಲುವ ಮೂಲಕ ದಾಖಲೆಯ ಐದನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಭಾರತದ ತಂಡ ಅಂತಿಮ ಪಂದ್ಯದಲ್ಲಿ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ಅನ್ನು 4 ವಿಕೆಟ್‌ಗಳಿಂದ ಸೋಲಿಸಿತು.
ಗಮನಾರ್ಹವಾಗಿ, ನಿಶಾಂತ್ ಸಿಂಧು ಮತ್ತು ರಾಜ್ ಬಾವಾ ನಡುವಿನ ತಡವಾದ ಜೊತೆಯಾಟದ ನಂತರ ಯಶ್ ಧುಲ್ ನೇತೃತ್ವದ ಭಾರತ ತಂಡವು ಶನಿವಾರ ದಾಖಲೆಯ ಐದನೇ U-19 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಗೆಲುವಿಗೆ 190 ರನ್‌ಗಳನ್ನು ಬೆನ್ನಟ್ಟಿದ ಭಾರತದ ತಂಡ, ಒಂದು ಹಂತದಲ್ಲಿ ಕುಸಿದಿತ್ತು. ತನ್ನ ಎರಡನೇ ಪ್ರಶಸ್ತಿಯನ್ನು ಮಾತ್ರ ಗೆಲ್ಲಲು ಹೋರಾಟ ನಡೆಸಿದ್ದ ಇಂಗ್ಲೆಂಡ್ ಎದುರು ಸಿಂಧು (ಔಟಾಗದೆ 50) ಮತ್ತು ಬಾವಾ (35) ನಡುವಿನ 67 ರನ್‌ಗಳ ಜೊತೆಯಾಟಕ್ಕೆ ಮೊದಲು ಎದುರಾಳಿ ತಂಡದ ಆಸೆಗೆ ತಣ್ಣೀರೆರಚಿತು. ವಿಕೆಟ್‌ಕೀಪರ್ ದಿನೇಶ್ ಬಾನಾ ಅವರು ಜೇಮ್ಸ್ ಸೇಲ್ಸ್‌ನಲ್ಲಿ ಸತತ ಸಿಕ್ಸರ್‌ಗಳನ್ನು ಹೊಡೆದು ಭಾರತವನ್ನು ಗೆಲುವಿನತ್ತ ಕೊಂಡೊಯ್ದರು.
ಇಂಗ್ಲೆಂಡ್ ನಾಯಕ ಟಾಮ್ ಪರ್ಸ್ಟ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು – ಭಾರತದ ವೇಗಿಗಳಾದ ರವಿ ಕುಮಾರ್ (34/4) ಮತ್ತು ರಾಜ ಬಾವಾ (31/5) ತಮ್ಮ ನಡುವೆ ಒಂಬತ್ತು ವಿಕೆಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಇಂಗ್ಲೆಂಡ್‌ನ ಬ್ಯಾಟಿಂಗ್ ಪತನಕ್ಕೆ ಕಾರಣರಾದರು. ಇಂಗ್ಲೆಂಡ್ ಒಂದು ಹಂತದಲ್ಲಿ 91 ರನ್ನಿಗೆ 7 ವಿಕೆಟ್‌ ಕಳೆದುಕೊಂಡು ತತ್ತರಿಸುತ್ತಿತ್ತು, ನಂತರ ಜೇಮ್ಸ್ ರೆವ್ (116 ಎಸೆತಗಳಲ್ಲಿ 95) ಮತ್ತು ಜೇಮ್ಸ್ ಸೇಲ್ಸ್ (65 ಎಸೆತಗಳಲ್ಲಿ 34) ಎಂಟನೇ ವಿಕೆಟ್‌ಗೆ 93 ರನ್‌ಗಳ ಅಮೂಲ್ಯವಾದ ಜೊತೆಯಾಟದಿಂದ ಅವರ ತಂಡವು 189 ರನ್‌ಗಳ ಮೊತ್ತವನ್ನು ತಲುಪಿತು.
ಇದಕ್ಕುತ್ತರವಾಗಿ ಭಾರತ ಚೇಸಿಂಗ್‌ನ ಎರಡನೇ ಎಸೆತದಲ್ಲಿ ಆರಂಭಿಕ ಆಟಗಾರ ಅಂಗ್‌ಕ್ರಿಶ್ ರಘುವಂಶಿ (0) ಅವರನ್ನು ಕಳೆದುಕೊಂಡಿತು, ನಂತರ ಹರ್ನೂರ್ ಸಿಂಗ್ (46 ಎಸೆತಗಳಲ್ಲಿ 21) ಮತ್ತು ಶೇಕ್ ರಶೀದ್ (84 ಎಸೆತಗಳಲ್ಲಿ 50) ಎರಡನೇ ವಿಕೆಟ್‌ಗೆ 49 ರನ್ ಸೇರಿಸಿ ಭಾರತವನ್ನು ಸ್ಥಿರಗೊಳಿಸಿದರು. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ನಲ್ಲಿ ಅಮೂಲ್ಯ 94 ರನ್ ಗಳಿಸಿದ್ದ ರಶೀದ್ ಮತ್ತೊಮ್ಮೆ ಬಿಗ್ ಮ್ಯಾಚ್‌ನಲ್ಲಿ ತಮ್ಮ ಕ್ಲಾಸ್ ಆಟವನ್ನು ಸಾಬೀತುಪಡಿಸಿದರು.
ರಶೀದ್ ಮತ್ತು ನಾಯಕ ಯಶ್ ಧುಲ್ ಇಬ್ಬರು ಇನ್ ಫಾರ್ಮ್ ಬ್ಯಾಟ್ಸ್‌ಮನ್‌ಗಳನ್ನು ತ್ವರಿತವಾಗಿ ಕಳೆದುಕೊಂಡರೂ, ಭಾರತದ ಮಧ್ಯಮ ಕ್ರಮಾಂಕವು ನಿಶಾಂತ್ ಸಂಧು (54 ಎಸೆತಗಳಲ್ಲಿ 50*) ಮತ್ತು ರಾಜ್ ಬಾವಾ (54 ಎಸೆತಗಳಲ್ಲಿ 35) ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಸಂಧು ಅಜೇಯ ಅರ್ಧಶತಕ ಗಳಿಸಿದರು. ಭಾರತ 47.4 ಓವರ್‌ಗಳಲ್ಲಿ ಗೆಲುವಿನ ಗುರಿ ಸಾಧಿಸಿತು. ದಿನೇಶ್ ಬಾನಾ ( 5 ಎಸೆತಗಳಲ್ಲಿ ಅಜೇಯ 13 ರನ್‌) ಸತತ ಎರಡು ಸಿಕ್ಸರ್‌ಗಳನ್ನು ಹೊಡೆದರು.
ಕೂಲಿಡ್ಜ್ ಕ್ರಿಕೆಟ್ ಮೈದಾನದಲ್ಲಿ ಬುಧವಾರ ನಡೆದ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 96 ರನ್‌ಗಳ ಭರ್ಜರಿ ಜಯ ದಾಖಲಿಸಿ ಫೈನಲ್ ತಲುಪಿತ್ತು. ಇಂಗ್ಲೆಂಡ್ ಕೊನೆಯ ಬಾರಿಗೆ 1998 ರಲ್ಲಿ ತನ್ನ ಏಕೈಕ ಟ್ರೋಫಿಯನ್ನು ಗೆದ್ದಿತ್ತು.
ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ನಾಯಕ ಧುಲ್ ಇದು “ಭಾರತಕ್ಕೆ ಹೆಮ್ಮೆಯ ಕ್ಷಣ, ಸರಿಯಾದ ಸಂಯೋಜನೆಯನ್ನು ಸರಿಯಾಗಿ ಪಡೆಯುವುದು ಪ್ರಾರಂಭದಲ್ಲಿ ಕಷ್ಟಕರವಾಗಿತ್ತು. ಆದರೆ ಸಮಯ ಕಳೆದಂತೆ ನಾವು ಒಂದು ಕುಟುಂಬದಂತೆ ಆಡಿದೆವು ಮತ್ತು ತಂಡದ ವಾತಾವರಣವು ಉತ್ತಮವಾಗಿತ್ತು ಎಂದು ಹೇಳಿದರು.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಇಂದಿನ ಪ್ರಮುಖ ಸುದ್ದಿ :-   ಧರ್ಮಾಧಾರಿತ ಜನಸಂಖ್ಯೆ ಅಸಮತೋಲನ ಕಡೆಗಣಿಸುವ ವಿಚಾರವಲ್ಲ, ಎಲ್ಲ ಧರ್ಮಕ್ಕೆ ಅನ್ವಯವಾಗುವ ಜನಸಂಖ್ಯಾ ನೀತಿ ಜಾರಿ ಮಾಡಿ : ಮೋಹನ​ ಭಾಗವತ್​

 

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement