ಹಿಜಾಬ್ ವಿವಾದ: ಮುಸ್ಕಾನ್ ಖಾನ್ ಬೆಂಬಲಿಸಿದ ಆರ್‌ಎಸ್‌ಎಸ್ ಮುಸ್ಲಿಂ ಘಟಕ, ಜೈ ಶ್ರೀ ರಾಮ್” ಘೋಷಣೆ ಕೂಗಿ ಭೀತಿಗೊಳಿಸುವ ಹುಡುಗರ ವರ್ತನೆ ಸ್ವೀಕಾರಾರ್ಹವಲ್ಲ ಎಂದು ಹೇಳಿಕೆ

ಅಯೋಧ್ಯಾ: ಕರ್ನಾಟಕ ಹಿಜಾಬ್​ ವಿವಾದದಲ್ಲಿ ಮಂಡ್ಯದ ಪಿಇಎಸ್​ ಕಾಲೇಜಿನ ವಿದ್ಯಾರ್ಥಿನಿ ಮುಸ್ಕಾನ್​ ಖಾನ್ ಅವರಿಗೆ ಆರ್​ಎಸ್​ಎಸ್​ನ ಮುಸ್ಲಿಂ ಘಟಕ, ಮುಸ್ಲಿಂ ರಾಷ್ಟ್ರೀಯ ಮಂಚ್​ ಬೆಂಬಲ ವ್ಯಕ್ತಪಡಿಸಿದೆ.
ಬೀಬಿ ಮುಸ್ಕಾನ್ ಅವರ ಹಿಜಾಬ್‌ನ ಕರೆಗೆ ಬೆಂಬಲವಾಗಿ ನಿಂತ ಮುಸ್ಲಿಂ ರಾಷ್ಟ್ರೀಯ ಮಂಚ್ ಅವಳನ್ನು ಸುತ್ತುವರೆದಿರುವ ಕೇಸರಿ ಉನ್ಮಾದವನ್ನು ಖಂಡಿಸಿದೆ. ಅಲ್ಲದೆ, ಹಿಜಾಬ್ ಅಥವಾ ‘ಪರ್ದಾ’ ಭಾರತೀಯ ಸಂಸ್ಕೃತಿಯ ಭಾಗವಾಗಿದೆ ಎಂದು ಹೇಳಿಕೆ ನೀಡಿದೆ.
ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಅವಧ್ ಪ್ರಾಂತ ಸಂಚಾಲಕ್ ಅನಿಲ್ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡಿ, “ಅವರು ನಮ್ಮ ಸಮಾಜದ ಮಗಳು ಮತ್ತು ಸಹೋದರಿ. ಅವರ ಬಿಕ್ಕಟ್ಟಿನ ಸಮಯದಲ್ಲಿ ನಾವು ಅವರೊಂದಿಗೆ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.
ಮುಸ್ಲಿಂ ರಾಷ್ಟ್ರೀಯ ಮಂಚ್ ಪ್ರಕಾರ, ಹಿಂದೂ ಸಂಸ್ಕೃತಿಯು ಮಹಿಳೆಯರಿಗೆ ಗೌರವ ನೀಡುವುದನ್ನು ಕಲಿಸುತ್ತದೆ ಮತ್ತು ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಿ ಹುಡುಗಿಯನ್ನು ಭಯಭೀತಗೊಳಿಸಲು ಪ್ರಯತ್ನಿಸುವುದು ತಪ್ಪು ಎಂದು ಅವರು ಹೇಳಿದ್ದಾರೆ.
ಹಿಜಾಬ್‌ ವಿವಾದದಲ್ಲಿ ವಿದ್ಯಾರ್ಥಿನಿ ಕ್ಯಾಂಪಸ್ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದರೆ, ಆ ಸಂಸ್ಥೆ ಕ್ರಮ ಕೈಗೊಳ್ಳುತ್ತದೆ. ಅದರ ಬದಲು
ಹುಡುಗರು ಕೇಸರಿ ಸ್ಕಾರ್ಫ್ ಧರಿಸಿ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುವ ವರ್ತನೆಯು ಸ್ವೀಕಾರಾರ್ಹವಲ್ಲ, ಅವರು ಹಿಂದೂ ಸಂಸ್ಕೃತಿಯನ್ನು ಅವಮಾನಿಸಿದ್ದಾರೆ” ಎಂದು ಆರ್‌ಎಸ್‌ಎಸ್ ನಾಯಕ ಹೇಳಿದ್ದಾರೆ.
ಹಿಜಾಬ್ ಅಥವಾ ಪರ್ದಾ ಭಾರತೀಯ ಸಂಸ್ಕೃತಿಯ ಭಾಗವಾಗಿದೆ ಮತ್ತು ಹಿಂದೂ ಮಹಿಳೆಯರು ಕೂಡ ಆಯ್ಕೆಯ ಪ್ರಕಾರ ಪರ್ದಾವನ್ನು ಅನುಸರಿಸುತ್ತಾರೆ. ಮತ್ತು ಅದೇ ಷರತ್ತು ಬೀಬಿ ಮುಸ್ಕಾನ್‌ಗೆ ಅನ್ವಯಿಸುತ್ತದೆ” ಎಂದು ಸಿಂಗ್ ಹೇಳಿದ್ದಾರೆ.
ಏತನ್ಮಧ್ಯೆ, ಹಿಜಾಬ್ ಅಥವಾ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಪ್ರವೇಶಿಸಲು ಅನುಮತಿಸುವುದಿಲ್ಲ ಎಂದು ಕರ್ನಾಟಕ ಸರ್ಕಾರ ಸ್ಪಷ್ಟಪಡಿಸಿದೆ.

ಪ್ರಮುಖ ಸುದ್ದಿ :-   ಬೆಂಬಲ ಹಿಂಪಡೆದ ಮೂವರು ಪಕ್ಷೇತರ ಶಾಸಕರು : ಸಂಕಷ್ಟದಲ್ಲಿ ಹರಿಯಾಣದ ಬಿಜೆಪಿ ಸರ್ಕಾರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement