ಕಾಲೇಜು ಪುನಾರಂಭ: ಹಿಜಾಬ್ ಬಿಕ್ಕಟ್ಟು, ತುಮಕೂರಿನಲ್ಲಿ ಅಲ್ಲಾ ಹೋ ಅಕ್ಬರ್ ಘೋಷಣೆ, ಹುಬ್ಬಳ್ಳಿಯಲ್ಲಿ ಕಾಲೇಜಿಗೆ ರಜೆ

ಬೆಂಗಳೂರು: ಹಿಜಾಬ್ ವಿವಾದದ ನಡುವೆಯೇ ರಾಜ್ಯದಾದ್ಯಂತ ಬುಧವಾರದಿಂದ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ಭೌತಿಕ ತರಗತಿಗಳು ಆರಂಭಗೊಂಡಿದೆ. ಕೆಲವೆಡೆ ಹಿಜಾಬ್ ಸಂಬಂಧ ವಿವಾದ ನಡೆದರೆ ಹಲವೆಡೆ ಶಾಂತಿಯುತವಾಗಿ ವಿದಾರ್ಥಿಗಳು ತರಗತಿಗೆ ತೆರಳಿದ್ದಾರೆ.
ಎಲ್ಲೆಲ್ಲಿ ಏನೇಣು ಆಗಿದೆ ಎಂಬುದರ ಕುರಿತು ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಕಾಲೇಜಿನಲ್ಲಿ ಸಮವಸ್ತ್ರ ಧರಿಸಿ ಬಂದವರಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಹಿಜಾಬ್ ತೆಗೆಯಲು ನಿರಾಕರಿಸಿದವರನ್ನ ಕಾಲೇಜ್ ಸಿಬ್ಬಂದಿ ವಾಪಸ್ ಕಳುಹಿಸಿದ್ದಾರೆ. ಕಾಲೇಜು ಮುಂಭಾಗ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕಾಲೇಜ್ ಮುಂದೆ ಸುಮಾರು 20ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕಾಲೇಜು ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ತುಮಕೂರಿನಲ್ಲಿ ಅಲ್ಲಾ ಹು ಅಕ್ಬರ್ ಘೋಷಣೆ…!
ತುಮಕೂರಿನ ಟೌನ್ ಹಾಲ್ ಬಳಿ ಇರುವ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಸ್ಕೂಲ್ ಮುಂದೆ ವಿದ್ಯಾರ್ಥಿನಿಯರು ಹೈಡ್ರಾಮ ನಡೆಸಿದ್ದಾರೆ. ವಿದ್ಯಾರ್ಥಿಗಳು ಹಿಜಾಬ್‌ ಧರಿಸಿ ಕಾಲೇಜಿಗೆ ಬಂದಿದ್ದಾರೆ. ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ನಿಗದಿಪಡಿಸಿದ ಕೋಣೆಯಲ್ಲಿ ಹಿಜಾಬ್‌ ತೆಗೆದು ತೆಗೆದು ತರಗತಿಗೆ ಬರುವಂತೆ ಶಾಲಾ ಸಿಬ್ಬಂದಿ ಸೂಚಿಸಿದ್ದಾರೆ.. ಈ ವೇಳೆ ನಾವು ಹಿಜಾಬ್ ಧರಿಸಿಯೇ ತರಗತಿಗೆ ಬರುತ್ತೇವೆ ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ. ಸುಮಾರು 30 ವಿದ್ಯಾರ್ಥಿನಿಯರು ಅಲ್ಲಾ ಹು ಅಕ್ಬರ್ ಅಂತ ಘೋಷಣೆ ಕೂಗುತ್ತ ಮುಸ್ಲಿಂ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ. ನಂತರ ಶಾಲೆಯ ಗೇಟ್ ಮುಂದೆ ಪ್ರತಿಭಟನೆ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ರಜೆ ಘೋಷಣೆ
ಹುಬ್ಬಳ್ಳಿಯ ಜಯ ಚಾಮರಾಜೇಂದ್ರ ನಗರದಲ್ಲಿರುವ ಶ್ರೀ ಜಗದ್ಗುರು ಮೂರು ಸಾವಿರ ಮಠ ವಿದ್ಯಾವರ್ಧಕ ಸಂಘದ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಕಳಚಲು ನಿರಾಕರಿಸಿದರು. ‌ಇದರಿಂದ ಗೊಂದಲ‌ ಸೃಷ್ಟಿಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕಾಲೇಜು ಸುತ್ತ 144 ಜಾರಿಗೊಳಿಸಿಲಾಗಿದೆ ಎಂದು ಪೊಲೀಸ್ ಕಮಿಷನರ್ ಲಾಬೂರಾಮ್ ತಿಳಿಸಿದ್ದಾರೆ. ಕಾಲೇಜು ಆಡಳಿತ ಮಂಡಳಿ ರಜೆ ಘೊಷಿಸಿದೆ. ಹೈಕೋರ್ಟ್ ಆದೇಶ ಪಾಲಿಸಿದ್ದೇವೆ ಎಂದು ಪ್ರಾಚಾರ್ಯ ಲಿಂಗರಾಜ್ ಅಂಗಡಿ ತಿಳಿಸಿದ್ದಾರೆ.
ಉನ್ನತ ಶಿಕ್ಷಣ ಇಲಾಖೆ ಜಂಟಿ‌ ನಿರ್ದೇಶಕರ ಸೂಚನೆ ಮೇರೆಗೆ ರಜೆ ನೀಡಲಾಗಿದೆ. ವಿದ್ಯಾರ್ಥಿನಿಯರಿಗೆ ಹಿಜಾಬ್‌ ತೆಗೆದಿರಸಲು ಪ್ರತ್ಯೇಕ ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ‌ ಕೆಲವರು ಪೊಷಕರನ್ನು ಕಾಲೇಜಿಗೆ ಕರೆಯಿಸಿ‌ ವಿನಾಕಾರಣ ಗೊಂದಲ ಸೃಷ್ಟಿಸಿದರು ಎಂದು ಪ್ರಾಚಾರ್ಯ ಡಾ.‌ಅಂಗಡಿ ತಿಳಿಸಿದರು.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

ಬೆಳಗಾವಿಯಲ್ಲಿ ಪ್ರತಿಭಟನೆ…
ಪದವಿ ಪೂರ್ವ ಕಾಲೇಜುಗಳು ಬುಧವಾರದಿಂದ ಆರಂಭಗೊಳ್ಳುತ್ತಿದ್ದಂತೆ ಬೆಳಗಾವಿಯ ಕಾಲೇಜೊಂದರಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದೆ. ನಗರದ ಆರ್ ಎಲ್ ಎಸ್ ಪದವಿ ಪೂರ್ವ ಕಾಲೇಜಿನ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿನೊಳಗೆ ಪ್ರವೇಶಿಸಲು ಯತ್ನಿಸಿದರು‌. ಆದರೆ
ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿನಿಯರನ್ನು ತಡೆದಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯರು ಮತ್ತು ಆಡಳಿತ ಮಂಡಳಿಯವರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ವಿದ್ಯಾರ್ಥಿನಿಯರುಕಾಲೇಜಿನ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕೆಲ ಮುಸ್ಲಿಂ ಸಂಘಟನೆಯವರೂ ಸ್ಥಳಕ್ಕೆ ಬಂದು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

ಬಳ್ಳಾರಿ: ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು
ಬಳ್ಳಾರಿಯ ಸರಳದೇವಿ ಸರಕಾರಿ ಪದವಿ ಕಾಲೇಜಿಗೆ ಹಿಜಾಬ್ ಧರಿಸಿ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಈ ವೇಳೆ ಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶಕ್ಕೆ ನಿರಾಕರಿಸಿದೆ. ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು, ಪೊಲೀಸ್ ಮನವೊಲಿಸಲು ಯತ್ನಿಸಿದರು ಆದರೆ ವಿದ್ಯಾರ್ಥಿನಿಯರು ಪಟ್ಟು ಬಿಡಲಿಲ್ಲ. ಆದರೆ ಆಡಳಿತ ಮಂಡಳಿ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ.

 

ಶಿರಸಿಯಲ್ಲಿ ಹಿಜಾಬ್​ ಅನುಮತಿಗೆ ವಿದ್ಯಾರ್ಥಿನಿಯರ ಬಿಗಿ ಪಟ್ಟು
ಹಿಜಾಬ್ ವಿವಾದ ಹಿನ್ನೆಲೆ ಶಿರಸಿಯಲ್ಲಿ ಕಾಲೇಜಿಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಲಾಗಿದೆ. ಶಿರಸಿಯ ಎಂಇಎಸ್​ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಕಾಲೇಜಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ವೇಳೆ ಪ್ರಾಂಶುಪಾಲರು​ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿದ್ದು ಕೆಲವರು ವಿದ್ಯಾರ್ಥಿನಿಯರಿಂದ ಹಿಜಾಬ್ ತೆಗೆಯಲು ಒಪ್ಪಿ ತರಗತಿಗೆ ಹಾಜರಾಗಿದ್ದಾರೆ. ಹಿಜಾಬ್​ ತೆಗೆಯಲು ಒಪ್ಪದೆ ಕಾಲೇಜಿನಿಂದ 15 ವಿದ್ಯಾರ್ಥಿನಿಯರ ಹೊರ ನಡೆದಿದ್ದಾರೆ.

ವಿದ್ಯಾರ್ಥಿನಿಯರ ಬೆಂಬಲಕ್ಕೆ ಬಂದ ಮಹಿಳಾ ಪೋಷಕರು
ವಿಜಯಪುರ ನಗರದ ಸರ್ಕಾರಿ‌ ಪಿಯು ಹಾಗೂ ಡಿಗ್ರಿ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಕಾಲೇಜು ಒಳಗೆ ಬರಲು ಅವಕಾಶ ನೀಡದ ಕಾರಣ ತರಗತಿ ಹೊರಗಡೆ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿನಿಯರ ಬೆಂಬಲಕ್ಕೆ ಬಂದ ಮಹಿಳಾ ಪೋಷಕರು ನಮ್ಮ ಮಕ್ಕಳಿಗೆ ಹಿಜಾಬ್ ಸಹಿತ ತರಗತಿಗಳಲ್ಲಿ ಹಾಜರಾಗಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಹಿಜಾಬ್ ಎನ್ನುವುದು ನಮ್ಮ ಧಾರ್ಮಿಕ ಹಕ್ಕು. ನಾವು ಇತರರ ಧಾರ್ಮಿಕ ಹಕ್ಕಿಗೆ ಕೂಡ ಗೌರವಿಸುತ್ತೇವೆ. ಶಾಲಾ-ಕಾಲೇಜಿನ ಶಿಕ್ಷಣಕ್ಕೆ ನಮ್ಮ ಮಕ್ಕಳು ಶುಲ್ಕ ಕಟ್ಟಿದ್ದಾರೆ ಎಂದಿದ್ದಾರೆ. ಇನ್ನು ತಾರಕ್ಕೇರಿದ ಪ್ರತಿಭಟನೆ ನಮ್ಮ ದೇಹ ನಮ್ಮ ಹಕ್ಕು, ವಿ ವಾಂಟ ಜಸ್ಟೀಸ್ , ಹಿಜಾಬ್ ಹಮಾರಾ ಹಕ್ ಹೈ ಎಂದು ವಿದ್ಯಾರ್ಥಿನಿಯರು ಘೋಷಣೆ ಕೂಗಿದರು. ಪೊಲೀಸರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

ಉಡುಪಿಯಲ್ಲಿ ತರಗತಿ ಬಹಿಷ್ಕಾರ
ಅಜ್ಜರಕಾಡಿನ ಡಾ.ಜಿ.ಶಂಕರ್ ಮಹಿಳಾ‌ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಧರಿಸದೆ ತರಗತಿ‌ ಪ್ರವೇಶಕ್ಕೆ ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಕ್ಕೂ ಅಧಿಕ‌ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿದರು. ಉಡುಪಿ‌ ಬಾಲಕಿಯರ ಸರಕಾರಿ ಪ.ಪೂ.ಕಾಲೇಜಿನಲ್ಲಿ ಹಿಜಾಬ್ ಪರ ಹೋರಾಟ ನಿರತ ಆರು ಮಂದಿ ವಿದ್ಯಾರ್ಥಿನಿಯರು ಬುಧವಾರ ಕಾಲೇಜಿಗೆ ಹಾಜರಾಗಿಲ್ಲ. ಉಳಿದೆಡೆ ಸಾಮಾನ್ಯವಾಗಿ ಎಲ್ಲರೂ ಕಾಲೇಜಿಗೆ ಆಗಮಿಸಿದ್ದಾರೆ.

ಆಡಳಿತ ಮಂಡಳಿ-ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ
ಚಿಕ್ಕಮಗಳೂರು ನಗರದ ಮೌಂಟೇನ್ ವ್ಯೂ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶಕ್ಕೆ ನಿರ್ಬಂಧಿಸಲಾಯಿತು. ಈ ವೇಳೆ ಆಡಳಿತ ಮಂಡಳಿ ಜೊತೆ ವಿದ್ಯಾರ್ಥಿಗಳು ವಾಗ್ವಾದ ನಡೆಸಿದರು. ತರಗತಿ ಬೇಡ, ಕ್ಯಾಂಪಸ್ ಒಳಗೆ ಬಿಡುವಂತೆ ವಿದ್ಯಾರ್ಥಿನಿಯರು ಒತ್ತಾಯ ಮಾಡಿದ್ದಾರೆ. ಆದರೆ ಆಡಳಿತ ಮಂಡಳಿ ಅನುಮತಿ ನಿರಾಕರಿಸಿದೆ. ಹೀಗಾಗಿ 30ಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾಲೇಜಿನಿಂದ ಹೊರ ನಡೆದಿದ್ದಾರೆ.

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement