ನಂಬಲಸಾಧ್ಯ ಸಾಹಸ :ಚಲಿಸುವ ರೈಲಿನಡಿಗೆ ಸಿಲುಕಿದ್ದ ಹುಡುಗಿಯ ರಕ್ಷಣೆ ಮಾಡಿದ ವ್ಯಕ್ತಿಗೆ ಪ್ರಶಂಸೆಗಳ ಮಹಾಪೂರ…ದೃಶ್ಯ ವಿಡಿಯೊದಲ್ಲಿ ಸೆರೆ

ಭೋಪಾಲ: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ರೈಲ್ವೆ ಹಳಿ ಮೇಲೆ ಬಿದ್ದಿದ್ದ ಯುವತಿಯನ್ನು ರಕ್ಷಿಸಲು 37 ವರ್ಷದ ವ್ಯಕ್ತಿಯೊಬ್ಬರು ಅಸಾಧಾರಣ ಧೈರ್ಯ ತೋರಿ ಚಲಿಸುವ ಗೂಡ್ಸ್ ರೈಲಿನ ಮುಂದೆ ಹಾರಿ ಅವಳನ್ನು ರಕ್ಷಿಸಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫೆಬ್ರವರಿ 5 ರಂದು ಈ ಘಟನೆ ನಡೆದಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

ಫೆಬ್ರವರಿ 5 ರಂದು ರಾತ್ರಿ 8 ಗಂಟೆ ಸುಮಾರಿಗೆ ಬರ್ಖೇಡಿಯಲ್ಲಿ ಈ ಘಟನೆ ನಡೆದಿದ್ದು, ಕಾರ್ಪೆಂಟರ್ ಆಗಿರುವ ಮೊಹಮ್ಮದ್ ಮೆಹಬೂಬ್ ನಮಾಜ್ ಸಲ್ಲಿಸಿದ ನಂತರ ಘಟನಾ ಸ್ಥಳದ ಬಳಿ ನಡೆದುಕೊಂಡು ಹೋಗುತ್ತಿದ್ದರು.
ಸುಮಾರು 20ರ ಹರೆಯದ ಹುಡುಗಿಯೊಬ್ಬಳು ಬೆನ್ನಿನ ಮೇಲೆ ಹೊರೆ ಹೊತ್ತುಕೊಂಡು ರೈಲ್ವೇ ಹಳಿ ದಾಟುತ್ತಿದ್ದಾಗ ಗೂಡ್ಸ್ ರೈಲು ಬರಲಾರಂಭಿಸಿದೆ. ಇದರಿಂದ ಗಾಬರಿಗೊಂಡ ಈ ಯುವತಿ ಹಳಿಗಳ ಮೇಲೆ ಮುಗ್ಗರಿಸಿ ಬಿದ್ದಿದ್ದಾಳೆ ಮತ್ತು ಅವಳಿಗೆ ತಕ್ಷಣವೇ ರೈಲು ಮಾರ್ಗದಿಂದ ಎದ್ದು ಹೋಗಲು ಸಾಧ್ಯವಾಗಲಿಲ್ಲ.
ನೋಡುಗರು ಭಯಭೀತರಾಗಿ ಕೂಗಲು ಪ್ರಾರಂಭಿಸಿದಾಗ, ಮೆಹಬೂಬ್ ತಕ್ಷಣವೇ ಟ್ರ್ಯಾಕ್ ಮೇಲೆ ಹಾರಿ ಹುಡುಗಿಯ ಬಳಿ ಬಳಿಗೆ ಓಡಿ, ಅವಳನ್ನು ಟ್ರ್ಯಾಕ್ ಬೆಡ್‌ನ ಮಧ್ಯಕ್ಕೆ ಎಳೆದುಕೊಂಉ ಹೋಗಿದ್ದಾರೆ. ಜೊತೆಗೆ ರೈಲು ಅವಳ ಮೇಲೆ ತಾನೂ ಬಿದ್ದು ರೈಲು ಹಾದು ಹೋಗುತ್ತಿದ್ದಾಗ ಆ ಹುಡುಗಿ ತಲೆ ಎತ್ತದಂತೆಗಟ್ಟಿಯಾಗಿ ಒತ್ತಿ ಹಿಡಿದಿದ್ದಾರೆ ಎಂದು ಅವರ ಸ್ನೇಹಿತ ಹಶ್ಮಿ ಹೇಳಿದ್ದಾರೆ.
ರೈಲಿನ ಕನಿಷ್ಠ 28 ವ್ಯಾಗನ್‌ಗಳು ಅವರ ಮೇಲೆ ಹಾದುಹೋಗುವವರೆಗೂ ಜನರು ತಲೆ ಎತ್ತದಂತೆ ಇಬ್ಬರಿಗೂ ಎಚ್ಚರಿಕೆ ನೀಡುತ್ತಿದ್ದರು ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

ಸಾವಿನ ಸಮೀಪದಲ್ಲಿರುವ ಅನುಭವದ ನಂತರ, ಯುವತಿ ಕಣ್ಣೀರು ಹಾಕಿದರು ಮತ್ತು ಆ ಸಮಯದಲ್ಲಿ ತನ್ನೊಂದಿಗೆ ರೈಲ್ವೆ ಹಳಿ ದಾಟದ ತಂದೆ ಮತ್ತು ಸಹೋದರನನ್ನು ತಬ್ಬಿಕೊಂಡರು.ಘಟನೆಯ ವಿಡಿಯೋದಲ್ಲಿ, ಮೆಹಬೂಬ್ ಮಹಿಳೆಯ ತಲೆಯನ್ನು ಕೆಳಕ್ಕೆ ಹಿಡಿದಿರುವುದನ್ನು ನೋಡಬಹುದು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದಂದಿನಿಂದ ಐಶ್‌ಬಾಗ್‌ನ ಅಶೋಕ್ ವಿಹಾರ್ ಬ್ಯಾಂಕ್ ಕಾಲೋನಿಯಲ್ಲಿರುವ ಮೆಹಬೂಬ್ ಮನೆಗೆ ಅಭಿನಂದಿಸಲು ಜನರು ಬರುತ್ತಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement