ಪಾಕಿಸ್ತಾನ:’ದೇವನಿಂದನೆ’ ಆರೋಪದ ಮೇಲೆ ವ್ಯಕ್ತಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ ಗುಂಪು

ಇಸ್ಲಾಮಾಬಾದ್: ಪವಿತ್ರ ಕುರಾನ್‌ನ ಪುಟಗಳನ್ನು ಸುಟ್ಟ ಆರೋಪದ ಮೇಲೆ ಪಾಕಿಸ್ತಾನದ ಪಂಜಾಬ್‌ನ ಖನೇವಾಲ್ ಜಿಲ್ಲೆಯಲ್ಲಿ ಗುಂಪೊಂದು ವ್ಯಕ್ತಿಯೊಬ್ಬನನ್ನು ಚಿತ್ರಹಿಂಸೆ ನೀಡಿ ಕೊಂದು ಹಾಕಿದೆ.
ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪ್ರಕಾರ, ಸ್ಥಳೀಯ ಪೊಲೀಸರು ಕೊಲೆಯಾದ ವ್ಯಕ್ತಿ ಮಿಯಾನ್ ಚುನ್ನುನಲ್ಲಿರುವ ಪೊಲೀಸ್ ಠಾಣೆಗೆ ಹಾಜರಾದ ನಂತರ ಹೊರಹೋಗಲು ಅವಕಾಶ ಮಾಡಿಕೊಟ್ಟರು. ಆಗ ಗುಂಪು ಅದೇ ಸ್ಥಳದಲ್ಲಿ ಇತ್ತು ಎಂದು ವರದಿಯಾಗಿದೆ. ನಂತರ ವ್ಯಕ್ತಿಯನ್ನು ಸಮೀಪದ ಜಾಗಕ್ಕೆ ಎಳೆದೊಯ್ದು ಗುಂಪು ಚಿತ್ರಹಿಂಸೆ ನೀಡಿ ಕೊಂದು ಹಾಕಿದೆ. ಆಗ ಪೊಲೀಸರು ಮೂಕ ಪ್ರೇಕ್ಷಕರಂತೆ ವರ್ತಿಸಿದ್ದಾರೆ ಎಂದು ವರದಿ ಹೇಳಿದೆ.
ಖನೇವಾಲ್ ಪ್ರದೇಶದಲ್ಲಿ ನಡೆದ ದುರಂತ ಘಟನೆಯನ್ನು ಗಮನದಲ್ಲಿಟ್ಟುಕೊಂಡು, ಪಂಜಾಬ್ ಮುಖ್ಯಮಂತ್ರಿ ಉಸ್ಮಾನ್ ಬುಜ್ದಾರ್ ಅವರು ಐಜಿ ಪಂಜಾಬ್ ರಾವ್ ಸರ್ದಾರ್ ಅಲಿ ಖಾನ್ ಅವರಿಂದ ಘಟನೆ ಬಗ್ಗೆ ವರದಿ ಕೇಳಿದ್ದಾರೆ.

ಮುಖ್ಯಮಂತ್ರಿ ಬುಜ್ದಾರ್, “ದುರಂತ ಘಟನೆಯಲ್ಲಿ ಭಾಗಿಯಾಗಿರುವವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಸೂಚಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಕಠೋರ ಘಟನೆಯ ಮೃತವ್ಯಕ್ತಿ ಭಿಕ್ಷುಕನಾಗಿದ್ದು, ಸ್ಥಳೀಯ ಮಸೀದಿಯೊಳಗೆ ಪವಿತ್ರ ಕುರಾನ್‌ನ ಪುಟಗಳನ್ನು ಸುಡಲು ಪ್ರಯತ್ನಿಸುತ್ತಿದ್ದನೆಂದು ಆರೋಪಿಸಲಾಯಿತು. ಆದರೆ ಆತ ಇದನ್ನು ತಾನು ಮಾಡಿಲ್ಲ ಎಂದು ಹೇಳಿದರೂ ಕೇಳದರೆ ಅವನನ್ನು ಗುಂಪು ಕೊಂದುಹಾಕಿದೆ ಎನ್ನಲಾಗಿದೆ.
ಗಮನಿಸಬೇಕಾದ ಸಂಗತಿಯೆಂದರೆ, ಪಾಕಿಸ್ತಾನದಿಂದ ವರದಿಯಾದ ಇತ್ತೀಚಿನ ಘಟನೆಯು ಧರ್ಮ ನಿಂದನೆಯ ಪ್ರಕರಣದಲ್ಲಿ ಈ ರೀತಿಯ ಘಟನೆಗಳು ಪಾಕಿಸ್ತಾನದಲ್ಲಿ ಇದೇ ಮೊದಲೇನಲ್ಲ. ನವೆಂಬರ್ 2021 ರಲ್ಲಿ, ಪವಿತ್ರ ಕುರಾನ್ ಅನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ ಬಂಧಿಸಲ್ಪಟ್ಟ ವ್ಯಕ್ತಿಯನ್ನು ಹಸ್ತಾಂತರಿಸಲು ಅಧಿಕಾರಿಗಳು ನಿರಾಕರಿಸಿದ ನಂತರ ಜನಸಮೂಹವು ಖೈಬರ್-ಪಖ್ತುಂಕ್ವಾದ ಚಾರ್ಸದ್ದಾ ಜಿಲ್ಲೆಯಲ್ಲಿ ಪೊಲೀಸ್ ಠಾಣೆಯನ್ನು ಧ್ವಂಸಗೊಳಿಸಿತು ಮತ್ತು ಅದಕ್ಕೆ ಬೆಂಕಿ ಹಚ್ಚಿತು.
ಆ ಸಮಯದಲ್ಲಿ, ಜನಸಮೂಹವು ಹರಿಚಂದ್ ರಸ್ತೆಯಲ್ಲಿನ ಪೊಲೀಸ್ ಚೆಕ್ ಪೋಸ್ಟ್‌ಗೆ ಬೆಂಕಿ ಹಚ್ಚಿತು ಮತ್ತು ಸಂಚಾರಕ್ಕಾಗಿ ರಸ್ತೆಯನ್ನು ನಿರ್ಬಂಧಿಸಿತು ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಡಿಸೆಂಬರ್ 2021 ರಲ್ಲಿ, ಶ್ರೀಲಂಕಾದ ವ್ಯಕ್ತಿ, ಬಹುರಾಷ್ಟ್ರೀಯ ಕಂಪನಿಯ ಮ್ಯಾನೇಜರ್‌ ಪ್ರಿಯಾಂತಾ ದಿಯವದನಾ ಅವರು ಧರ್ಮ ನಿಂದನೆ ಮಾಡಿದ್ದಾರೆ ಎಂಬ ಆರೋಪಿಸಿ ಅವರಿಗೆ ಚಿತ್ರಹಿಂಸೆ ನೀಡಿ, ಕೊಂದು ನಂತರ ಬೆಂಕಿ ಹಚ್ಚಲಾಯಿತು
3 ಡಿಸೆಂಬರ್ 2021 ರಂದು ಹಿಂಸಾತ್ಮಕ ಜನಸಮೂಹದಿಂದ ಆತನ ಮೇಲೆ ಹಲ್ಲೆ ನಡೆಸಲಾಯಿತು. ನೂರಾರು ಜನರು ಆತನ ಬಟ್ಟೆಗಳನ್ನು ಹರಿದು ಹಿಂಸಾತ್ಮಕವಾಗಿ ಥಳಿಸಿದ ನಂತರ ಅವರು ಸಾವಿಗೀಡಾಗಿದ್ದರು.

ಪ್ರಮುಖ ಸುದ್ದಿ :-   ವೀಡಿಯೊ...| ಇಂಟರ್ನೆಟ್ ನಲ್ಲಿ ಭಾರೀ ಗಮನ ಸೆಳೆದ ರೋಬೋಟ್ ನಾಯಿ ಡ್ಯಾನ್ಸ್‌ ಮಾಡುವ ವೀಡಿಯೊ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement