ಮರಿಯೊಂದಿಗೆ ಸೀದಾ ಮದುವೆ ಮಂಟಪಕ್ಕೇ ನುಗ್ಗಿದ ಕರಡಿ..ದೃಶ್ಯ ವಿಡಿಯೊದಲ್ಲಿ ಸೆರೆ

ಕಾಡು ಪ್ರಾಣಿಗಳು ವಸತಿ ಪ್ರದೇಶಗಳಿಗೆ ಬರುವುದು ಈಗ ಸಮಾನ್ಯ ಎಂಬಂತಾಗಿದೆ. ಈಗ ಇಂಥದ್ದೇ ಘಟನೆಯೊಂದರಲ್ಲಿ ಛತ್ತೀಸ್‌ಗಢದ ಕಂಕೇರ್‌ನಲ್ಲಿ ನಡೆದ ಮದುವೆಯ ಆರತಕ್ಷತೆ ಪಾರ್ಟಿಗೆ ಕರಡಿಯೊಂದರ (Bear) ಕುಟುಂಬ ದಿಢೀರ್‌ ಆಗಮಿಸಿದೆ..

ಈ ವಿಡಿಯೊದಲ್ಲಿ ತಾಯಿ ಕರಡಿ ಮತ್ತು ಅದರ ಮರಿ ಮದುವೆ ಮನೆಗೆ ಆಗಮಿಸಿ ವೇದಿಕೆಯ ಮೇಲೆ ಅಡ್ಡಾಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಕರಡಿ ಮಾಡುವ ಕೆಲಸವೆಂದರೆ ಮುಖ್ಯ ವೇದಿಕೆಯ ಕಡೆಗೆ ಹೋಗಿ ಹಿಂತಿರುಗುತ್ತದೆ. ಅದೃಷ್ಟವಶಾತ್, ಕರಡಿ ಮತ್ತು ಅದರ ಮರಿಗಳು ಒಳಗೆ ಪ್ರವೇಶಿಸಿದ ಸಮಯದಲ್ಲಿ ಅತಿಥಿಗಳು ಯಾರೊಬ್ಬರೂ ಗಾಯಗೊಂಡಿಲ್ಲ. ಸ್ಥಳದಲ್ಲಿದ್ದ ಕೆಲಸಗಾರ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ.
ಕೊನೆಗೆ ಕರಡಿಗಳ ಕುಟುಂಬವು ಯಾವುದೇ ಹಾನಿ ಮಾಡದೆ ಮದುವೆ ಮನೆಯಿಂದ ನಿರ್ಗಮಿಸಿವೆ. ಈ ವಿಡಿಯೋವನ್ನು  ಅಲೋಕ ಪುತುಲ್‌ ಎಂಬವರು ಟ್ವೀಟರ್​ನಲ್ಲಿ ಹಂಚಿಕೊಂಡಿದ್ದಾರೆ.

advertisement

ನಿಮ್ಮ ಕಾಮೆಂಟ್ ಬರೆಯಿರಿ