ಮೋಡಿಮಾಡುವ ಶಿಲ್ಪಕಲೆ-ವಿನ್ಯಾಸಗಳು: ಅಯೋಧ್ಯಾ ರಾಮಮಂದಿರವು ಪೂರ್ಣಗೊಂಡ ನಂತರ ಅದು ಹೇಗೆ ಕಾಣುತ್ತದೆ- 3D ವಿಡಿಯೊ ಬಿಡುಗಡೆ| ವೀಕ್ಷಿಸಿ

ಅಯೋಧ್ಯೆ: 2023ರ ವೇಳೆಗೆ ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ ಶ್ರೀರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲು ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಮುಂದಿನ ವರ್ಷದಿಂದ ಭಕ್ತರು ರಾಮ ಮಂದಿರದ ದರ್ಶನ ಪಡೆಯಬಹುದು ಎಂದು ತಿಳಿಸಲಾಗಿದೆ. ಅಯೋಧ್ಯೆಯ ರಾಮಮಂದಿರದಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸಬಹುದಾಗಿದೆ. ರಾಮಜನ್ಮಭೂಮಿಯಲ್ಲಿ ಬಹುನಿರೀಕ್ಷೆಯ ಭವ್ಯವಾದ ರಾಮ ಮಂದಿರ ನಿರ್ಮಾಣ ಪೂರ್ಣಗೊಂಡ ನಂತರ ಹೇಗೆ ಕಾಣುತ್ತದೆ ಎಂದು ತಿಳಿಯಲು ಬಯಸುತ್ತಿರುವ ಭಕ್ತರಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ 3D ವಿಡಿಯೊವನ್ನು ಈಗ ಬಿಡುಗಡೆ ಮಾಡಿದೆ.

ವಿಡಿಯೋ ಭವ್ಯವಾದ ರಾಮಮಂದಿರದ ಮಂದಿರದ ಹೊರನೋಟವನ್ನು ತೋರಿಸುವುದರೊಂದಿಗೆ ಆರಂಭವಾಗುತ್ತದೆ. ನಂತರ ರಾಮನ ದೇವಾಲಯಕ್ಕಾಗಿ ಗುರುತಿಸಲಾದ 67 ಎಕರೆ ಭೂಮಿಯ ಪಕ್ಷಿನೋಟವನ್ನು ನೋಡಬಹುದು. ಶ್ರೀರಾಮ ಮಂದಿರದ ಮುಖ್ಯ ದೇವಾಲಯದ ಎಲ್ಲಾ 4 ಕಡೆಗಳಲ್ಲಿ ಚಿಕ್ಕ ದೇವಾಲಯಗಳು ಕೂಡ ಇವೆ. ಈ ರಾಮ ಮಂದಿರದ ಸುತ್ತಲೂ ಹಚ್ಚ ಹಸಿರಿನ ಹುಲ್ಲುಹಾಸುಗಳು ಇರಲಿವೆ. ಒಳಗಿರುವ ಮುಖ್ಯ ದೇವಾಲಯದಲ್ಲಿ ಕಂಬಗಳು ಮತ್ತು ಗೋಡೆಗಳು ಅಮೃತಶಿಲೆಯ ನೆಲಹಾಸು ಮತ್ತು ಮರಳುಗಲ್ಲಿನ ಗೋಡೆಗಳೊಂದಿಗೆ ದೇವರು ಮತ್ತು ದೇವತೆಗಳ ವಿನ್ಯಾಸಗಳನ್ನು ಹೊಂದಿವೆ ಎಂದು ತ್ರೀಡಿ ವಿಡಿಯೋದಲ್ಲಿ ತೋರಿಸಲಾಗಿದೆ.
ಕಳೆದ ವರ್ಷ ಬಿಡುಗಡೆಯಾದ ದೇವಾಲಯದ ಅಂತಿಮ ನೀಲನಕ್ಷೆಯ ಪ್ರಕಾರ, ರಾಮ ಜನ್ಮಭೂಮಿ ಆವರಣದಲ್ಲಿ ವಿವಿಧ ದೇವತೆಗಳ 6 ದೇವಾಲಯಗಳನ್ನು ನಿರ್ಮಿಸಲಿದೆ. ಸೂರ್ಯ, ಗಣೇಶ, ಶಿವ, ದುರ್ಗಾ, ವಿಷ್ಣು ಮತ್ತು ಬ್ರಹ್ಮ ದೇವರ ದೇವಸ್ಥಾನಗಳನ್ನು ನಿರ್ಮಿಸಲಾಗುತ್ತದೆ. ಮಂದಿರದ ನೆಲಮಹಡಿಯಲ್ಲಿ 160 ಅಂಕಣಗಳು, ಮೊದಲ ಮಹಡಿಯಲ್ಲಿ 132 ಅಂಕಣಗಳು ಮತ್ತು ಎರಡನೇ ಮಹಡಿಯಲ್ಲಿ 74 ಅಂಕಣಗಳು ಇರಲಿವೆ. ಈ ದೇವಾಲಯದ ನಿರ್ಮಾಣದಲ್ಲಿ ಉಕ್ಕು ಅಥವಾ ಇಟ್ಟಿಗೆಗಳನ್ನು ಬಳಸಲಾಗುವುದಿಲ್ಲ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ಈ ಹಿಂದೆ ತಿಳಿಸಿತ್ತು. ಮೂರು ಅಂತಸ್ತಿನ ರಚನೆಯು ಐದು ಮಂಟಪಗಳನ್ನು ಹೊಂದಿರುತ್ತದೆ.
110 ಎಕರೆ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣವಾಗಲಿದೆ. ಮಂದಿರ ಸಂಕೀರ್ಣವು ಯಾತ್ರಿಕರ ಅನುಕೂಲ ಕೇಂದ್ರ, ಸಂಶೋಧನಾ ಕೇಂದ್ರ, ಸಭಾಂಗಣ, ವಸ್ತುಸಂಗ್ರಹಾಲಯ, ದಾಖಲೆಗಳು, ಗೋಶಾಲೆ, ಧಾರ್ಮಿಕ ಕ್ರಿಯೆಗಳಿಗೆ ಸ್ಥಳ, ಅರ್ಚಕರಿಗೆ ಕೊಠಡಿಗಳು ಮತ್ತು ಆಡಳಿತ ಕಟ್ಟಡವನ್ನು ಹೊಂದಲು ಯೋಜಿಸಿದೆ. ಮುಖ್ಯ ದೇವಾಲಯದ ನಿರ್ಮಾಣಕ್ಕೆ ರಾಜಸ್ಥಾನದಿಂದ ಸುಮಾರು 4 ಲಕ್ಷ ಅಡಿ ಕಲ್ಲು ಮತ್ತು ಅಮೃತಶಿಲೆಯನ್ನು ತರಿಸಲಾಗುತ್ತಿದೆ.

ಪ್ರಮುಖ ಸುದ್ದಿ :-   "ನನ್ನ 90 ಸೆಕೆಂಡುಗಳ ಭಾಷಣವು ಕಾಂಗ್ರೆಸ್, ಇಂಡಿಯಾ ಮೈತ್ರಿಕೂಟದಲ್ಲಿ ತಲ್ಲಣ ಮೂಡಿಸಿದೆ" : ಪ್ರಧಾನಿ ಮೋದಿ
https://twitter.com/ShriRamTeerth/status/1492857554841395212?ref_src=twsrc%5Etfw%7Ctwcamp%5Etweetembed%7Ctwterm%5E1492857554841395212%7Ctwgr%5E%7Ctwcon%5Es1_&ref_url=https%3A%2F%2Ftv9kannada.com%2Fnational%2Fram-mandir-want-to-know-how-ram-temple-in-ayodhya-will-look-once-it-is-complete-watch-3d-video-sct-337496.html

2021 ರಲ್ಲಿ, ಸ್ವಾಮಿ ವಿವೇಕಾನಂದ ಜಾಗೃತಿ ಸಮಿತಿ ಮತ್ತು ಹನುಮಾನ್ ಗ್ರಾನೈಟ್‌ಗಳು ರಾಮಮಂದಿರ ನಿರ್ಮಾಣಕ್ಕಾಗಿ 10 ಸಾವಿರ ಗ್ರಾನೈಟ್ ಕಲ್ಲಿನ ಕಂಬಗಳನ್ನು ಕಳುಹಿಸಿದವು.2023 ರ ಅಂತ್ಯದ ವೇಳೆಗೆ ರಾಮ್ ಲಲ್ಲಾಗೆ ಪೂಜೆ ಸಲ್ಲಿಸಲು ಭಕ್ತರಿಗೆ ರಾಮ ಮಂದಿರವನ್ನು ತೆರೆಯುವ ನಿರೀಕ್ಷೆಯಿದೆ. ಆದಾಗ್ಯೂ, ಇಡೀ ದೇವಾಲಯದ ಸಂಕೀರ್ಣವು 2025 ರ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದೆ. ಆಗಸ್ಟ್ 5, 2020 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರದ ಅಡಿಪಾಯವನ್ನು ಹಾಕಿದರು. ಫೆಬ್ರವರಿ 5, 2020 ರಂದು, ದೇವಾಲಯದ ನಿರ್ಮಾಣ ಮತ್ತು ನಿರ್ವಹಣೆಗಾಗಿ ಲೋಕಸಭೆಯಲ್ಲಿ ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಚನೆಯನ್ನು ಪ್ರಧಾನಿ ಘೋಷಿಸಿದ್ದರು.
ಮೂಲಗಳ ಪ್ರಕಾರ, ರಾಮಮಂದಿರದ ಗರ್ಭಗುಡಿ ನಿರ್ಮಾಣ ಕಾರ್ಯವು 2023ರ ಡಿಸೆಂಬರ್ ಒಳಗೆ ಪೂರ್ಣಗೊಳ್ಳಲಿದೆ. 2025ರ ವೇಳೆಗೆ ಭವ್ಯ ರಾಮ ಮಂದಿರದ ನಿರ್ಮಾಣ ಕೂಡ ಪೂರ್ಣಗೊಳ್ಳಲಿದೆ. ಮೊದಲ ಮಹಡಿಯಲ್ಲಿ ರಾಮನ ಆಸ್ಥಾನ ಇರುತ್ತದೆ. ಇಲ್ಲಿ ಶ್ರೀರಾಮನ ಜೊತೆಯಲ್ಲಿ ಸೀತಾ ಮಾತೆ ವಿಗ್ರಹ ಕೂಡ ಇರಲಿದೆ. ಒಟ್ಟು
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಮಾರು 1,000 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತದೆ. ರಾಮ ಮಂದಿರ ನಿರ್ಮಾಣದಲ್ಲಿ ಸ್ಟೀಲ್ ಬಳಸುತ್ತಿಲ್ಲ. ದೇವಸ್ಥಾನದಲ್ಲಿ ಉಕ್ಕಿನ ಬದಲು ತಾಮ್ರವನ್ನು ಬಳಸಲಾಗುತ್ತದೆ.

ಪ್ರಮುಖ ಸುದ್ದಿ :-   ಇವರು ಭಾರತದ ಅತ್ಯಂತ ಶ್ರೀಮಂತ ಅಭ್ಯರ್ಥಿ : ತೆಲುಗು ದೇಶಂ ಪಕ್ಷದ ಇವರ ಆಸ್ತಿ 5,785 ಕೋಟಿ ರೂಪಾಯಿ...!

 

3.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement