ನಂಬಲೇಬೇಕು…ವಿಮಾನದೊಳಗೆ ಹಾವು ಪ್ರತ್ಯಕ್ಷ…! ವಿಡಿಯೋ ಇಲ್ಲಿದೆ..

ನವದೆಹಲಿ: ವಿಮಾನದಲ್ಲಿ ಹಾರಾಟ ಮಾಡಲು ಸಾಕಷ್ಟು ಭಯಪಡುವ ಜನರಿದ್ದಾರೆ. ಆದರೆ, ಅಂಥ ವಿಮಾನದಲ್ಲಿ ಜನರು ಭಯ ಪಡುವ ಹಾವು ಕಂಡುಬಂದರೆ..?! ಇದು ನಂಬಲು ಸಾಧ್ಯವೇ..? ಆದರೆ ವಿಮಾನದಲ್ಲಿ ಹಾವಿನ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ ಮತ್ತು ಈ ಕ್ಲಿಪ್ ಅನ್ನು ಹನಾ ಮೊಹ್ಸಿನ್ ಖಾನ್ ಎಂಬ ವಾಣಿಜ್ಯ ಪೈಲಟ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಸಣ್ಣ ಕ್ಲಿಪ್‌ನಲ್ಲಿ, ವಿಮಾನದ ಬೆಳಕಿನ ಪ್ರದೇಶದಲ್ಲಿ ಹಾವು ಸಿಲುಕಿಕೊಂಡಿರುವುದನ್ನು ಕಾಣಬಹುದು. ಏರ್ ಏಷ್ಯಾ ಏರ್‌ಬಸ್ ಎ320-200 ವಿಮಾನವು ಕೌಲಾಲಂಪುರದಿಂದ ಮಲೇಷ್ಯಾದ ತವೌಗೆ ತೆರಳುತ್ತಿತ್ತು. ಆಗ ಈ ಹಾವು ಪ್ರಯಾಣಿಕರ ಲಗೇಜ್‌ನಿಂದ ತಪ್ಪಿಸಿಕೊಂಡಿರಬಹುದು ಅಥವಾ ನೆಲದಿಂದ ವಿಮಾನ ಏರಿರಬಹುದು ಎಂದು ಹೇಳಲಾಗಿದೆ. ಅದು ವಿಮಾನವನ್ನು ಹೊರಳಿಸುವವರೆಗೂ ಹಾವು ಕದಲಲಿಲ್ಲ ಎಂದು ಅವರು ಹನಾ ಮೊಹ್ಸಿನ್ ಖಾನ್ ಹೇಳಿದ್ದಾರೆ.

 

ಪ್ರಮುಖ ಸುದ್ದಿ :-   ವೀಡಿಯೊ...| ಇಂಟರ್ನೆಟ್ ನಲ್ಲಿ ಭಾರೀ ಗಮನ ಸೆಳೆದ ರೋಬೋಟ್ ನಾಯಿ ಡ್ಯಾನ್ಸ್‌ ಮಾಡುವ ವೀಡಿಯೊ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement