ಬೀಗ ಹಾಕಿದ ಒಂದೇ ಕೋಣೆಯಲ್ಲಿ ಚಿರತೆಯೊಂದಿಗೆ ಎರಡು ತಾಸು ಕಳೆದ 15 ವರ್ಷದ ಬಾಲಕಿ…!

15 ವರ್ಷದ ರೇಣು ಮಾಝಿ, ಸಾವಿನ ದವಡೆಯಿಂದ ತನ್ನನ್ನು ತಾನು ಹೇಗೆ ರಕ್ಷಿಸಿಕೊಂಡಳು ಎಂಬ ತನ್ನ ಕಥೆಯನ್ನು ಹೇಳುತ್ತಾ ಕಣ್ಣೀರಿಟ್ಟಿದ್ದಾಳೆ. ಆದರೆ ಫೆಬ್ರವರಿ 14 ರ ಭಯಾನಕ ಘಟನೆ ನೆನಪಿಸಿಕೊಂಡ ಅವಳು, ಆಗ ಅಳುವುದರಿಂದ ಖಂಡಿತವಾಗಿಯೂ ಸಾವು ಸಂಭವಿಸುತ್ತದೆ ಎಂದು ತನಗೆ ಅಳಲು ಸಹ ಸಾಧ್ಯವಾಗಲಿಲ್ಲ ಎಂದು ಚಿರತೆಯೊಂದಿಗೆ ಒಂದೇ ರೂಮಿನಲ್ಲಿ ತಾನು ಕಳೆದ ಎರಡು ಗಂಟೆಗಳ ಭಯಾನಕ ಘಟನೆ ನೆನಪಿಸಿಕೊಂಡಿದ್ದಾಳೆ.
ಫೆಬ್ರವರಿ 14 ರಂದು ಬೆಳಿಗ್ಗೆ ಬೋರ್ದುಬಿ ಗಾಂವ್‌ ಒಳಗೆ ಬಂದು ಸುತ್ತಾಡುತ್ತಿದ್ದ ಚಿರತೆ ನೋಡಲು ಇಡೀ ಗ್ರಾಮವೇ ಸೇರಿತ್ತು. ನಾವು ಚಿರತೆಯನ್ನು ನೋಡಲು ಹೊರಬಂದೆವು. ಸುಮಾರು 10 ಗಂಟೆಗೆ ಚಿರತೆ ನಮ್ಮ ಬಳಿ ಕಾಣಿಸಿಕೊಂಡಾಗ ನಾವು ಹೆದರಿ ಮನೆಯೊಳಗೆ ಹೋದೆವು. ನಮ್ಮಲ್ಲಿ ಯಾರೂ ಚಿರತೆಯನ್ನು ಅಷ್ಟು ಹತ್ತಿರದಿಂದ ನೋಡದ ಕಾರಣ ಅದು ಭಯದ ಕ್ಷಣವಾಗಿತ್ತು. ಹಿರಿಯರು ನಮಗೆ ಮನೆಯೊಳಗೆ ಹೋಗುವಂತೆ ಕೂಗಿದರು. ಮನೆಯ ಮೂರು ಕೋಣೆಗಳಲ್ಲಿ ಒಂದಕ್ಕೆ ನಾವು ನುಗ್ಗಿದೆವು. ಚಿಕ್ಕ ಕೋಣೆಯಲ್ಲಿ ನಾವು ಏಳು ಮಂದಿ ಇದ್ದೆವು. ಆದರೆ ಇದ್ದಕ್ಕಿದ್ದಂತೆ ಚಿರತೆ ಸಹ ನಮ್ಮ ಕೋಣೆಗೆ ನುಗ್ಗಿ ಬಿಟ್ಟಿತು. ಎಲ್ಲರೂ ಅಲ್ಲಿಂದ ಓಡಿ ಹೋಗಲು ಯಶಸ್ವಿಯಾದರು. ಆದರೆ ನಾನು ಹೋಗಬೇಕು ಅನ್ನುವರಷ್ಟಲ್ಲಿ ಯಾರೋ ಹೊರಗಿನಿಂದ ಬಾಗಿಲು ಮುಚ್ಚಿದರು. ಹೀಗಾಗಿ ನಾನು ಕೋನೆಯಲ್ಲಿ ಚಿರತೆ ಜೊತೆ ಸಿಕ್ಕಿಬಿದ್ದೆ ಎಂದು ಅವಳು ಭಯಾನಕ ಘಟನೆಯನ್ನು ರೇಣು ಮಾಝಿ ನ್ಯೂಸ್ 18 ಮುಂದೆ ಘಟನೆ ನೆನಪಿಸಿಕೊಂಡಿದ್ದಾಳೆ.
ಚಿರತೆ ಒಳಗೆ ಇತ್ತು ಮತ್ತು ನಾನು ಹೊರಗೆ ಓಡಿ ಹೋಗಲು ಬಾಗಿಲು ಹಾಕಲಾಗಿತ್ತು. ನಾನು ಒಳಗಿದ್ದೇನೆ ಎಂದು ಕೂಗಬೇಕೆಂದರೂ ನಾನು ಕೂಗಿಕೊಂಡರೆ ಅದರ ಚಿರತೆ ಗಮನ ನನ್ನೆಡೆಗೆ ಬರುತ್ತಿತ್ತು. ಹೀಗಾಗಿ ನಾನು ಅಲ್ಮೆರಾ ಪಕ್ಕದಲ್ಲಿ ಸೂಟ್‌ಕೇಸ್‌ನ ಹಿಂದೆ ಅಡಗಿಕೊಂಡೆ. ಚಿರತೆ ಅದೇ ಕೋಣೆಯಲ್ಲಿ ಹಾಸಿಗೆಯ ಮೇಲೆ ಇತ್ತು. ನಾನು ಸಹ ತಮ್ಮಂತೆ ಹೊರಗಿದ್ದೇನೆ ಎಂದೇ ನನ್ನ ಸ್ನೇಹಿತರು ಭಾವಿಸಿದ್ದರು. ನನ್ನ ಬಳಿ ಮೊಬೈಲ್ ಫೋನ್ ಇದ್ದರೂ ಕರೆ ಮಾಡಲು ಸಾಧ್ಯವಾಗಲಿಲ್ಲ. ನಾನು ನಡುಗುತ್ತಿದ್ದೆ, ನನಗೆ ಹೆದರಿಕೆಯಿಂದ ಬಾಯಾರಿಕೆಯಾಗುತ್ತಿತ್ತು, ಚಿರತೆ ನನ್ನ ಉಪಸ್ಥಿತಿಯನ್ನು ಗಮನಿಸಲಿಲ್ಲ. ಮನೆಯಲ್ಲಿ ಇನ್ನೂ ಎರಡು ಕೋಣೆಗಳಿದ್ದವು ಆದರೆ ಅವುಗಳಿಗೆ ಬೀಗ ಹಾಕಲಾಗಿತ್ತು. ಹೊರಗಿನಿಂದ ಕೂಗುತ್ತಲೇ ಇದ್ದರು. ನಾನು ಅವರಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ, ಆ ಕ್ಷಣದಲ್ಲಿ ನನ್ನ ಸ್ನೇಹಿತರೊಬ್ಬರು ನನ್ನ ಫೋನ್‌ ಮಾಡಿದರು. ನಾನು ಚಿರತೆಯೊಂದಿಗೆ ಒಂದೇ ರೂಮಿನಲ್ಲಿ ಬಂಧಿಸಲ್ಪಟ್ಟಿದ್ದೇನೆ ಎಂದು ಅವರಿಗೆ ಪಿಸು ಮಾತಿನಲ್ಲಿ ಹೇಳಿದೆ ಮತ್ತು ಗ್ರಾಮಸ್ಥರಿಗೆ ತುರ್ತಾಗಿ ತಿಳಿಸುವಂತೆ ಕೇಳಿದೆ. ಇದು ನನ್ನ ಕೊನೆಯ ಭರವಸೆಯಾಗಿತ್ತು. ಸ್ವಲ್ಪ ಸಮಯದ ನಂತರ ಜನರು ಕೋಣೆಯ ಮೇಲ್ಛಾವಣಿಯನ್ನು ತೆಗೆದು ನನ್ನ ಕಡೆಗೆ ಏಣಿಯಿಂದ ಇಳಿಯುವುದನ್ನು ನಾನು ನೋಡಿದೆ. ಅವರು ಏಣಿ ಹಿಡಿದುಕೊಳ್ಳುವಂತೆ ನನಗೆ ಹೇಳುತ್ತಿದ್ದರು, ಆದರೆ ನಾನು ಹಾಗೆ ಮಾಡಲು ಸಾಧ್ಯವಿರಲಿಲ್ಲ. ಆದರೂ ನಾನು ಧೈರ್ಯವನ್ನು ಒಟ್ಟುಗೂಡಿಸಿ ಏಣಿಯ ಹಿಡಿದುಕೊಂಡೆ. ಆ ಕ್ಷಣದಲ್ಲಿ ಚಿರತೆ ನನ್ನನ್ನು ದಿಟ್ಟಿಸಿ ನೋಡಿತು ಮತ್ತು ನಾನು ಅದರತ್ತ ತಿರುಗಿ ನೋಡತೊಡಗಿದೆ. ಆದರೆ ಅಷ್ಟರಲ್ಲಿ ನಾನು ಪಾರಾಗಿದ್ದೆ ಎಂದು ರೇಣು ವಿವರಿಸಿದ್ದಾರೆ.
ಮಧ್ಯರಾತ್ರಿಯ ಸುಮಾರಿಗೆ ಕೋಣೆಯೊಳಗಿದ್ದ ಚಿರತೆಯನ್ನು ಸಮಾಧಾನಪಡಿಸಲು ಅರಣ್ಯ ಇಲಾಖೆ ಪ್ರಯಾಸ ಪಡಬೇಕಾಯಿತು. ನಂತರ ಚಿರತೆಯನ್ನು ಹಿಡಿದು ಬೋನಿನೊಳಗೆ ಸ್ಥಳಾಂತರಿಸಲಾಯಿತು.
ಉತ್ತರ ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ದೇಖಿಯಾಜುಲಿಯ ಸೊಲ್ಮರಿ ಪ್ರದೇಶದಲ್ಲಿ ಚಿರತೆ ಐದು ಗ್ರಾಮಸ್ಥರನ್ನು ಗಾಯಗೊಳಿಸಿತ್ತು.
ಅಲ್ಮೇರಾ ಮತ್ತು ಸೂಟ್‌ಕೇಸ್ ಜೊತೆಗೆ, ರೇಣು ಚಿರತೆ ಎದುರಿಸಿದರು. ಚಿರತೆಗಳು ಮೂಲತಃ ಪ್ರಾಣಿಗಳನ್ನು ಹೊತ್ತುಕೊಂಡ ಹೋಗುವ ಪ್ರಾಣಿಯಾಗಿದ್ದು, ಹುಲಿಗಳು ಬೇಟೆ ಮಾಡುತ್ತವೆ. ಇಲ್ಲಿ ಚಿರತೆಯೂ ಭಯಭೀತವಾಗಿತ್ತು. ಧೈರ್ಯ ತೋರಿಸಿ ಚಿರತೆಯನ್ನು ಎದುರಿಸಿದ ಬಾಲಕಿಯ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಪಶ್ಚಿಮ ಅಸ್ಸಾಂ ವನ್ಯಜೀವಿ ವಿಭಾಗೀಯ ಅರಣ್ಯಾಧಿಕಾರಿ ಪ್ರಾಂಜಲ್ ಶರ್ಮಾ ಹೇಳಿದ್ದಾರೆ.

ಓದಿರಿ :-   ಇಂಧನ ದರ ಇಳಿಕೆ ಮಾಡಿದ ಮೋದಿ ಸರ್ಕಾರ; ಅಮೆರಿಕ ಒತ್ತಡಕ್ಕೆ ಮಣಿಯದ ಭಾರತವನ್ನು ಹೊಗಳಿದ ಇಮ್ರಾನ್ ಖಾನ್...!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ