ಪ್ಯಾರಾಗ್ಲೈಡರ್ ನಲ್ಲಿ ಹಾರಲು ಜೋಡಿಸಲಾದ ಇಬ್ಬರಿಗೆ ಸಹಾಯ ಮಾಡುವ ಕೆಲಸಗಾರನೊಬ್ಬ ಗಾಳಿಯ ರಭಸಕ್ಕೆ ಅವರ ಜೊತೆಯೇ ಆಕಾಶಕ್ಕೆ ನೆಗೆಯಲ್ಪಟ್ಟ ಆಘಾತಕಾರಿ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸೋಮವಾರ ಮಧ್ಯ ಚಿಲಿಯ ಕಾರ್ಡಿಲ್ಲೆರಾ ಪ್ರಾಂತ್ಯದ ಪುಯೆಂಟೊ ಆಲ್ಟೊದ ಲಾಸ್ ವಿಜ್ಕಾಚಾಸ್‌ನಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಘಟನೆಯ ವಿಡಿಯೊವು ಇಬ್ಬರನ್ನು ಪ್ಯಾರಾಗ್ಲೈಡಿಂಗ್ ಏರ್‌ಕ್ರಾಫ್ಟ್‌ಗೆ ಕಟ್ಟಿರುವುದನ್ನು ತೋರಿಸುತ್ತದೆ ಮತ್ತು ಕ್ರ್ಯಾಶ್ ಹೆಲ್ಮೆಟ್‌ಗಳು ಸೇರಿದಂತೆ ಎಲ್ಲಾ ಸೂಕ್ತವಾದ ಗೇರ್‌ಗಳನ್ನು ಅವರು ಧರಿಸಿದ್ದಾರೆ. ಪ್ಯಾರಾಗ್ಲೈಡರ್ ಅನ್ನು ಗಾಳಿಯ ರಭಸದಿಂದ ಮೇಲಕ್ಕೆತ್ತಿದಾಗ ನೆಲದ ಕೆಲಸಗಾರನು ಪ್ಯಾರಾಗ್ಲೈಡರ್ ಅನ್ನು ಸ್ಥಾನಕ್ಕೆ ಸರಿಸಲು ಸಹಾಯ ಮಾಡುತ್ತಿದ್ದ.
ಅವರಿಗೆ ಪ್ಯಾರಾಗ್ಲೈಡರ್ ನಲ್ಲಿ ಕೂರಲು ಸಹಾಯ ಮಾಡುತ್ತಿದ್ದ ಸಿಬ್ಬಂದಿ – ಯಾವುದೇ ರಕ್ಷಣಾತ್ಮಕ ಗೇರ್‌ಗಳನ್ನು ಧರಿಸಿಲ್ಲ ಮತ್ತು ಪ್ಯಾರಾಗ್ಲೈಡರ್‌ಗೆ ಕಟ್ಟಲ್ಪಟ್ಟಿಲ್ಲ- ಗಾಳಿಯ ರಭಸದಿಂದ ಪ್ಯಾರಾಗ್ಲೈಡರ್ ಮೇಲಕ್ಕೆ ನೆಗೆದಾಗ ಆತನನ್ನು ಅದು ಎತ್ತಿಕೊಂಡು ಹೋಗಿದೆ.
ಪ್ಯಾರಾಗ್ಲೈಡರ್ ಟೇಕಾಫ್ ಆಗುತ್ತಿದ್ದಂತೆ, ಪ್ಯಾರಾಗ್ಲೈಡರ್‌ಗಳು ಮೇಲಕ್ಕೆ ಮತ್ತು ಎತ್ತರಕ್ಕೆ ಹಾರುತ್ತಿದ್ದಂತೆ ಕೆಲಸಗಾರ ಪ್ಯಾರಾಗ್ಲೈಡರ್ ಮುಂಭಾಗದ ಹಾರ್ನೆಸ್‌ನಲ್ಲಿ ನೇತಾಡುತ್ತಿರುವುದು ಕಂಡುಬರುತ್ತದೆ.
ಪೈಲಟ್ ಕೆಲಸಗಾರನು ಸರಂಜಾಮುಗಳಿಂದ ನೇತಾಡುತ್ತಿರುವುದನ್ನು ಗುರುತಿಸುತ್ತಾನೆ ಮತ್ತು ತ್ವರಿತವಾಗಿ ಕಾರ್ಯನಿರ್ವಹಿಸುತ್ತಾನೆ. ಕಡಿಮೆ ಎತ್ತರದ ಬೆಟ್ಟದ ಮೇಲೆ ಹಾರುವ ಮೂಲಕ ಕೆಸಗಾರನಿಗೆ ಧುಮುಕಲ ಸಹಾಯ ಮಾಡುವ ರೀತಿಯಲ್ಲಿ ಹಾರುತ್ತಾನೆ. ಕೆಲಸಗಾರನಿಗೆ ಸುರಕ್ಷಿತವಾಗಿ ಧುಮುಕಿದ ನಂತರ ನಂತರ ಪೈಲಟ್ ಗಾಳಿಯಲ್ಲಿ ಎತ್ತರಕ್ಕೆ ಹಾರುತ್ತಾನೆ.
ಅದೃಷ್ಟವಶಾತ್, ಘಟನೆಯಲ್ಲಿ ಕೆಲಸಗಾರನಿಗೆ ಯಾವುದೇ ಹಾನಿಯಾಗಿಲ್ಲ.
ಈ ಘಟನೆಯನ್ನು ಚಿಲಿಯ ಏರ್ ಟ್ರಾವೆಲ್ ರೆಗ್ಯುಲೇಟರ್, ಸಿವಿಲ್ ಏರೋನಾಟಿಕ್ಸ್ ಜನರಲ್ ಡೈರೆಕ್ಟರೇಟ್ (DGAC) ಗೆ ವರದಿ ಮಾಡಲಾಗಿದ್ದು, ಅವರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಇದನ್ನು ಡಿಜಿಎಸಿ (DGAC) ಯ ಅಧಿಕಾರಿಯೊಬ್ಬರು ಡೈಲಿ ಮೇಲ್‌ಗೆ ಉಲ್ಲೇಖಿಸಿದ್ದಾರೆ.
.
ನಿಮ್ಮ ಕಾಮೆಂಟ್ ಬರೆಯಿರಿ